•  
  •  
  •  
  •  
Index   ವಚನ - 372    Search  
 
ಭಕ್ತನ ಭಕ್ತಸ್ಥಲ - ಶರಣರ ಸಂಗ
ಅಂಗೈ ತಿಂದುದೆನ್ನ, ಕಂಗಳು ಕೆತ್ತಿಹುವಯ್ಯಾ: ಬಂದಹರಯ್ಯಾ ಪುರಾತರೆನ್ನ ಮನೆಗೆ, ಬಂದಹರಯ್ಯಾ ಶರಣರೆನ್ನ ಮನೆಗೆ! ಕಂಡ ಕನಸು ದಿಟವಾಗಿ ಜಂಗಮ ಮನೆಗೆ ಬಂದರೆ, ಶಿವಾರ್ಚನೆಯ ಮಾಡಿಸುವೆ, ಕೂಡಲಸಂಗಮದೇವಾ, ನಿಮ್ಮ ಮುಂದೆ.
Transliteration Aṅgai tindudenna, kaṅgaḷu kettihuvayya: Bandaharayyā purātarenna manege, bandaharayyā śaraṇarenna manege! Kaṇḍa kanasu diṭavāgi jaṅgama manege bandare, śivārcaneya māḍuve, kūḍalasaṅgamadēvā, nim'ma munde.
Manuscript
English Translation 2 My palm is itching and my eyes are throbbing: Surely the Pionners Are coming to my house! The Śaraṇās are coming to my house; Now that the dream I dreamed Is realised And Jaṅgama is coming to my house, I will arrange he worship Śiva Before Thee, Lord Kūḍala Saṅgama. Translated by: L M A Menezes, S M Angadi
Hindi Translation मेरे करतल में सुरसुरी है, नेत्रों में स्पंदन है, आयेंगे पुरातन पुरुष मेरे घर, आयेंगे शरण जन मेरे घर, स्वप्न में दृष्ट जंगम सचमुच आ जाय, तो शिवार्चन कराऊँगा तव समक्ष कूडलसंगमदेव ॥ Translated by: Banakara K Gowdappa
Telugu Translation అరచేయి నసమయ్యె అదరుచుండె కన్నులు వత్తురయ్యా పురాతనులు నా యింటికి వత్తురయ్యా శరణులు నా యింటికి కన్నకల నిజమై జంగముడిరటికి రాగ శివార్చనము సేయింతు; నీ ముందు కూడల సంగమదేవా! Translated by: Dr. Badala Ramaiah
Marathi Translation तळहात खाजवितो, डोळे फडफडत आहेत. येतील पुरातन माझ्या घरी, येतील शरण माझ्या घरी. स्वप्न खरे होऊन जंगम माझ्या घरी आले तर इष्टलिंगार्चन करवितो कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಅರ್ಚನೆ = ಪೂಜೆ; ಕಂಗಳು = ; ಜಂಗಮ = ; ದಿಟ = ; ಪುರಾತರು = ;
ಕನ್ನಡ ವ್ಯಾಖ್ಯಾನ ಜಂಗಮರು ಶಿವಶರಣರನ್ನು ಕೂಡಿಕೊಂಡು ಮನೆಗೆ ಬಂದಂತೆ ಬಸವಣ್ಣನವರಿಗೆ ಕನಸು ಬಿದ್ದಿದೆ. ಆ ಕನಸು ದಿಟವಾದರೆ ಸಾಕೆಂದು ಬೆಳಗಾಗುತ್ತಲೇ ಸಡಗರಿಸುತ್ತಿದ್ದಾರೆ. ಆ ಸಮಯಕ್ಕೇ ಶುಭಸೂಚನೆಯಾಗಿ ಬಸವಣ್ಣನವರಿಗೆ ಅಂಗೈ ನವೆಯಾಗುತ್ತದೆ, ಕಣ್ಣು ಅದರುತ್ತದೆ. ಮನೆಗೆ ಜಂಗಮರು ಶರಣರೊಡಗೂಡಿ ಬಂದೇ ಬರುವರೆಂಬ ವಿಶ್ವಾಸ ಬಲವಾಗುತ್ತದೆ. ಆದರೆ ಮನೆಯಲ್ಲಿ ತೊಡಗಿದ ಹಬ್ಬದ ಸಜ್ಜು ಸಂಭ್ರಮಗಳ ನಡುವೆಯೇ-“ಬಾರದೇ ಹೋದರೆ ಗತಿ”ಯೇನೆಂದು ಬಸವಣ್ಣನವರು ಅಳುಕುತ್ತ-ಬಂದೇ ಬರುವರೆಂದು ಮರಳಿ ಭರವಸೆಗೊಳ್ಳುತ್ತ-ಬಂದರೆ ಅವರಿಗೆಲ್ಲ ಶಿವಪೂಜೆ ಮಾಡಿಸುವೆನೆಂದು ತುದಿಬೆರಳ ಮೇಲೆ ನಿಂತಿರುವರು. (ತಿನ್ : ನವೆಯಾಗು, ತಿನ್-ತಿಂದಪುದು>ತಿಂದಹುದು : ನವೆಯಾಗುವುದು. ಕೆತ್ತು : ಅದಿರು, ಕಂಪಿಸು. ಬಂದಪ್ಪರ್>ಬಂದಹರು : ಬರುವರು.) ಬಸವಣ್ಣನವರು ಕಂಡ ಈ ಕನಸು ಅವರ ಸ್ವಭಾವಕ್ಕೆ ಸದೃಶ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು