ಮನ ಮನ ಬೆರಸಿದಲ್ಲಿ ತನು ಕರಗದಿದ್ದರೆ,
ಸೋಂಕಿನಲ್ಲಿ ಪುಳಕಂಗಳು ಹೊರಹೊಮ್ಮದಿದ್ದರೆ,
ಕಂಡಾಗಳಶ್ರುಜಲಂಗಳು ಸುರಿಯದಿದ್ದರೆ,
ನುಡಿವಲ್ಲಿ ಗದ್ಗದಂಗಳು ಹೊರಹೊಮ್ಮದಿದ್ದರೆ-
ಕೂಡಲಸಂಗಮದೇವರ ಭಕ್ತಿಗಿದು ಚಿಹ್ನವೆ?,-
ಎನ್ನಲ್ಲಿವಿಲ್ಲವಾಗಿ, ಆನು ಡಂಭಕ ಕಾಣಿರೇ!
Transliteration Mana mana berasidalli tanu karagadiddare,
sōṅkinalli puḷakagaḷu illadiddare,
kaṇḍāgaḷaśrujalaṅgaḷu suriyadiddare,
nuḍivalli gadgadaṅgaḷu illadiddare-
kūḍalasaṅgamadēvara bhaktigidu cihna,-
ennallivillavāgi, ānu ḍambaka kāṇirē!
Manuscript
English Translation 2 Unless the body melt
When heart with heart doth blend;
Unless hairs stand on end
Even as a touch is felt;
Unless tears begin to flow
When eyes meet eyes;
When sobs begin to rise
With each word spoken...
But alas! not one token
Of love is seen in me
For Kūḍala Saṅgama: behold
My rank hypocrisy!
Translated by: L M A Menezes, S M Angadi
Hindi Translation मन मन से मिले पर तन न गले,
स्पर्श से पुलकित न हो,
दर्शन से अश्रु-जल न बरसे,
बोलते हुए गद्गद न हो,
तो कूडलसंगमदेव के प्रति
भक्ति का यह लक्षण है?
मुझमें ये नहीं हैं, मैं दंभी हूँ॥
Translated by: Banakara K Gowdappa
Telugu Translation మనసు మనసున చేర తనువు తరుగకున్న
స్పర్శలో పులకలు పుట్టకున్న
చూపులో అశ్రుజలములు రాలకున్న
పలుకులో గద్గదస్వనము కలుగకున్న
ఈ భక్తి చిహ్నలు నాయెడ లేకున్న
దేవా : డాంబికుడ నేనయ్యా
Translated by: Dr. Badala Ramaiah
Marathi Translation
मनात मन मिसळता देहभान हरपणार नसेल तर,
स्पर्शाने पुलकीत होणार नसेल तर,
पाहून आनंदाश्रू ओघळणार नसेल तर,
वाणी गद्गदून येणार नसेल तर,
कूडलसंगमदेवाच्या भक्तांची ही काय लक्षणे आहेत?
माझ्यात ही लक्षणे नसल्याने मी दांभिक आहे पहा.
Translated by Shalini Sreeshaila Doddamani
ಶಬ್ದಾರ್ಥಗಳು ಅಶ್ರು = ಕಣ್ಣೀರು; ಗದ್ಗದ = ; ಚಿಹ್ನ = ; ಡಂಬಕ = ; ತನು = ; ಪುಳಕ = ; ಸೋಂಕು = ;
ಕನ್ನಡ ವ್ಯಾಖ್ಯಾನ ಶಿವಭಕ್ತಿಯ ದಿವ್ಯ ಸ್ಥಿತಿ ಎಲ್ಲರಿಗೂ ಸಾಮಾನ್ಯವೆ ? ಶರಣರ ಪಾದ ಮುಟ್ಟಿದಾಗ ಮೈತುಂಬ ಬುರಬುರನೆ ರೋಮಾಂಚನವಾಗದಿದ್ದರೆ, ಅವರ ಮಂಗಳಮೂರ್ತಿಯನ್ನು ಕಂಡು ಆನಂದಬಾಷ್ಪ ಕಣ್ಣಿಂದ ಒರೆತು ಕೆನ್ನೆಗುಂಟ ಸುರಿಯದಿದ್ದರೆ, ಅವರೊಡನೆ ಸಲ್ಲಪಿಸುವಾಗ ಮಾತುಮಾತಿಗೆ ಕಂಠ ಬಿಗಿದು ಗದ್ಗದ ಸ್ವರ ಹೊಮ್ಮದಿದ್ದರೆ ಅದು ಭಕ್ತಿಯೆ ? ನಮಗೊಂದು ಪ್ರತ್ಯೇಕ ತನುವಿದೆಯೆಂಬ ಭಾವ ಕರಗಿಹೋಗಿ-ನಮ್ಮಮನ ಆ ಶರಣರ ಮನ ಒಂದಾಗಿ ಲೀನವಾಗದಿದ್ದರದು ಭಕ್ತಿಯೇ ? ಎನ್ನುತ್ತ ಈ ಯಾವ ಸಾತ್ವಿಕಭಾವತೀವ್ರತೆಯೂ ತಮ್ಮಲ್ಲಿಲ್ಲವೆನ್ನುವ ನೆಪದಲ್ಲಿ-ಬಸವಣ್ಣನವರು ನಮಗೆ ಭಕ್ತಿಚಿಹ್ನೆಗಳನ್ನು ಕುರಿತು ಬೋಧಿಸುತ್ತಿರುವರು.
ನಾಟಕದಲ್ಲಿ ಈ ಸಾತ್ವಿಕಭಾವಗಳು ಅಭಿನಯಕೌಶಲ್ಯದಿಂದ ಸಾಧ್ಯವಾಗುವುದಾದರೆ-ಧರ್ಮಜೀವನದಲ್ಲಿ ಇವು ಭಕ್ತನಿಗೆ ಸಹಜವೇ ಆಗಿರುವವು. ಯಾವನಾದರೊಬ್ಬನು ತನಗೆ ಭಕ್ತಿಯಳವಟ್ಟಿದೆಯೇ ಇಲ್ಲವೇ ಎಂಬುದನ್ನು ಹೀಗೆ ಸುಲಭವಾಗಿ ಗುರುತಿಸಿಕೊಳ್ಳಬಹುದು. ಇಲ್ಲವೆನ್ನುವುದಾದರೆ ಡಂಬಾಚಾರ ಮಾಡಬಾರದು-ಶರಣರ ಸಹವಾಸದಲ್ಲಿದ್ದು ಭಕ್ತಿಯನ್ನು ಬೆಳೆಸಿಕೊಳ್ಳಬೇಕು.
ಇಲ್ಲಿಂದ ಮುಂದಿನ ಆರು ವಚನಗಳಲ್ಲಿ ಜಂಗಮದಾಸೋಹಸಹಿತವಾದ ಲಿಂಗಪೂಜಾಪ್ರಾಶಸ್ತ್ರ್ಯವನ್ನು ಹೇಳಿದೆ. ಮುಖ್ಯವಾಗಿ 404ನೇ ವಚನದವರೆಗೆ ಜಂಗಮಪ್ರಾಶಸ್ತ್ಯವನ್ನೇ ಕುರಿತಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು