•  
  •  
  •  
  •  
Index   ವಚನ - 387    Search  
 
ಭಕ್ತನ ಭಕ್ತಸ್ಥಲ - ಹೊಗಳಿಕೆ
ಎನ್ನವರೊಲಿದು ಹೊನ್ನ ಶೂಲದಲ್ಲಿಕ್ಕಿದರೆನ್ನ ಹೊಗಳಿ, ಹೊಗಳಿ! ಎನ್ನ ಹೊಗಳತೆ ಎನ್ನನಿಮ್ಮೆಯ್ಗೊಂಡಿತ್ತಲ್ಲಾ! ಅಯ್ಯೋ, ನಿಮ್ಮ ಮನ್ನಣೆಯೇ ಮಸೆದಲಗಾಗಿ ತಾಗಿತ್ತಲ್ಲಾ! ಅಯ್ಯೋ ನೊಂದೆನು, ಸೈರಿಸಲಾರೆನು: ಕೂಡಲಸಂಗಮದೇವಾ, ನೀನೆನಗೊಳ್ಳಿದನಾದರೆ ಎನ್ನ ಹೊಗಳತೆಗಡ್ಡ ಬಾರಾ, ಧರ್ಮೀ!
Transliteration Ennavarolidu honna śūladallikkidarenna hogaḷi, hogaḷi! Enna hogaḷate ennanim'maigoṇḍittallā! Ayyā, nim'ma mannaṇeyē masedalagāgi tāgittallā! Ayyō nondenu, sairisalārenu: Kūḍalasaṅgamadēvā, nīnenage oḷḷidanādare enna hogaḷategaḍḍa bārā, dharmī!
Manuscript
Music Courtesy: Album Name - Vachana Dhare Vol -4 Singer : B.S.Mallikarjuna, Nanditha, Meghana, Sneha Music : M.S. Maruthi Label : Ashwini audio
English Translation 2 With praise on praise, mine own From sheer love stabbed me with the spears of gold! This praise of me enfolds me round and round! Lord, your regard, alas! Has smitten me like a whetted sword! Oh, oh! I'm hurt, I cannot bear it any more! O Kūḍala Saṅgama Lord, If you do love me, come between And bar this praise,O merciful! Translated by: L M A Menezes, S M Angadi
Hindi Translation स्वजनों ने प्रेम वश बारंबार प्रशंसा कर मुझे स्वर्ण शूल पर चढाया। मेरी प्रशंसा मुझे छेदकर पार होगई हाय, मैं व्यथित हुआ, सह नहीं सकता, स्वामी तव सम्मान सान-धरी तलवार सा भेद रहा है । हाय, मैं व्यथित हुआ, सह नहीं सकता, कूडलसंगमदेव, तुम मेरे हितैषी हो तो, कृपया मेरी प्रशंसा रोको ॥ Translated by: Banakara K Gowdappa
Telugu Translation పొగడి పొగడి నావారు నన్ను పొన్ను శూలమున కెత్తిరి ఈ పొగడ్తలే రెండుగా చీల్చెనయ్యా నన్ను పదను కత్తిjైు నీ మన్ననయె ననుతా కెనయ్యా, నొచ్చితి సైరింపలేను కూడల సంగమదేవ ధర్మజ్ఞ నా మేలు కోరెద వేని యీ పొగడ్తలకు అడ్డుపడ రావయ్యా! Translated by: Dr. Badala Ramaiah
Marathi Translation आपुलेच म्हणविती, करीताती स्तुति सोन सुळावरती, टांगताती स्तुतीची ती चटक, सुवर्णसुळापरी तेथे मूळ धरी, अहंकार तयांची ती स्तुती, जणू तिक्ष्ण बाण कैसा करू सहन, यातना तें ऐसा होता घायाळ, कैसा मी सहावा सगा धाव घ्यावे, मजलगी कूडलसंगमदेवा ! स्तुती आड यावे मज वाचवासे, हाचि धर्म अर्थ - आपलेच लोक माझ्यावरील प्रेमामुळे माझी अतिशय स्तुती करीत आहेत. त्यांची ती स्तुती मला सोन्याच्या सुळावर चढवित आहे. कारण त्यांची प्रसंशा ऐकून माझ्यातील अहंकार जागृत होऊ पाहात आहे. आणि एकदा का अहंकार जागृत झाला किंवा रुजला की जगणे संपले ! म्हणून त्यांचे स्तुतीतील प्रत्येक शब्द अग्निबाणाप्रमाणे माझ्या हृदयात खुपत आहे. त्यामुळे मी घायाळ होत आहे. ती यातना माझ्या सहनतेच्या पलीकडे जात आहे. म्हणून हे कूडलसंगमदेवा ! (परमेश्वरा) माझ्या लोकाकडून होत असलेली माझी स्तुती शिघ्रा, अती शिघ्र थांबवा व मला त्यातून वाचवा नव्हे हा तुझा धर्म आहे कारण त्यांची स्तुती तुझ्या साधकाच्या साधनेत घात करु पाहात आहे. Translated by Rajendra Jirobe, Published by V B Patil, Hirabaug, Chembur, Mumbai, 1983 माझी प्रेमाने प्रशंसा करीत करीत सोन्याच्या सुळावर चढविले. माझ्या स्तुतीने मला तुम्हासारखे केले देवा, वेदना होते, सहन होत नाही. माझ्या प्रशंसेचा बाण आरपार घुसला. देवा वेदना होते, सहन होत नाही. कूडलसंगमदेवा, तुम्ही माझे हितचिंतक असाल तर ही प्रशंसा थांबविणे तुमचा धर्म आहे. Translated by Shalini Sreeshaila Doddamani
Urdu Translation خوشامدوں سے،مسلسل قصیدہ خوانی سے طلائی دارپہ پہنچادیا ہےاپنوں نے مگریہ دل کہ ہے مسرور اس ستائش سے بنارہے ہیں نشانہ اسےخداوندا یہ تیرےپیارتری چاہتوں کےتیروکماں میں ڈرگیا ہوں کوئی بات سہہ نہیں سکتا میرےعزیزمرے دیوا کوڈلا سنگا تو پھرکرے نہ کوئی شخص میری تعریفیں Translated by: Hameed Almas
ಶಬ್ದಾರ್ಥಗಳು ಅಲಗು = ; ಧರ್ಮಿ = ; ಪೊಗಳತೆ = ; ಮನ್ನಣೆ = ; ಮಸೆದ = ; ಶೂಲ = ; ಸೈರಿಸು = ;
ಕನ್ನಡ ವ್ಯಾಖ್ಯಾನ ಹೊಗಳಿಕೆಯು ಹೊನ್ನಶೂಲ ಹೊಗಳಿಕೆಯೆಂದರೆ ಯಾರಿಗೆ ತಾನೇ ಬೇಡ? ಹಿಂದಿನರಾಜ ಮಹಾರಾಜರುಗಳು ಹೊಗಳುವುದಕ್ಕಾಗಿಯೇ ತಮ್ಮ ಆಸ್ಥಾನಗಳಲ್ಲಿ ಹೊಗಳು ಭಟ್ಟರನ್ನು (ವಂದಿ ಮಾಗಧರು) ಇರಿಸಿಕೊಂಡಿದ್ದನ್ನು ನಾವು ಓದಿಲ್ಲವೇ? ಹೀಗೆ ಹೊಗಳಿಕೆಯಿಂದ ಉಬ್ಬಿ ಹೋಗುವುದು ಮಾನವನ ಸ್ವಭಾವ. ಆದರೆ ಬಸವಣ್ಣನವರು ತಮ್ಮನ್ನು ಇತರರು ಪ್ರಶಂಸಿಸಿದಾಗ ಉಬ್ಬಿ ಹೋಗುವುದಿಲ್ಲ. ತಟಸ್ಥರಾಗಿಯೂ ಇರುವುದಿಲ್ಲ. ಪ್ರತಿಯಾಗಿ ಜನರು ತಮ್ಮನ್ನು ಹೊಗಳಿ ಹೊಗಳಿ ಹೊನ್ನ ಶೂಲಕ್ಕೇರಿಸಿದರೆಂದು ವ್ಯಥೆಪಡುತ್ತಾರೆ. ಜನರು ಹೊಗಳುವುದೆಂದರೆ ಮನ್ನಣೆ ನೀಡುವುದೆಂದರೆ ಅವರಿಗೆ ಮಸೆದ ಕತ್ತಿಯಿಂದ ಇರಿದಂತಾಗುತ್ತದೆ. ಈ ಹೊಗಳಿಕೆಯ ಕೂರಸಿಯಿಂದ ಘಾಸಿಯಾಗಿ ‘ಅಯ್ಯೋ? ನೊಂದೆನು ಸೈರಿಸಲಾರೆನು’ಎನ್ನುತ್ತಾರೆ. ಕೂಡಲಸಂಗಮದೇವರೇನಾದರೂ ತಮಗೆ ಹಿತಬಯಸುವುದೇ ಆದರೆ ಆ ಹೊಗಳಿಕೆಯೆಂಬ ಮಸೆದ ಕತ್ತಿಯಿಂದ ತಮ್ಮನ್ನು ಪಾರು ಮಾಡುವಂತೆ ಪ್ರಾರ್ಥಿಸುತ್ತಾರೆ. ‘........ ಕೂಡಲಸಂಗಮದೇವಾ ನೀನೆನಗೊಳ್ಳಿದನಾದರೆ ಎನ್ನ ಹೊಗಳತೆಗಡ್ಡಬಾರಾಧರ್ಮೀ’. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.