•  
  •  
  •  
  •  
Index   ವಚನ - 375    Search  
 
ಭಕ್ತನ ಭಕ್ತಸ್ಥಲ - ಶರಣರು
ಗಿಳಿಯ ಹಂಜರವಿಕ್ಕಿ, ಸೊಡರಿಂಗೆಣ್ಣೆಯನೆರೆದು, ಬತ್ತಿಯನಿಕ್ಕಿ ಬರವ ಹಾರುತ್ತಿದ್ದೆನೆಲಗವ್ವಾ. ತರಗೆಲೆ ಗಿರಕೆಂದಡೆ ಹೊರಗನಾಲಿಸುವೆ: ಅಗಲಿದೆನೆಂದೆನ್ನ ಮನ ಧಿಗಿಲೆಂದಿತ್ತೆಲೆಗವ್ವಾ! ಕೂಡಲಸಂಗನ ಶರಣರು ಬಂದು, ಬಾಗಿಲ ಮುಂದೆ ನಿಂದು `ಶಿವಾ' ಎಂದರೆ, ಸಂತೋಷಪಟ್ಟೆನೆಲಗವ್ವಾ!
Transliteration Giḷiya han̄jaravikki, soḍariṅgeṇṇeyaneredu, battiyanikki barava hāruttittunelagavvā. Taragele girikendaḍe horaganālisuve: Agalidenendenna mana dhigilendittelegavvā! Kūḍalasaṅgana śaraṇaru bandu, bāgila munde nindu `śiva' endare, santōṣapaṭṭenelagavvā!
Manuscript
English Translation 2 I hang the parrot-cage, I pour the oil Into the lamp, I trim the wick, As I await their coming, O my Mother! If a dry leaf crackles, I prick my ears: My heart has been both sick and cold Because they've been away, O Mother! When Kūḍala Saṅg's Śaraṇās come And, standing at the door, say 'Sivá', I shall rejoice, O Mother! Translated by: L M A Menezes, S M Angadi
Hindi Translation शुक-पंजर लटकाये, दीप में तेल डाले बत्ती उकसाकर मैं प्रतीक्षा करती हूँ, माँ; सूखे पत्ते चरमराये, तो मैं बाहर कान लगाती हूँ । वियोग से मेरा मन विकल है माँ; कूडलसंग के शरण द्वार पर खडे, ‘शिव’ कहें तो मैं संतुष्ट हो जाऊँगी माँ! Translated by: Banakara K Gowdappa
Telugu Translation చిలుకను పంజరమునందిడి దీపమునకు నూనెపోసి వత్తినొ త్తి యెదురెదురు చూచుచుంటినమ్మా! ఎండుటాకులు గలగలమన బయలుచూచితి ఎడబాటు కల్గునోయని ఎద దిగులయ్యెనమ్మా కూడల సంగని శరణులు వచ్చి వాకిటముందు నిల్చి ‘‘శివా’’ యన మది తృప్తి కల్గునమ్మా ! Translated by: Dr. Badala Ramaiah
Marathi Translation पोपटाचा पिंजरा ठेवून, दिव्यात तेल वात घालून, वाट मी पहात आहे आई. पानाच्या सळसळीच्या आवाजाने कान टवकारतो. परत गेले समजून मनात धुकधुक होते आहे आई. कूडलसंगमाचे शरण दरवाज्यात येऊन `शिवा` म्हणाले तर मी आनंदी झालो आई. Translated by Shalini Sreeshaila Doddamani
ಶಬ್ದಾರ್ಥಗಳು ಎರೆ = ; ಗಿರಿ = ಬೆಟ್ಟ; ತರಗಲೆ = ; ದಿಗಿಲು = ; ಬರವ = ; ಸೊಡರು = ; ಹಂಜರ = ;
ಕನ್ನಡ ವ್ಯಾಖ್ಯಾನ ಹಿಂದಿನ ಕಾಲಕ್ಕೆ-ಮನೆಗಳಲ್ಲಿ ಗಿಳಿಸಾಕಿ ಮಾತು ಕಲಿಸಿ ಪಂಜರದಲ್ಲಿಟ್ಟು ತಲಬಾಗಿಲಲ್ಲಿ ಕಟ್ಟುತ್ತಿದ್ದರು. ಆ ಗಿಳಿ ಮನೆಗೆ ಬಂದವರ ಸುದ್ದಿಯನ್ನು ಸಾರುತ್ತಿದ್ದವು. ಬಸವಣ್ಣನವರ ಮನೆಯ ಮುಂದೆಯೂ ಅಂಥ ಗಿಳಿಯ ಪಂಜರ ಕಟ್ಟಿದೆ. ದೀಪದ ತುಂಬ ಎಣ್ಣೆಯನ್ನು ಸುರಿದು ಹೊಸ ಬತ್ತಿಯನ್ನು ಚಾಚಿ-ಅದೆಷ್ಟು ಹೊತ್ತಾದರೂ ಉರಿಯುವಂತೆ ಮಾಡಿದೆ. ಇತ್ತ ಬಸವಣ್ಣನವರು ಬರುವೆನೆಂಬ ಶರಣರಿಗಾಗಿ ಕಾದು ಕುಳಿತಿದ್ದಾರೆ. ಮನೆಯ ಹೊರಾವರಣದಲ್ಲಿ ತರಗೆಲೆಯೊಂದು ಸರಕೆಂದರೂ ಸಾಕು ಓಡಿ ಬಂದು-ಆ ಸಪ್ಪುಳವೆತ್ತಕಡೆಯಿಂದ ಬಂದಿತೆಂದಾಲಿಸುತ್ತ ನಿಲ್ಲುತ್ತಾರೆ. ಆ ಶರಣರು ಬಂದುಹೋದರೇನೋ ಎನಿಸಿ ಬಸವಣ್ಣನವರ ಎದೆಧಸಕೆನ್ನುತ್ತದೆ. ಆ ಮರುಘಳಿಗೆಯೇ ಶರಣರು ಬಂದು ಬಾಗಿಲ ಮುಂದೆ ನಿಂತು ಅವರು ಉಚ್ಚರಿಸಿದ ಶಿವಶಿವಾ ಎಂಬ ಶಬ್ದ ಕೇಳಿಸಿ ಬಸವಣ್ಣನವರಿಗೆ ಸಂತೋಷವಾಗುತ್ತದೆ. ಆ ಸಂತೋಷ ಗಿಳಿಯ ಕಂಠದಲ್ಲಿ ಇನಿದನಿಯಾಗಿತ್ತು, ದೀಪದ ಕುಡಿಯಲ್ಲಿ ಚೆಂಬೆಳಕಾಗಿತ್ತು. ಬಸವಣ್ಣನವರ ಈ ದಿವ್ಯ ವಿರಹದ ಒಂದು ಚಿತ್ರ ಈ ವಚನದಲ್ಲಿದೆ. ವಿ : ಹಂಜರ < ಪಂಜರ, ಸೊಡರು : ಹಣತೆ, ಹಾರು : ಎದುರು ನೋಡು. ಎಲೆಗವ್ವ : ಎಲೆತಾಯೆ. ಈ ವಚನವನ್ನು ಬಸವಣ್ಣನವರು ತಮ್ಮ(ಮನವೆಂಬ)ಸಖಿಗೆ ಹೇಳುತ್ತಿರುವರೆನ್ನಬಹುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು