•  
  •  
  •  
  •  
Index   ವಚನ - 383    Search  
 
ಭಕ್ತನ ಭಕ್ತಸ್ಥಲ - ನಂಬಿಕೆ
ಮಸಿಯನೇಸುಕಾಲ ಬೆಳಗಿದರೆ, ಬಿಳಿದಾಗಬಲ್ಲುದೆ? ಕರ್ಮಸ್ಥಿತಿ ಬೆನ್ನ ಬಿಡದು. ಅನಂತಕೋಟಿ ಸನ್ಮಾನವ ಮಾಡಿದರೇನು? ನಿಮಿಷದುದಾಸೀನ ಕೆಡಿಸಿತ್ತು! ನಿಮ್ಮ ನಂಬಿಯೂ ನಂಬದ ಡಂಬಕ ನಾನಯ್ಯಾ ಕೂಡಲಸಂಗಮದೇವಾ.
Transliteration Masiyanēsukāla beḷagidare, biḷidāgaballude? Karmasthiti benna biḍadu. Anantakōṭi sanmāna māḍidarēnu? Nimiṣadudāsīna keḍisittu! Nim'ma nambiyū nambada ḍambaka nānayyā kūḍalasaṅgamadēvā.
Manuscript
English Translation 2 How long soever you may wash A lump of coal, You cannot make it white! The law of Karma gives no truce In its pursuit: what use To honour it a myriad times, If all is lost Through a single moment,s indifference? O Kūḍala Saṅgama Lord, I'm an impostor, sure, To have believed in you And yet had little faith! Translated by: L M A Menezes, S M Angadi
Hindi Translation कोयले को अनंत काल तक धोने से सफेद हो सकता है? कर्म-स्थिति पीछा नहीं छोड़ती, अनंत कोटि सम्मान करने से क्या लाभ? पल भर की उदासीनता नष्ट कर देती है । तुम पर अपूर्ण विश्वास रखनेवाला पाखंडी हूँ कूडलसंगमदेव ॥ Translated by: Banakara K Gowdappa
Telugu Translation సిరా ప్రకాశవంతంగా మరియు తెల్లగా ఉంటే? కర్మస్తీ బెన్‌ను వదలదు. మీరు అనంతం కోసం ఏమి చెల్లించారు? నిమిషం ఉదాసీనత చెడిపోయింది. సకలసంగమదేవ నానాయకుడు మీ నమ్మినవాడు. Translated by: Dr. Badala Ramaiah
Marathi Translation काळे कितीही वेळ धुतले तरी शुभ्र होणार आहे ? कर्मबंधन पाठ सोडीत नाही. अनंतकोटी सन्मान केले तरी काय झाले ? क्षणाची उदासीनता ते नष्ट करते. कूडलसंगमदेवा, तुमच्यावर विश्वास ठेवून त्याप्रमाणे न वागणारा दांभिक मी आहे देवा. Translated by Shalini Sreeshaila Doddamani
ಶಬ್ದಾರ್ಥಗಳು ಉದಾಸೀನ = ; ಕರ್ಮ = ; ಡಂಬಕ = ; ಮಸಿ = ; ಸನ್ಮಾನ = ;
ಕನ್ನಡ ವ್ಯಾಖ್ಯಾನ ಇದ್ದಿಲನ್ನು ಎಷ್ಟು ಕಾಲ ಪರ್ಯಂತರ ತೊಳೆಯುತ್ತಿದ್ದರೂ-ಅದು ಬೆಳ್ಳಗಾಗುವುದಿಲ್ಲ ಹಾಗೇ ಎಷ್ಟು ಪ್ರಯತ್ನಮಾಡಿದರೂ ನನ್ನ ಕರ್ಮ ನಿರ್ಮಲವಾಗುತ್ತಿಲ್ಲ. ಜನ್ಮಾಂತರದ ಈ ಕರ್ಮವಾಸನೆ ನನ್ನನ್ನು ಕಾಡುತ್ತಲೇ ಇರುವುದು. ಆದ್ದರಿಂದಲೇ-ನಾನು ದೀರ್ಘಕಾಲದಿಂದ ಮಾಡಿಕೊಂಡು ಬಂದಿರುವ ಈ ಜಂಗಮೋಪಾಸನೆ ಇನ್ನೂ ದೃಢಗೊಂಡಿಲ್ಲ. ಆಗಾಗ ನನ್ನೊಳಗಿಂದಲೇ ನನ್ನ ವಿಶ್ವಾಸದ ಭೂಮಿ ಕಂಪನಗೊಳ್ಳುತ್ತಿದೆ-ನನ್ನ ಕನಸಿನ ದಿವ್ಯಜಂಗಮನಗರಿ ಕೂಲಿ ಹಾಳುಹಂಪೆಯಾಗುತ್ತಿದೆ-ಎಂಬಂತೆ ಬಸವಣ್ಣನವರು ತಮ್ಮ ಉಭಯಲಿಂಗೋಪಾಸನೆಯ ಗತಿಯನ್ನು ಕುರಿತು ಅಸಮಾಧಾನಪಡುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು