•  
  •  
  •  
  •  
Index   ವಚನ - 382    Search  
 
ಭಕ್ತನ ಭಕ್ತಸ್ಥಲ - ನಡೆ-ನುಡಿ
ಸ್ಥಾವರ ಜಂಗಮ ಒಂದೇಯೆಂದು ಇದಿರ ನುಡಿವೆ! ನಾನೆಡಹುತಿಪ್ಪೆ: ಸಹಜನಲ್ಲಯ್ಯಾ! ಆನು ಸಮ್ಯಕ್ಕನಲ್ಲಯ್ಯಾ! ʼಆನುಭಯಲಿಂಗಸಂಗಿʼಯೆಂಬೆನು: ಈ ನುಡಿ ಸುಡದಿಹುದೆ, ಕೂಡಲಸಂಗಮದೇವಾ?
Transliteration ʼsthāvara jaṅgama ondēʼyendu idira nuḍive! Nāneḍahutippe: Sahajanallayyā! Ānu samyakkanallayya! ʼānubhayaliṅgasaṅgiʼyembenu: Ī nuḍi suḍadihude, kūḍalasaṅgamadēvā?
Manuscript
English Translation 2 To Static and Dynamic are but one,' I answer in return! I stumble yet, lacking sincerity. Not mine, O Lord, the poise of mind! I claim to be A kin to both; But the word itself Burns me forthwith, O Kūḍala Saṅgama Lord! Translated by: L M A Menezes, S M Angadi
Hindi Translation स्थावर और जंगम को एक कहकर विवाद करता हूँ, मैं ठोकर खाता हूँ, मैं स्वाभाविक नहीं हूँ निज को उभय-लिंग-संगी कहता हूँ, यह बात न जलायेगी कूड़लसंगमदेव ? Translated by: Banakara K Gowdappa
Telugu Translation అష్టవిధార్చన షోడశోపచారము ప్రభుడెరుగని వెట్టిచాకిరి నాది స్పర్శసుఖము జంగమున కర్పింప తెలియని ఉపచారి నేను స్థావరజంగమ మెఱుగని పూజారినేను కూడల సంగయ్య! సిగ్గుచెడి, మఱిమఱి జంగమమే ప్రాణమనుచుంటి Translated by: Dr. Badala Ramaiah
Marathi Translation स्थावर जंगम दोघांना एकच म्हणून घोषणा करतो. मी ठेचकाळतो. मी सहज नाही, मी परिपूर्ण नाही देवा. स्वतःला उभय लिंगसंगी म्हणवून घेतो. ही वाणी जाळणार नाही का कूडलसंगमदेवा ? Translated by Shalini Sreeshaila Doddamani
ಶಬ್ದಾರ್ಥಗಳು ಜಂಗಮ = ; ಸಂಗಿ = ; ಸಮ್ಯಾಕ್ = ; ಸ್ಥಾವರ = ;
ಕನ್ನಡ ವ್ಯಾಖ್ಯಾನ ಸ್ಥಾವರ(ಇಷ್ಟ)ಲಿಂಗ-ಜಂಗಮಲಿಂಗವೆಂಬ ಉಭಯವೂ ಸಮಾನವೆಂದು ಹೇಳುತ್ತೇನೆ-ಆದರೆ ಜಂಗಮಕ್ಕೆ ಪ್ರತ್ಯುತ್ತರ ಕೊಡುತ್ತೇನೆ. ಹೀಗೆ ನಾನು ನಡೆವಳಿಯಲ್ಲಿ ಮುಗ್ಗರಿಸುತ್ತಿದ್ದೇನೆ. ಕಾರಣ : ನಾನು ಸಹಜ(ಸಾಚಾ)ನೂ ಅಲ್ಲ, ಸಮ್ಯಕ್ಜ್ಞಾನಿಯೂ ಅಲ್ಲ, ಸಾಚಾ ಆಗಿದ್ದರೆ ಹೇಳಿದಂತೆ ಮಾಡಲು ಪ್ರಯತ್ನಿಸುತ್ತಿದ್ದೆ, ಸಮ್ಯಕ್ಜ್ಞಾನಿಯಾಗಿದ್ದರೆ-ತಪ್ಪುತ್ತಿರಲಿಲ್ಲ. ಮರಳಿಯೂ ನಾನು ಸ್ಥಾವರಲಿಂಗ-ಜಂಗಮಲಿಂಗವೆಂಬೆರೆಡರ ಸಮಾನ ಉಪಾಸಕನೆಂದು ಹೇಳಿಕೊಳ್ಳುತ್ತಿರುವ ಈ ಮಾತು ಉರಿಯಾಗಿ ನನ್ನ ಬಾಯನ್ನೇ ಸುಡಬಾರದೇಕೆ ಎನ್ನುತ್ತಿರುವರು ಬಸವಣ್ಣನವರು. ವಿ : ಸ್ಥಾವರಲಿಂಗವೆಂದರೆ ದೇವಾಲಯದ ಶಿವಲಿಂಗವೇ ಹೊರತು ಮೈಮೇಲೆ ಧರಿಸುವ ಇಷ್ಟಲಿಂಗವಲ್ಲವೆಂದು ಜನರು ತಪ್ಪು ತಿಳಿದಿರುವರು. ಹೀಗಾಗಿ ಕೆಲವರು ಕೂಡಲ ಸಂಗಮ ಕ್ಷೇತ್ರದ ಶಿವಲಿಂಗವು ನೀರುಪಾಲಾದರೆ ಬಸವತತ್ತ್ವಕ್ಕೇನೂ ಅಪಚಾರಮಾಡಿದಂತಾಗುವುದಿಲ್ಲವೆನ್ನುತ್ತ-“ಸ್ಥಾವರಕ್ಕವಳಿವುಂಟು ಜಂಗಮಕ್ಕಳಿವಿಲ್ಲ”ವೆಂಬ ಬಸವಣ್ಣನವರ ವಚನ(823)ವನ್ನೇ ಉಲ್ಲೇಖಿಸುವರು. ಅಂಥವರು ಈ 383ನೇ ವಚನವನ್ನು ಗಮನಿಸಬೇಕು. ಇಲ್ಲದಿದ್ದರೆ ಅವರು ತಮ್ಮ “ಇಷ್ಟಲಿಂಗ” ವನ್ನೂ ನೀರಿಗೆಸೆಯಬೇಕಾಗುವುದು-ಅದೂ ಬಸವತತ್ತ್ವಸಮ್ಮತವೇ ಆದೀತು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು