•  
  •  
  •  
  •  
Index   ವಚನ - 384    Search  
 
ಭಕ್ತನ ಭಕ್ತಸ್ಥಲ - ಭಕ್ತಿ
ಎಳ್ಳಿಲ್ಲದ ಗಾಣವನಾಡಿದ ಎತ್ತಿನಂತಾಯಿತ್ತೆನ್ನ ಭಕ್ತಿ! ಉಪ್ಪ ಅಪ್ಪುವಿನಲ್ಲಿ ಅದ್ದಿ ಮೆಲಿದಂತಾಯಿತ್ತೆನ್ನ ಭಕ್ತಿ! ಕೂಡಲಸಂಗಮದೇವಾ, ಆನು ಮಾಡದೆನೆಂಬೀ ಕಿಚ್ಚು ಸಾಲದೆ?
Transliteration Eḷḷillada gāṇavanāḍida ettinantāyittenna bhakti! Uppa appuvinalli addi melidantāyittenna bhakti! Kūḍalasaṅgamadēvā, ānu māḍadenembī kiccu sālade?
Manuscript
English Translation 2 My bhakti's like an ox That circles an oil-mill wish no sesamum; My bhakti is as one who chews A water-sodden lump of salt! O Kūḍala Saṅgama Lord, The flaming pride Of having achieved, now turned Upon me, burns! Translated by: L M A Menezes, S M Angadi
Hindi Translation तिल के बिना कोल्हू खींचनेवाले बैल की भाँति हुई मेरी भक्ति, पानी में नमक भिगोकर चबाने की भाँति हुई मेरी भक्ति, कूडलसंगमदेव ‘मैंने किया’ कहने की ज्वाला पर्याप्त नहीं? Translated by: Banakara K Gowdappa
Telugu Translation స్థావరజంగమ మొక టేయని ఎదుట పలికి తడబడుచుంటి నే సహజుడగాను సమ్యజ్ఞుడగానయ్యా నేను భయలింగ సంగియంటిని ఈ నుడినను గాల్పకుండునే కూడల సంగమదేవా Translated by: Dr. Badala Ramaiah
Marathi Translation तिळाविना घाणा फिरविणाऱ्या बैलासम माझी भक्ती. मीठ पाण्यात बुडवून खाल्यासम माझी भक्ती. कूडलसंगमदेवा, `मी केले` एवढी अहंकाररुपी आग पुरेशी नाही का ? Translated by Shalini Sreeshaila Doddamani
ಶಬ್ದಾರ್ಥಗಳು ಅಪ್ಪು = ನೀರು; ಕಿಚ್ಚು = ;
ಕನ್ನಡ ವ್ಯಾಖ್ಯಾನ ಎಳ್ಳಿಲ್ಲದೆ ಗಾಣವನ್ನು ಸುತ್ತಿದ ಎತ್ತಿಗೆ ಹಿಂಡಿಯಿಲ್ಲ, ಸುತ್ತಿಸಿಕೊಂಡ ಗಾಣಿಗನಿಗೆ ಎಣ್ಣೆಯಿಲ್ಲ. ಹಾಗೆಯೇ ಜಂಗಮವಿಲ್ಲದ ಭಕ್ತನಿಂದ ಲಿಂಗವು ಪೂಜಿಸಿಕೊಂಡರೆ ಭಕ್ತನಿಗೆ ಮುಕ್ತಿಯಿಲ್ಲ, ಮಾಡಿಸಿಕೊಂಡ ಲಿಂಗಕ್ಕೆ ಪೂಜೆ ಸಲ್ಲಲಿಲ್ಲ. ಲಿಂಗಕ್ಕೆ ಜಂಗಮವೇ ಮೈಯಾಗಿ-ಆ ಜಂಗಮದ ಮೂಲಕ ಮಾಡಿದ ಸತ್ಕಾರ ಮಾತ್ರ ಲಿಂಗಕ್ಕೆ ಮುಟ್ಟುತ್ತದೆ. (ಇಲ್ಲಿ ವೈದಿಕ ಅಗ್ನಿಗೆ ಬದಲಾಗಿ ಜಂಗಮವಿದೆ. ಅಗ್ನಿಗೆ ಹಾಕಿದ ಹವಿಸ್ಸು ದೇವರಿಗೆ ತಲುಪುವುದೆಂಬಂತೆ ಜಂಗಮಕ್ಕೆ ಮಾಡಿದ ಸೇವೆ ಲಿಂಗಕ್ಕೆ ತಲುಪುತ್ತದೆ.) ಮತ್ತು ಜಂಗಮಕ್ಕೆ ಮಾಡದೆ ಭಕ್ತಿಯನ್ನು ಲಿಂಗಕ್ಕೆ ಮಾಡಿದರೆ-ಅದು ಸಾರಿಗೆ ಹಾಕಿದ ಉಪ್ಪಿನಂತಾಗದೆ-ನೀರಿಗೆ ಸುರಿದ ಉಪ್ಪಿನಂತಾಗುವುದು. ಆ ಉಪ್ಪು ನಷ್ಟವಾಗುವುದೆಂಬ ಮಾತು ಹಾಗಿರಲಿ-ಇದ್ದ ನೀರೂ ಕೆಡುತ್ತದೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು