ಇಂದೆನ್ನ ಮನೆಗೆ ಪ್ರಮಥರು ಬಂದಹರೆಂದು
ಗುಡಿ ತೋರಣವ ಕಟ್ಟಿ, ಷಡುಸಮ್ಮಾರ್ಜನೆಯ ಮಾಡಿ,
ರಂಗವಾಲಿಯನಿಕ್ಕಿ `ಉಘೇ, ಚಾಂಗು, ಭಲಾ' ಎಂಬೆ;
ತಮ್ಮ ಒಕ್ಕುದನಿಕ್ಕಿ ಸಲಹುವರಾಗಿ. ಕೂಡಲಸಂಗನ ಶರಣರು
Transliteration Indenna manege pramatharu bandaharendu
guḍi tōraṇava kaṭṭi, ṣaḍusam'mārjaneya māḍi,
raṅgavāliyanikki `ughē, cāṅgu, bhalā' embe;
tam'ma okkudanikki salahuvarāgi. Kūḍalasaṅgana śaraṇaru
Manuscript
English Translation 2 Hoping the Śaraṇās will come today
Unto my homes
I tie up streamers and festoons,
Perform the sixfold cleaning up, and draw
The patterns on the floor,
And cry Huzza! hurrah; because
Kūḍala Saṅga's Śaraṇās nourish me
With what's left over from the sacrifice.
Translated by: L M A Menezes, S M Angadi
Hindi Translation आज प्रमथ मेरे घर पधारेंगे-यह जान
ध्वज-तोरण बाँध षड्सम्मार्जन करता हूँ,
रंगोलि सजाकर जय जयकार करता हूँ,
क्योंकि कूडलसंग के शरण
निज भक्तावशेष देकर मेरी रक्षा करते हैं ॥
Translated by: Banakara K Gowdappa
Telugu Translation నేడు నా యింటికి ప్రభువులు వత్తురని
మంగళతోరణములుగట్టి
మదిపొంగ సమ్మార్జనముచేసి
ముంగిట ముగ్గులు పెట్టి
ఉమే! చాంగు! బళా! యందు
సంగని శరణులు ప్రసాదమిచ్చి తనుపుదురయ్యా
Translated by: Dr. Badala Ramaiah
Marathi Translation
आज माझ्या घरी प्रमथ येणार म्हणूनी गुढी-तोरण बांधतो.
सडा-संमार्जन करुनी रांगोळी घालतो. `
उदे चांगभला` म्हणतो. कूडलसंगाचे शरण
आपला शेषप्रसाद देवून रक्षण करतील.
Translated by Shalini Sreeshaila Doddamani
ಶಬ್ದಾರ್ಥಗಳು ಒಕ್ಕುದ = ; ಚಾಂಗು = ; ತೋರಣ = ; ಪ್ರಮಥರು = ; ಸಮ್ಮಾರ್ಜನೆ = ; ಸಲಹು = ;
ಕನ್ನಡ ವ್ಯಾಖ್ಯಾನ ಶರಣರು ಬರುವರೆಂದರೆ ಯಾಕೆ ಬಸವಣ್ಣನವರಿಗಿಷ್ಟು ಗೆಲುವು ? ಚಪ್ಪರ ಹಾಕಿಸಿ, ತೋರಣಕಟ್ಟಿಸಿ-ಗುಡಿಸಿ ಸಾರಿಸಿ ರಂಗೋಲೆ ಬಿಡಿಸಿ ಮನೆಯನ್ನೆಲ್ಲ ಸಿಂಗಾರ ಮಾಡುವರೇಕೆ ? ಉಘೇ ಚಾಂಗು ಭಲಾ ಎಂದು ಘೋಷಿಸುವರೇಕೆ ? ಆ ಶರಣರು ಉಂಡುಬಿಟ್ಟುದನ್ನು ತಮಗೆ ಉಣಿಸಿ ವಾತ್ಸಲ್ಯದಿಂದ ಸಲಹುವರೆಂದು !
ಪ್ರಮಥರು : ಪುರಾತರು, ಶರಣರು. ಷಡುಸಂಮಾರ್ಜನೆ : ಗೋವಿನ ಸಗಣಿ ಗೋರೋಚನ ಗಂಜಲ ಮುಂತಾದ ಶುದ್ಧೀಕರಣ ಸಾಮಾಗ್ರಿಗಳು. ಉಘೇ : ಉಘೇ-ಘೇ ಎಂದರೆ ಬಾ ಸ್ವೀಕರಿಸೆಂದು. ಉಧೋದೊಡನೆ ಹೋಲಿಸಿ. ಈ ಉಘೇ ಮತ್ತು ಉಧೋಗಳ ಮೊದಲಿಗಿರುವ ಉಕಾರವು ಉಚ್ಚಾರಣ ಸೌಲಭ್ಯಕ್ಕಾಗಿ ಸೇರಿಕೊಂಡ ಸ್ವರಗಳು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು