ಎನ್ನವರೆನಗೊಲಿದು ಹೊನ್ನಶೂಲವನಿಕ್ಕಿದರಯ್ಯಾ.
ಅಹಂಕಾರಪೂರಾಯ ಘಾಯದಲ್ಲಿ
ಆನೆಂತು ಬದುಕುವೆನೆಂತು ಜೀವಿಸುವೆ?
ಜಂಗಮವಾಗಿ ಬಂದು ಜರೆದು, ಶೂಲವನಿಳುಹಿ,
ಪ್ರಸಾದದ ಮದ್ದನಿಕ್ಕಿ, ಸಲಹು ಕೂಡಲಸಂಗಮದೇವಾ.
Transliteration Ennavarenagolidu honnaśūlavanikkidarayyā.
Ahaṅkārapurāya gāyadalli
ānentu badukuvenentu jīvisuve?
Jaṅgamavāgi bandu jaredu, śūlavaniḷuhi,
prasādada maddanikki, salahu kūḍalasaṅgamadēvā.
Manuscript
English Translation 2 Mine own, by flattering me from sheer love,
Have wounded me
with the spears of gold:
How can I survive the wound
That pride has made?
Can I live on?
Come in Jaṅgama guise,
Come, take out the spears by jeering at me
And with the ministration of your grace
Save me, O Kūḍala Saṅgama Lord!
Translated by: L M A Menezes, S M Angadi
Hindi Translation स्वजनों नें मुझसे प्रसन्न होकर स्वर्ण शूल पर चढाया,
अहंकार पूर्ण घाव के रहते
मैं कैसे जीवित रहूँ, कैसे जीवन बिताऊँ?
जंगम के रुप में आओ, मेरी निंदा कर
शूल पर से उतार दो; प्रसाद रुपी दवा देकर
रक्षा करो कूडलसंगमदेव ॥
Translated by: Banakara K Gowdappa
Telugu Translation నను మెచ్చి నా వారు పొన్నుశూలమున కెత్తిరయ్యా
అహంకారపూరితకాయంబునందే నెట్లు
బ్రతికెద; యెట్లు జీవించెద
జంగముడవై వచ్చి చఱచి శూలము
దించి ప్రసాద మందించి కాపాడవయ్యా
కూడల సంగయ్యా!
Translated by: Dr. Badala Ramaiah
Marathi Translation
शरणांच्या प्रेमाने सोन्याच्या सुळावर चढविले मला देवा.
अहंकाराच्या घाण्यातून मी कसे वाचू ? कसे जगू?
जंगमाच्या रुपात येऊन सुळावरुन मला उतरुन घ्यावे.
प्रसादाच्या औषधाने रक्षण करावे कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಘಾಂಕು = ; ಜಂಗಮ = ; ಜರೆ = ; ಮದ್ದು = ; ಶೂಲ = ;
ಕನ್ನಡ ವ್ಯಾಖ್ಯಾನ ತಮ್ಮನ್ನು ಒಬ್ಬ ಸೇವಕನನ್ನಾಗಿ ಶರಣರು ನಡೆಸಿಕೊಳ್ಳದೆ ಕೊಂಡಾಡುತ್ತಿದ್ದುದರಿಂದ ಬಸವಣ್ಣನವರ ಮನಸ್ಸಿಗೆ ನೋವಾಯಿತು. ಆ ಕೊಂಡಾಟವನ್ನು ಚಿನ್ನದ ಶೂಲವೆಂದೂ, ಅದಕ್ಕೆ ತಮ್ಮನ್ನು ಈಡುಮಾಡಿದ್ದರಿಂದ ತಮಗೆ ಅಹಂಕಾರವೆಂಬ ಭಯಂಕರ ಗಾಯವಾಗಿದೆಯೆಂದೂ-ನಿರ್ದಾಕ್ಷಿಣ್ಯ ವಿಮರ್ಶಕರಾದ ಜಂಗಮ ಬಂದು ತಮ್ಮಲ್ಲಿರುವ ತಪ್ಪನ್ನು ಹುಡುಕಿ ಎತ್ತಿ ಆಡಿ ಖಂಡಿಸಿ-ಆ ಹೊಗಳಿಕೆಯ ಹೊನ್ನಶೂಲದಿಂದಿಳಿಸಿ-ಆಗಿರುವ ಅಹಂಕಾರದ ಗಾಯ ಮಾಯಲು ಪ್ರಸಾದದ ಮದ್ದನ್ನು ತಮಗೆ ಇಕ್ಕುವಂತಾಗಲೆಂದು ದೇವರನ್ನು ಬೇಡಿಕೊಳ್ಳುತ್ತಿರುವರು.
ಈ ವಚನದ (ಮತ್ತು ಹಿಂದಿನ ವಚನದ) ನಿರೂಪಣೆಯ ಹಿನ್ನಲೆಗೆ-ಒಬ್ಬ ಅಪರಾಧಿಯನ್ನು ಶೂಲಕ್ಕೇರಿಸುತಿದ್ದಂತೆ ರಾಜನು ಕಾರಣಾಂತರದಿಂದ ಅವನಿಗೆ ಆ ಶೂಲದ ಶಿಕ್ಷೆಯನ್ನು ತಪ್ಪಿಸಿ-ಆದ ಗಾಯಕ್ಕೆ ಔಷಧೋಪಚಾರ ಮಾಡಿಸುವ ಪ್ರಾಚೀನ ದಂಡನೀತಿಯ ಒಂದು ಚಿತ್ರವಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು