•  
  •  
  •  
  •  
Index   ವಚನ - 380    Search  
 
ಭಕ್ತನ ಭಕ್ತಸ್ಥಲ - ಭಕ್ತ
ಅಷ್ಟವಿಧಾರ್ಚನೆ ಷೋಡಶೋಪಚಾರವನು- ಅರಸರಿಯದ ಬಿಟ್ಟಿಯ-ಮಾಡುವೆನು! ಎನ್ನ ತಾಗಿದ ಸುಖವ ಜಂಗಮಕ್ಕರ್ಪಿಸಲರಿಯದ ಉಪಚಾರಿಯಾನು, ಸ್ಥಾವರ ಜಂಗಮವರಿಯದ ಪೂಜಕ ನಾನು: ಮತ್ತೆ ನಾಚದೆ, ಕೂಡಲಸಂಗಮದೇವಯ್ಯಾ, ಜಂಗಮವೆನ್ನ ಪ್ರಾಣಲಿಂಗವೆಂಬೆನು!
Transliteration Aṣṭavidhārcane ṣōḍaśōpacāravanu- arasariyada biṭṭiya-māḍuvenu! Enna tāgida sukhava jaṅgamakkarpisalariyada upacāriyānu, sthāvara jaṅgamavariyada pūjāka nānu: Matte nācade, kūḍalasaṅgamadēvayya, jaṅgamavenna prāṇaliṅgavembenu!
Manuscript
English Translation 2 An eightfold worship I perform, And service sixteenfold- As one who labours for no wage Without the knowledge of the King. A formalist am I, Who have not known To dedicate to Jaṅgama My whole experienced joy. I am a worshipper Who does not know The difference between The Liṅga and the Jaṅgama And yet, imposter that I am, I do not blush to claim Jaṅgama as my Prāṇaliṅga. O Kūḍala Saṅgama Lord! Translated by: L M A Menezes, S M Angadi
Hindi Translation अष्टविधार्चन, षोडशोपचार करता हूँ राजा से अविदित बेगार की भाँति । अपना प्राप्त सुख जंगम को अर्पित करने से अनभिज्ञ औपचारिक हूँ। स्थावर और जंगम से अनभिज्ञ पूजक हूँ बिना लज्जित हुए , फिर भी कूडलसंगमदेव मैं निर्लज्जा से। कहता हूँ, जंगम मेरे प्राणलिंग है ॥ Translated by: Banakara K Gowdappa
Telugu Translation అష్టవిధార్చన షోడశోపచారపు టంతు తెలియక చేసి చెడితినయ్యా ననుముట్టు సుఖము జంగమున కర్పించు టెట్టులో తెలియని ఉపచారి నేను స్థావరజంగమములు తెలియని పూజారి నేను సిగ్గుచెడి జంగమమే ప్రాణలింగం మనుచుంటి కూడల సంగమదేవా Translated by: Dr. Badala Ramaiah
Marathi Translation अष्टविधार्चना षोडशोपचार राजाला माहित नाही अशी फुकटची चाकरी करतो. मिळालेले सुख जंगमाला अर्पण करणारा उपचारी मी आहे. स्थावर जंगमाला एक न समजल्याने न मानणारा पूजक मी आहे. पुन्हा निर्लज्ज होऊन जंगमाला माझे प्राणलिंग म्हणतो कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಅರ್ಚನೆ = ಪೂಜೆ; ಉಪಚಾರ = ; ಜಂಗಮ = ; ಪೂಜಕ = ; ಬಿಟ್ಟಿ = ; ಷೋಡಶ = ; ಸ್ಥಾವರ = ;
ಕನ್ನಡ ವ್ಯಾಖ್ಯಾನ ಅರಸನ ಆಜ್ಞೆಯ ಪ್ರಕಾರ ಕೆರೆಕಟ್ಟೆ ನಿರ್ಮಾಣದಂಥ. ಸಾರ್ವಜನಿಕ ಕಾರ್ಯಗಳಿಗಾಗಿ ಶ್ರಮದಾನವನ್ನು ಮತ್ತು ಯುದ್ಧ ಸಮಯದಲ್ಲಿ ಸರಕುಸಾಗಣೆಯಂಥ ಸಮರಕಾರ್ಯಗಳನ್ನು ಆಯಾ ಪ್ರದೇಶದ ಜನರು “ಬಿಟ್ಟಿ”ಯಾಗಿ ಮಾಡಬೇಕಾಗಿತ್ತು-ಇದು ರಾಜಸೇವೆ. ಅದಕ್ಕೆ ರಾಜನ ಮನ್ನಣೆಯೂ ಸಿಗುತ್ತಿತ್ತು. ಆದರೆ ಕೆಟ್ಟ ಮಂತ್ರಿಗಳು ಮತ್ತು ಕೆಟ್ಟ ಅಧಿಕಾರಿಗಳು ರಾಜನ ಗಮನಕ್ಕೆ ತಾರದೆ ಮಿಕ್ಕಂತೆಯೂ ನ್ಯಾಯಬಾಹಿರವಾಗಿ ಕೆಲವು ಬಿಟ್ಟಿ ಕೆಲಸಗಳನ್ನು ಜನರಿಂದ ಮಾಡಿಸಿಕೊಳ್ಳುತ್ತಿದ್ದರು. ಈ ಕೆಲಸಗಳೇ “ಅರಸರಯದ ಬಿಟ್ಟಿ”. ಇದಕ್ಕೆ ಕೂಲಿಯ ಮಾತಿರಲಿ-ರಾಜನ ಕೃಪೆಗೂ ಅವಕಾಶವಿಲ್ಲವಾಗಿ-ಆ ಜನರ ಶ್ರಮವೆಲ್ಲಾ ದಂಡವಾಗುತ್ತಿತ್ತು. ಅದರಂತೆ ಜಂಗಮಪುರಸ್ಸರವಾಗದ (ಶಿವ)ಲಿಂಗಪೂಜೆಯು ಅರಸರಿಯದ ಬಿಟ್ಟಿಯಂತೆ-ದಂಡವೆನ್ನುತ್ತಿರುವರು ಬಸವಣ್ಣನವರು. ಜಂಗಮಸತ್ಕಾರದಿಂದ ಪರಿಸಮಾಪ್ತಿಗೊಳ್ಳದೆ-ಲಿಂಗಕ್ಕೆ ಮಾಡುವ ಅಷ್ಟವಿಧಾರ್ಚನೆ ಷೋಡಶೋಪಚಾರವೆಲ್ಲಾ ದಂಡವಾಗಿ-ಶಿವನ ಕೃಪೆ ಸಾಧ್ಯವಾಗದೆಂಬುದಭಿಪ್ರಾಯ. ಸ್ಥಾವರರೂಪವಾದ(ಇಷ್ಟ)ಲಿಂಗವು ಪೂಜೆಗೊಳ್ಳುವುದು ಜಂಗಮ(ಲಿಂಗ)ದ ಮೂಲಕವೇ ಎಂಬುದನ್ನರಿಯದ ಲಿಂಗಪೂಜೆಯನ್ನಷ್ಟೇ ಡಂಬಾಚಾರವಾಗಿ ಮಾಡುತ್ತಿದ್ದೇನೆ-ಮತ್ತೆಯೂ ನಾಚಿಕೆಯಿಲ್ಲದೆ ಜಂಗಮವೇ ನನಗೆ ಪ್ರಾಣಲಿಂಗವೆಂದು ಗಳಹುತ್ತಿದ್ದೇನೆಂದು ಬಸವಣ್ಣನವರು ಸ್ವವಿಮರ್ಶೆ ಮಾಡಿಕೊಳ್ಳುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು