ಭಕ್ತನ ಭಕ್ತಸ್ಥಲ - ವಿನಮ್ರತೆ
ಆವಿಗೆಯಲೊದಗಿದ ಕರ್ಪಿನಂತೆ,
ಅಮೃತದೊಳಗಿರ್ದ ಸರ್ಪನ ತನುವಿನಂತೆ,
ಇರ್ದೆನಯ್ಯಾ ನಾನು, ಹೊರಗೆ ನುಂಪಾಗಿ!
ಸಿಂಗಕ್ಕೊಲಿದ ಮದಕರಿಯಂತೆ
ಆನು ಜಂಗಮಕ್ಕೊಲಿದೆನಯ್ಯಾ, ಕೂಡಲಸಂಗಮದೇವಾ.
Transliteration Āvageyaloḍagida karpinante,
amr̥tadoḷagirda sarpana tanuvinante,
irdenayyā nānu, horage nambāgi!
Siṅgakkolida madakariyante
ānu jaṅgamakkoḷalidenayyā, kūḍalasaṅgamadēvā.
Manuscript
English Translation 2 Like soot that comes out of the potter's kiln,
Or body of snake that dwells in nectar,
I was all smooth to outward look!
Like an elephant in heat loving a lion,
I love Jaṅgama , Kūḍala Saṅgama Lord!
Translated by: L M A Menezes, S M Angadi
Hindi Translation आवें से प्राप्त कालिख की भाँति,
अमृत में स्थित सर्प तन की भाँति,
मैं बाहर से सुंदर हूँ,
सिंह पर मुग्ध मदकरि की भाँति
मैं जंगम पर मुग्ध हूँ, कूडलसंगमदेव ॥
Translated by: Banakara K Gowdappa
Telugu Translation ఆవగింజలో ఆరవపాలు కూడ
భక్తి నా యందులేదు; నన్ను
భక్తుడందురు; సమయాచారి అందురు
నేనేమి పాపము చేసితినో !
మొలకపుట్టక ముందే ముఖము ద్రుంతురే అయ్యా!
పొడవని వీరుని లేనివేవియో
యె త్తిపాడిరి ఒడయులందరు
ఇది నా విధియే కూడల సంగమ దేవా!
Translated by: Dr. Badala Ramaiah
Marathi Translation
कुंभाराच्या भट्टीतील मडक्या प्रमाणे,
अमृतात पडलेल्या सापाच्या तनुसम आहे मी देवा,
बाहेरुन चमकणारा, सिंहाला आपला म्हणणाऱ्या मदमस्त हत्तीप्रमाणे,
मी जंगमाला आपला म्हणतो कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಆವಗೆ = ಪಾದರಕ್ಷೆ; ಕರ್ಪಿ = ; ತನು = ; ಮದಕರಿ = ;
ಕನ್ನಡ ವ್ಯಾಖ್ಯಾನ ಜಂಗಮವು “ಗುರುವಿನ ಗುರು”ವಾಗಿ (ನೋಡಿ ವಚನ-426) ನಾಡಿನಾದ್ಯಂತ ಸಂಚರಿಸಿ ಧರ್ಮೀಯ ಸಾಧಕ(ಭಕ್ತ)ರನ್ನು ಕಂಡು ಅವರು ಕಣ್ತಪ್ಪಿಸಿಕೊಂಡರೆ-ಕಂಡುಹಿಡಿದು-ಅವನ ಜೀವನ ದುಷ್ಟವಾಗಿದ್ದರೆ ಪ್ರಶಿಕ್ಷಿಸಿ ಸನ್ಮಾರ್ಗಗಾಮಿಯನ್ನಾಗಿ ಮಾಡುವುದು ಆ ಜಂಗಮದ ಕರ್ತವ್ಯವೇ ಆಗಿತ್ತು. ಆದುದರಿಂದಲೇ “ಜಂಗಮೋಪದೇಶ ಶಸ್ತ್ರವೈದ್ಯ” ವೆಂದು ಬಸವಣ್ಣನವರೇ ಹೇಳಿದ್ದಾರೆ (ನೋಡಿ ವಚನ-655)
ಹೀಗೆ ಧರ್ಮಶಿಕ್ಷಕರೂ ಪೂಜ್ಯರೂ ಆದ ಜಂಗಮಕ್ಕೆ ನಿಷ್ಠೆಯಿಂದ ಭಕ್ತನು ಒಲಿಯಬೇಕೇ ಹೊರತು ಕೃತ್ತಿಮದಿಂದಲ್ಲ. ಕಂಡಾಗ ವಿನಯವಾಗಿದ್ದು ಕಣ್ಮರೆಯಾದ ಮೇಲೆ ಕುತ್ಸಿತವಾಗಿ ಬಾಳನ್ನು ಮುಂದುವರಿಸುತ್ತಲೇ ಹೋಗುವುದು ಧರ್ಮಕ್ಕೆಸಗಿದ ದ್ರೋಹವೆಂಬುದು ಈ ವಚನದ ತಾತ್ಪರ್ಯ.
ಕುಂಬಾರನು ಮಡಕೆಯನ್ನು ಸುಡುವ ಆವಗೆ ಒಳಗೆ ಧಗಧಗಿಸಿ ಕೆಂಪಗೆ ಉರಿಯುತ್ತಿರುವುದು-ಮೇಲೆ ಮಾತ್ರ ಕಪ್ಪುಕಟ್ಟಿರುವಂತೆ ಕಾಣುವುದು. ಹಾಲುಂಡ ಸರ್ಪ ಹೊರಗೆ ಮಿರಮಿರನೆ ಮಿರುಗಿ-ಒಳಗೆ ಮರಣಾಂತಕ ವಿಷವನ್ನು ತುಂಬಿಕೊಂಡಿರುವುದು. ಈ ವಿಧದಲ್ಲಿ ಸರ್ಪದಂತೆ ಆವಗೆಯ ಕಪ್ಪಿನಂತೆ ಒಳಗೊಂದು ಹೊರಗೊಂದಾಗಿ ವರ್ತಿಸಬಾರದು-ಭಕ್ತನು ಜಂಗಮಸಂಬಂಧವಾಗಿ.
ಮತ್ತು ಸಿಂಹಕ್ಕೆ ಸಿಕ್ಕಿದ ಆನೆ ಪ್ರಾಣಭಯದಿಂದ ಕಾಲನ್ನು ಮಡಿಚಿ ಸೊಂಡಿಲನ್ನು ಹಣೆಗೊತ್ತಿ ಕುಗ್ಗಿಬೀಳುವಂತೆ-ಜಂಗಮಕ್ಕೆ ಸಿಕ್ಕಿದ ಭಕ್ತನು-ತನ್ನ ಅಪರಾಧಕ್ಕಾಗಿ ಒದಗಬಹುದಾದ ಶಿಕ್ಷೆಗೆ ಹೆದರಿ ತಾತ್ಕಾಲಿಕವಾಗಿ ವಿನಯವಾಗಿರಲಾಗದು. ತ್ರಿಕರಣಪೂರ್ವಕವಾಗಿ ಧರ್ಮವನ್ನು ಆಚರಿಸಬೇಕು. ಆ ಸಾತ್ವಿಕ ತೇಜದಿಂದಲೇ ಜಂಗಮವನ್ನು ಇದಿರುಗೊಂಡು ಸತ್ಕರಿಸಬೇಕು. ನುಣ್ಪು>ನುಂಪು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು