•  
  •  
  •  
  •  
Index   ವಚನ - 378    Search  
 
ಭಕ್ತನ ಭಕ್ತಸ್ಥಲ - ಶರಣರು
ಸಾಸವೆಯ ಮೇಲೆ ಸಾಗರವರಿದಂತಾಯಿತ್ತಯ್ಯಾ; ಆನಂದದಿಂದ ನಲಿನಲಿದಾಡುವೆ. ಆನಂದದಿಂದ ಕುಣಿಕುಣಿದಾಡುವೆ: ಕೂಡಲಸಂಗನ ಶರಣರು ಬಂದರೆ, ಉಬ್ಬಿ, ಕೊಬ್ಬಿ, ಹರುಷದಲೋಲಾಡುವೆ!
Transliteration ಸಸಿಯ ಮೇಲೆ ಸಾಗರವರಿದಂತಾಯಿತ್ತಯ್ಯಾ; ಆನಂದದಿಂದ ನಲಿನಲಿದಾಡುವೆ. ಆನಂದದಿಂದ ಕುಣಿಕುಣಿದಾಡುವೆ: ಕೂಡಲಸಂಗನ ಶರಣರು ಬಂದರೆ, ಉಬ್ಬಿ, ಕೊಬ್ಬಿ, ಹರುಷದಲೋಲಾಡುವೆ!
Manuscript
English Translation 2 It's like the ocean rushing over a mustard seed; I sing and gambol with delight, I leap and dance in glee: When Kūḍala Saṅga's Śaraṇās come, I swell and puff, ay, roll with joy! Translated by: L M A Menezes, S M Angadi
Hindi Translation सस्य पर सागर प्रवाहित सा हुआ आनंद से आमोद-प्रमोद करता हूँ आनंद से नाचता हूँ, कूडलसंग के शरणों के आने पर हर्ष से फूल कर झूमता हूँ ॥ Translated by: Banakara K Gowdappa
Telugu Translation ఆవగింజ పై అంభోధి పడినట్లయ్యెనయ్యా ఆనందములో నెగిరెగిరి ఆడితి ఆనందములో నెగిరెగిరి పాడితి ఉప్పొంగి హర్షాబ్ధిలో నాడితి సంగని శరణులు వత్తురన Translated by: Dr. Badala Ramaiah
Marathi Translation चंद्रला पाहून सागरला भरती आल्या प्रमाणे, आनंदाने बागडतो, आनंदाने नाचतो. कूडलसंगाचे शरण आले तर उमलून-फुगुन जातो, आनंदात बागडता Translated by Shalini Sreeshaila Doddamani
ಶಬ್ದಾರ್ಥಗಳು ಕೊಬ್ಬಿ = ; ಹರುಷ = ;
ಕನ್ನಡ ವ್ಯಾಖ್ಯಾನ ಸಾಸಿವೆಯ ಮೇಲೆ ಸಮುದ್ರ ನುಗ್ಗಿದರೆ-ಆ ಸಾಸಿವೆ ಸಮುದ್ರದಲ್ಲಿ ಲೀನವಾಗಿ ತೇಲಿ ಹೋಗುವಂತೆ-ಮನೆಗೆ ಶರಣರು ಬಂದರೆ ಲೀನವಾಗಿ ಓಲಾಡುವೆನೆನ್ನುತ್ತ-ಬಸವಣ್ಣನವರು ಆ ಶರಣರ ಆಗಮನದ ವಾರ್ತೆ ಓಘವಾಗಿ ತಮ್ಮ ಮೇಲೆ ನುಗ್ಗಲೆಂದು ಹಾರೈಸುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು