•  
  •  
  •  
  •  
Index   ವಚನ - 373    Search  
 
ಭಕ್ತನ ಭಕ್ತಸ್ಥಲ - ವಿನಮ್ರತೆ
ಲಿಂಗವ ಪೂಜಿಸುತ್ತ ಜಂಗಮದ ಮುಖವ ನೋಡುತ್ತಿಪ್ಪ ಸುಖವ ಕೊಡು, ಕಂಡಾ, ಲಿಂಗವೇ- ಪರಮಸುಖವ ಕೊಡು, ಕಂಡಾ, ಲಿಂಗವೇ- ಕೂಡಲಸಂಗಮದೇವಾ, ಇದೇ ವರವ ನಿಮ್ಮಲ್ಲಿ ಬೇಡುವೆ.
Transliteration Liṅgava pūjisutta jaṅgamada mukhava nōḍuttippa sukhava koḍu, kaṇḍa, liṅgavē- paramasukhava koḍu, kaṇḍa, liṅgavē- kūḍalasaṅgamadēvā, ide varava nim'malli bēḍuve.
Manuscript
English Translation 2 Look, Liṅga , grant me the joy Of seeing the Jaṅgama 's face Even as I worship Liṅga ! Come, give me the supreme bliss: I beg of Thee this only gift, O Kūḍala Saṅgama Lord! Translated by: L M A Menezes, S M Angadi
Hindi Translation लिंग पूजा करता हुआ जंगम मुख देखने का सुख दो लिंगदेव । परमसुख प्रदान करो लिंगप्रभो । कूडलसंगमदेव, यही वर तुमसे माँगता हूँ ॥ Translated by: Banakara K Gowdappa
Telugu Translation లింగార్చనము సేయుచు జంగమ ముఖము చూచునట్టి సుఖ మొసగుమయ్యా శివా! పరసుఖ మొసగుమయ్యా పరమశివా! సంగమదేవా ఇదేవరము నీకడ కోరుచుంటి Translated by: Dr. Badala Ramaiah
Marathi Translation लिंग पूजा करीत, जंगम दर्शन करावे, सुख दे लिंगदेवा, परम सुख दे लिंगदेवा. कूडलसंगमदेवा, हाच वर तुम्हाला मागतो. Translated by Shalini Sreeshaila Doddamani
ಶಬ್ದಾರ್ಥಗಳು ಜಂಗಮ = ; ಪರಮಸುಖ = ;
ಕನ್ನಡ ವ್ಯಾಖ್ಯಾನ ಜಂಗಮಕ್ಕೆ ಅಮಿತಪ್ರಾಶಸ್ತ್ಯವನ್ನು ಕೊಟ್ಟಿರುವ ಬಸವಣ್ಣನವರಿಗೆ-ಲಿಂಗಪೂಜೆಯೊಂದನ್ನೇ ಮಾಡಿದರೆ ಸಾಲದು. ಆ ಲಿಂಗದ ಜೀವಂತರೂಪವಾದ ಜಂಗಮಕ್ಕೆ ಸತ್ಕಾರವನ್ನೂ ಮಾಡುತ್ತಿರಬೇಕು. ಆ ಜಂಗಮ ದಾಸೋಹದಿಂದಲೇ ಲಿಂಗಪೂಜೆ ಸಾಂಗವಾಗುವುದು. ಲಿಂಗವ ಪೂಜಿಸುತ್ತ ಜಂಗಮದ ಮುಖವ ನೋಡುವ ಸುಖವ ಕೊಡು-ಎಂದು ಬಸವಣ್ಣನವರು ದೇವರನ್ನು ಪ್ರಾರ್ಥಿಸುತ್ತಿರುವುದು ಈ ಅರ್ಥದಲ್ಲೇ. ಲಿಂಗವನ್ನು ಪೂಜಿಸುವುದು ಸುಖವಾದರೆ ಜಂಗಮವನ್ನು ಸತ್ಕರಿಸುವುದು ಪರಮಸುಖ ಬಸವಣ್ಣನವರಿಗೆ, ಮಿಕ್ಕವರಿಗೆ ಪರಮಸುಖವೆಂದರೆ ಕೈವಲ್ಯ, ನಿರ್ವಾಣ, ಮುಕ್ತಿ ಇತ್ಯಾದಿ ಇತ್ಯಾದಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು