•  
  •  
  •  
  •  
Index   ವಚನ - 371    Search  
 
ಭಕ್ತನ ಭಕ್ತಸ್ಥಲ - ಪ್ರಯತ್ನ
ಕಂಡರೆ ಮನೋಹರವಯ್ಯಾ, ಕಾಣದಿದ್ದರೆ ಅವಸ್ಥೆ! ನೋಡಯ್ಯಾ! ಹಗಲಿರುಳಹುದು, ಇರುಳು ಹಗಲಹುದು! ಎಂತಯ್ಯಾ! ಆಳವಾಡಿ ಕಳೆವೆನು? ಒಂದು ಜುಗ ಮೇಲೆ ಕೆಡೆದಂತೆ! ಕೂಡಲಸಂಗನ ಶರಣರನಗಲುವ ದಾವತಿಯಿಂದ ಮರಣವೇ ಲೇಸು ಕಂಡಯ್ಯಾ.
Transliteration Kaṇḍare manōharavayya, kāṇadiddare avasthe! Nōḍayya! Hagaliruḷahudu, iruḷu hagalahudu! Entayyā! Āḷavāḍi kaḷevenu? Ondu jugada mēle keḍedante! Kūḍalasaṅgana śaraṇaranagaluva dāvatiyinda maraṇavē lēsu kaṇḍayya.
Manuscript
English Translation 2 To see them is My heart's delight; And doomsday when I do not see! Behold! day follows night, Night follows day: How, Lord, can I spend my days In uttering humility? It is as if I had to bear The burden of an age Rather than grieve For parting from Kūḍala Saṅga's Śaraṇās Look, Lord, I welcome death! Translated by: L M A Menezes, S M Angadi
Hindi Translation दीखने पर सुख है, न दीखने पर दुःख , दिन रात होता है, रात दिन होता है, कैसे अपने को धिक्कारता समय बिताऊँ? एक युग मुझ पर पडा सा है, कूडलसंग के शरणों के वियोग-जन्य संकट की अपेक्षा मरण ही अच्छा है ॥ Translated by: Banakara K Gowdappa
Telugu Translation చూడమదికి సొంపగునయ్యా చూడకున్న శోకమయ్యా పగలు రాత్రియగు రాత్రి పగలగునుగాని యీ యనద బ్రతుకు నా కెట్లయ్యా? యుగమే దొర్లినట్లుండె; సంగని శరణుల వియోగ వ్యధకంటె మరణమే మేలయ్యా! Translated by: Dr. Badala Ramaiah
Marathi Translation दिसले तर मनोहर देवा, न दिसले तर अस्वस्थता पहा देवा ! रात्रीचा दिवस झाला, दिवसाची रात्र झाली ! असा दिवस-रात्र कसा घालवू ? एक युगच अंगावर पडल्याप्रमाणे झाले ! कूडलसंगमदेवाच्या शरणांच्या वियोग दुःखापेक्षा मरण बरे देवा. Translated by Shalini Sreeshaila Doddamani
ಶಬ್ದಾರ್ಥಗಳು ಅವಸ್ಥೆ = ಸ್ಥಿತಿ; ಆಳವಾಡಿ = ; ಜಂಗ = ; ಧಾವತಿ = ; ಮನೋಪರ = ; ಲೇಸು = ;
ಕನ್ನಡ ವ್ಯಾಖ್ಯಾನ ಶರಣರನ್ನು ಕಂಡರೆಷ್ಟು ಮನ ಹಿಗ್ಗುವುದೋ-ಕಾಣದಿದ್ದರಷ್ಟೂ ಕುಗ್ಗುವುದು. ಆ ವಿಕಳಾವಸ್ಥೆಯನ್ನು ತಾಳುವುದು ನನ್ನಿಂದಾಗದು ಶರಣರನ್ನು ಕಾಣದಿದ್ದರೆ-ಆ ಹಗಲೆಲ್ಲಾ ಮೋಡಗತ್ತಲೆ ಮುಸುಕಿದಂತೆ-ನನ್ನ ಬುದ್ಧಿಗೆ ಮಂಕು ಕವಿದು ಅದು ಕಾಳರಾತ್ರಿಯಾದಂತೆನಿಸುವುದು. ಶರಣರನ್ನು ಕಾಣದಿದ್ದರೆ-ರಾತ್ರಿಯೆಲ್ಲಾ ನಿದ್ರೆ ಹತ್ತದೆ ಹಗಲಂತಾಗುವುದು-ತಾಪವನ್ನು ತಾಳಲಾಗುವುದಿಲ್ಲ. ಘಾಸಿಗೊಳಗಾಗಿ ನಾನು ಹೇಗೆ ತಾನೇ ಕಾಲ ತಳ್ಳುವೆನು ? ಒಂದೊಂದು ದಿನವೂ ಯುಗಯುಗಾಂತರವೆನಿಸುವುದು ! ಈ ರೀತಿ ಧಾವತಿ ಪಡುವುದಕ್ಕಿಂತ ನನಗೆ ಸಾಯುವುದೇ ಸುಖಕರವೆನಿಸುವುದು ಎಂದು ಬಸವಣ್ಣನವರು ಶರಣರನ್ನು ಕಾಣದೆ ಒಪ್ಪೊತ್ತೂ ಜೀವಿಸುವುದು ತಮ್ಮಿಂದ ಸಾಧ್ಯವಿಲ್ಲವೆನ್ನುತ್ತಿರುವರು. ಭಕ್ತನೇತಾರರಾದ ಶರಣರ ಮೂಲಕ ಬಸವಣ್ಣನವರು ಮಾಡಬೇಕಾಗಿದ್ದ ಕಾರ್ಯ ಅಪಾರವಿದ್ದಾಗ-ಆ ಶರಣರು ಬರದಿದ್ದರೆ-ಬಸವಣ್ಣನವರಿಗೆ ಜೀವನ ಎಷ್ಟು ದುರ್ಭರವಾಗುತ್ತಿತ್ತೆಂಬುದನ್ನು ಊಹಿಸುವುದು ಸುಲಭವಲ್ಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು

C-427 

  Sat 13 Jan 2024  

 ನನಗೆ ಈ ಭಾವರ್ತದ ಅರ್ಥ ಬೇಕಾಗಿದೆ ದಯಾಳುಗಳ ತಾವುಗಳು ದಯವಿಟ್ಟು ಭಾವಾರ್ಥ ಬರೆದು ಕಳಿಸಿದರೆ ತುಂಬಾ ಸಹಾಯವಾಗುತ್ತದೆ
  ರವೀಂದ್ರಕುಮಾರ ಭಂಟನಳ್ಳಿ
????????