ಅಡವಿಯಲೊಬ್ಬ ಕಡು ನೀರಡಿಸಿ,
ಎಡೆಯಲ್ಲಿ ನೀರಕಂಡಂತಾಯಿತ್ತಯ್ಯಾ!
ಕುರುಡ ಕಣ್ಣ ಪಡೆದಂತೆ,
ಬಡವ ನಿಧಾನವ ಕಂಡಂತಾಯಿತ್ತಯ್ಯಾ!
ನಮ್ಮ ಕೂಡಲಸಂಗನ ಶರಣರ ಬರವೆನ್ನ ಪ್ರಾಣ, ಕಂಡಯ್ಯಾ!
Transliteration Aḍaviyalobba kaḍu nīraḍisi,
edeyalli nīrakaṇḍantāyittayyā!
Kuruḍa kaṇṇu paḍedante,
baḍava nidhānava kaṇḍantāyittayyā!
Nam'ma kūḍalasaṅgana śaraṇara baravenna prāṇa, kaṇḍayya!
Manuscript
English Translation 2 Like one who, parched with thirst
When walking in a wood,
Discovers, close at hand,
A water-spring, O Lord!
Like a blind man who finds
His eyesight, Lord!
Like begger coming upon a trove,
The coming of the Śaraṇās
Of Kūḍala Saṅgama gives me life!
Translated by: L M A Menezes, S M Angadi
Hindi Translation वन में एक अधिक तृषित् के
पास ही पानी देखने के समान,
अंधे को दृष्टि मिलने के समान,
निर्धन के धन की निधि देखने के समान,
देखो कूडलसंग के शरणों का आगमन मेरे प्राण है ॥
Translated by: Banakara K Gowdappa
Telugu Translation అడవియం దొకడు దప్పితో తిరుగుచు
ఎదుటనే నీరు చూచినట్లయ్యె నయ్యా
గ్రుడ్డివానికి చూపు వచ్చినట్లు
పేద పెన్నిధి చూచినట్లు
కూడల సంగని శరణులరాక
ప్రాణము వచ్చినట్ల య్యెనయ్యా నాకు
Translated by: Dr. Badala Ramaiah
Marathi Translation
जंगलात एका तहानलेल्यांस जवळच
पाणी दिसल्यासम झाले.
आंधळ्याला दृष्टी मिळाल्यासम झाले,
निर्धनीला ठेचकाळता निधी मिळाल्यासम झाले.
आमच्या कूडलसंगाचे शरण येणार म्हणून
गेलेले प्राण परत आल्यासम झाले.
Translated by Shalini Sreeshaila Doddamani
ಶಬ್ದಾರ್ಥಗಳು ಎಡೆ = ; ಕಡು = ; ನಿಧಾನ = ; ಹಡೆ = ;
ಕನ್ನಡ ವ್ಯಾಖ್ಯಾನ ನಿರೀಕ್ಷಿಸಿದ ಶರಣರು ಬಂದು ಬಸವಣ್ಣನವರ ಕಣ್ಣಿಗೆ ಬಿದ್ದಾಗ (ಅಥವಾ ಕಣ್ಮುಂದೆ ನಿಂತಾಗ)-ಅವರಿಗೆ-ಅರಣ್ಯದಲ್ಲಿ ನಡೆದು ನಡೆದು ಬಾಯಾರಿ ನೀರೆಲ್ಲೂ ಸಿಗದೆ ಕುಸಿದು ಬೀಳುವಂತಾದಾಗ ಅಲ್ಲೇ ನೀರನ್ನು ಕಂಡಂತಾಗುವುದು, ಹೋದ ದೃಷ್ಟಿ ಮರಳಿ ಬಂದಂತಾಗುವುದು. ಬಡತನ ಬಂದಾಗ ನಿಕ್ಷೇಪ ಸಿಕ್ಕಿದಂತಾಗುವುದು. ಶರಣರು ಬಂದರೆಂದರೆ ಬಸವಣ್ಣನವರಿಗೆ ಹೀಗಾಗುವುದರಲ್ಲಿ ಆಶ್ಚರ್ಯವೇನೂ ಇಲ್ಲ-ಅವರಿಗೆ ಶರಣರು ಬಂದರೆಂದರೆ ಪ್ರಾಣವೇ ಬಂದಂತಾಗುವುದು. (ಕಡು ನೀರಡಸಿ : ಬಹಳ ಬಾಯಾರಿ, ಎಡೆಯಲ್ಲಿ : ನಡುವೆ, ಮಧ್ಯೆ).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು