ಭಕ್ತನ ಭಕ್ತಸ್ಥಲ - ನಿರಹಂಕಾರ
ಮನೆದೈವ, ಕುಲದೈವ ಎನಗೆ ನಿಮ್ಮವರಯ್ಯಾ!
ತನು ಮೀಸಲು, ಮನ ಮೀಸಲು, ನಯನ ಮೀಸಲು ಎನ್ನಾ,
ಕೂಡಲಸಂಗಮದೇವಾ, ನಿಮ್ಮ ಶರಣರಿಗೆ.
Transliteration Manedaiva, kuladaiva enage nim'mavarayya!
Tanu mīsalu, mana mīsalu, nayana mīsalu ennā,
kūḍalasaṅgamadēvā, nim'ma śaraṇarige.
Manuscript
English Translation 2 Thine own are, Lord, to me
My household and my family gods!
To Thy Śaraṇās, O Kūḍala Saṅgama Lord,
My body, mind and eyes
Are dedicate!
Translated by: L M A Menezes, S M Angadi
Hindi Translation गृह-देवता, कुलदेवता, मेरेलिए तुम्हारे भवदीय हैं ।
मेरा तन, मन, एवं नयन
तव शरणों के लिए मनौती है कूडलसंगमदेव ॥
Translated by: Banakara K Gowdappa
Telugu Translation ఇలవేల్పు కుల వేల్పు
నాకు నీవారే అయ్యా
తనువు; మనసు; కనులు
ముడుపు పెట్టితి నీ శరణులకయ్యా
కూడల సంగయ్య:
Translated by: Dr. Badala Ramaiah
Marathi Translation
गृहदेवता कुलदेवता माझे आपले शरण आहेत देवा.
तन अर्पित, मन अर्पित, नयन अर्पित माझे.
कूडलसंगमदेवा तुमच्या शरणांना सर्वांग अर्पित.
Translated by Shalini Sreeshaila Doddamani
ಶಬ್ದಾರ್ಥಗಳು ತನು = ; ದೈವ = ; ನಯನ = ; ಮೀಸಲು = ;
ಕನ್ನಡ ವ್ಯಾಖ್ಯಾನ ನಮ್ಮ ಮನೆಯಲ್ಲಿ ಪೂಜಿಸುವ ದೇವರು ವೀರಭದ್ರನಿರಬಹುದು, ನಮ್ಮ ಕುಲದವರೆಲ್ಲರೂ ಪೂಜಿಸುವುದು ಭೀಮೇಶ್ವರನಾಗಿರಬಹುದು, ಹೀಗೆ ಮನೆಗೊಂದು ದೇವರು ಬಂಧುಬಳಗ ಸೇರಿದ ಕುಲದವರಿಗೆಲ್ಲ ಮತ್ತೊಂದು ದೇವರು. ಇದು ಸಂಪ್ರದಾಯ. ಬಸವಣ್ಣನವರಿಗಾದರೋ ಮನೆದೇವರೂ ಕುಲದೇವರೂ ಶರಣರಲ್ಲದೆ ಬೇರೆಯಿಲ್ಲ. ಅವರಿಗೆ ಏಕೈಕದೇವರು ಆ ಶರಣರೇ. ಅವರ ಸೇವೆಗೆ ತನು ಮೀಸಲು, ಧ್ಯಾನಕ್ಕೆ ಮನ ಮೀಸಲು, ಸಂಯೋಗಕ್ಕೆ ದೃಷ್ಟಿ ಮೀಸಲು.
ಎಲ್ಲ ದೈವವನ್ನೂ ಬಿಟ್ಟು ಶರಣರನ್ನೇ ಪೂಜಿಸಬೇಕೆಂಬುದು ಬಸವಣ್ಣನವರ ತಾತ್ಪರ್ಯವಲ್ಲ. ಶರಣರಿಗೆ ಮಾಡುವ ಪರಿಚರ್ಯೆಯಿಂದ ಎಲ್ಲ ದೇವತೆಗಳ ಪೂಜೆಯೂ ಸಫಲವಾಗುವುದೆಂಬುದೇ ಅವರ ಅಭಿಪ್ರಾಯ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು