ಎನ್ನಲ್ಲಿ ಭಕ್ತಿ ಸಾಸವೆಯ ಷಡ್ಭಾಗದನಿತಿಲ್ಲ:
ಎನ್ನ ಭಕ್ತನೆಂಬರು, ಎನ್ನ ಸಮಯಾಚಾರಿಯೆಂಬರು!
ನಾನೇನು ಪಾಪವ ಮಾಡಿದೆನೊ:
ಬೆಳೆಯದ ಮುನ್ನವೆ ಕೊಯ್ವರೆ? ಹೇಳಾ ಅಯ್ಯಾ!
ಇರಿಯದ ವೀರ, ಇಲ್ಲದ ಸೊಬಗವ
ಎಲ್ಲಾ ಒಡೆಯರು ಏರಿಸಿ ನುಡಿವರು!
ಎನಗಿದು ವಿಧಿಯೆ, ಕೂಡಲಸಂಗಮದೇವಾ?
Transliteration Ennalli bhakti sāsaveya ṣaḍbhāgadanitilla:
Enna bhaktanembaru, enna samayācāriyembaru!
Nānēnu pāpava māḍideno:
Beḷeyada munnave koyvare? Hēḷā ayyā!
Iriyada vīra, illada sobagava
ellā oḍeyaru ērisi nuḍivaru!
Enagidu vidhiye, kūḍalasaṅgamadēvā?
Manuscript
English Translation 2 There's not in me
As much devotion as the sixth
Of a mustard seed:
And yet they call me pious man,
A pillar of the Faith!
What sin have I committed now,
Pray tell me, Lord,
That they should pluck me ere I grow?
I am a hero without fight!
And yet, all masters extol
The beauty that is not in me!
O Kūḍala Saṅgama Lord,
Is this my fate?
Translated by: L M A Menezes, S M Angadi
Hindi Translation मुझमें भक्ति सरसों का षड्भाग भी नहीं है,
मुझे भक्त कहते हैं, समयाचारी धर्मात्मा कहते हैं,
मैंने कौनसा पाप किया?
पकने के पूर्व ही कोई फसल काटेगा? कहो स्वामी,
भोंकने में असमर्थ वीर हूँ, महान पुरुष है
सभी महानुभाव मुझमें अविद्यमान गुणों की प्रशंसा करते हैं ,
मेरे लिए विधि है, यह मेरा भाग्य है कूड़लसंगमदेव?
Translated by: Banakara K Gowdappa
Telugu Translation ఆవగింజలో ఆరవపాలు కూడ
భక్తి నా యందులేదు; నన్ను
భక్తుడందురు; సమయాచారి అందురు
నేనేమి పాపము చేసితినో !
మొలకపుట్టక ముందే ముఖము ద్రుంతురే అయ్యా!
పొడవని వీరుని లేనివేవియో
యె త్తిపాడిరి ఒడయులందరు
ఇది నా విధియే కూడల సంగమ దేవా!
Translated by: Dr. Badala Ramaiah
Marathi Translation
माझ्यातील भक्ती मोहरीच्या एक षष्ठांशही नाही.
मला भक्त म्हणतात, मला समयाचारी म्हणतात.
मी कोणते पाप केले आहे वाटते.
वाढण्याआधीच कापतात का? सांगा देवा.
न लढणारा वीर, नसलेली कुशलता!
शरण सर्व आरोप करुन मला चढवून बोलतात.
हे माझे विधिलिखित कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಅನಿತು = ಅಷ್ಟು; ವಿಧಿ = ; ಷಡ್ಭಾಗ = ; ಸಮಯಾಚಾರಿ = ; ಸೊಬಗು = ;
ಕನ್ನಡ ವ್ಯಾಖ್ಯಾನ ಸಾಸಿವೆಯೇ ಚಿಕ್ಕದು. ಅದರ ಆರನೇ ಒಂದು ಭಾಗದಷ್ಟೂ ಭಕ್ತಿ ತಮ್ಮಲ್ಲಿ ಇಲ್ಲದಿರುವಾಗ ಶರಣರೆಲ್ಲಾ ತಮ್ಮನ್ನು ಭಕ್ತನೆಂದೂ ಸಮಯಾಚಾರಿಯೆಂದೂ ಕೊಂಡಾಡುತ್ತಿರುವುದು ತಮ್ಮ ಪಾಪದ ಫಲವೆಂದೇ ಪೇಚಾಡುತ್ತಿರುವರು ಬಸವಣ್ಣನವರು. ಮರುಗವಾಗಲಿ ಪಚ್ಚೆಯಾಗಲಿ ಬೇರುಬಿಟ್ಟು ನಿಲ್ಲುತ್ತಿರುವಾಗಲೇ ಜನ ಅದನ್ನು ಮುರಿದು ಮುರಿದು ಮೂಸಿ ಮೆಚ್ಚಿಕೊಳ್ಳಲು ತೊಡಗಿದರೆ-ಅದು ಬೆಳೆಯುವುದಿನ್ನೆಲ್ಲಿ?
ಹೋರಾಡಿ ತೋರದ ಶೌರ್ಯವನ್ನೂ, ಬಲಿತು ಬಿರಿಯದ ಚೆಲುವನ್ನೂ ಕುರಿತು-ಜ್ಞಾನಿಗಳಾದ ಶರಣರೇ ನಖಶಿಖಾಂತ ಅತಿಶಯಿಸಿ ವರ್ಣಿಸಿದರೆ ಅದು ದುರುದೃಷ್ಟಕರವಲ್ಲದೆ ಮತ್ತೇನೆಂದು ಬಸವಣ್ಣನವರು ಖಿನ್ನರಾಗಿರುವರು. (ಸಮಾಯಾಚಾರ-ನೋಡಿ ವಚನ 193, 218).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು