•  
  •  
  •  
  •  
Index   ವಚನ - 389    Search  
 
ಭಕ್ತನ ಭಕ್ತಸ್ಥಲ - ದೇವರು
ಎಡದ ಕೈಯಲು ಹಾಲ ಬಟ್ಟಲು, ಬಲದ ಕೈಯಲ್ಲಿ ಓಜುಗಟ್ಟಿಗೆ: ಆವಾಗ ಬಂದಾನೋ, ನಮ್ಮಯ್ಯ; ಬಡಿದು ಹಾಲ ಕುಡಿಸುವ ತಂದೆ? 'ದಂಡಕ್ಷೀರದ್ವಯ ಹಸ್ತಂ ಜಂಗಮಂ ಭಕ್ತಿಮಂದಿರಂ ಅತಿಭಕ್ತಿ ಲಿಂಗಸಂತಷ್ಟಂ ಅಪಹಾಸ್ಯಂ ಯಮದಂಡನಂ ' ಎಂದುದಾಗಿ, ಕೂಡಲಸಂಗಮದೇವಯ್ಯ, ತಾನೇ, ಭಕ್ತಿಪಥವ ತೋರುವ ತಂದೆ!
Transliteration Eḍada kaiyalu hāla baṭṭalu, balada kaiyalli ōjugaṭṭige: Āvāga bandānō, nam'mayya; baḍidu hāla kuḍisuva tande? 'Daṇḍakṣīradvaya hastaṁ jaṅgamaṁ bhaktimandiram atibhakti liṅgasantaṣṭaṁ apahāsyaṁ yamadaṇḍanam' endu, kūḍalasaṅgamadēvayya, tānē, bhaktiya pathava tōruva tande!
Manuscript
English Translation 2 A cup of milk in the left hand. A cane in the right,- When will he come, my Lord, My father, who will beat me Until I drink the milk? 'In the two hands, the cane and milk; Jaṅgama is devotion's shrine: Much piety is Liṅga's joy; Derision is the rod of Death!' Therefore, Lord Kūḍala Saṅgama Himself Is the father shows me the way Of piety! Translated by: L M A Menezes, S M Angadi
Hindi Translation बाएँ हाथ में दूध की कटोरी, दाहिने हाथ में बेंत लेकर कब आयेंगे मेरे प्रभु, मुझे मारकर दूध पिलानेवाले पिता? ‘दंडक्षीरदयाहस्तो जंगमो भक्तिमंदिरम् तद्भक्तया लिंग संतुष्टिरपहास्याद्यमदंडनम्॥‘ कूडलसंगमदेव स्वयं भक्ति पथ दर्शानेवाले पिता हैं । Translated by: Banakara K Gowdappa
Telugu Translation ఎడమచేత పాలకుండను బట్టి కుడిచేత గురుదండమంది ఎపుడు వచ్చునో నా స్వామి దండిరచి పాలు త్రాగించు నా తండ్రి! డక్షీరద్వయహ స్తం జంగమం భక్తి మందిరం అతిభక్తి లింగ సంతుష్టం అపహాస్యమ్ యమదండనమ్ అన కూడల సంగమ దేవయ్యా నీవే భక్తి పథము చూపు తండ్రివయ్య! Translated by: Dr. Badala Ramaiah
Marathi Translation डाव्या हातात दूधाची वाटी, उजव्या हातात सोटा घेऊन, मारुन दूध पाजणारा माझा पिता केव्हा येणार देवा ? दण्डक्षीरद्वया हस्तो जंगमो भक्ति मंदिर। भक्त्त्या लिंगसन्तुष्टिरपहास्याद्यमदंडनम्। म्हणून कूडलसंगमदेव स्वतः भक्तीपथ दाखविणारा पिता आहे. Translated by Shalini Sreeshaila Doddamani
ಶಬ್ದಾರ್ಥಗಳು ಅಪಹಾಸ್ಯ = ಪರಿಹಾಸ್ಯ; ಓಜು = ; ಕ್ಷೀರ = ; ಜಂಗಮ = ; ತುಷ್ಟಿ = ; ದಂಡ = ; ಪಥ = ; ಯಮ = ; ಹಸ್ತ = ;
ಕನ್ನಡ ವ್ಯಾಖ್ಯಾನ ಜಂಗಮವು ಶಿವಭಕ್ತರ ತಂದೆ. ಅವನ ಚಿತ್ರ : ಎಡದ ಕೈಯಲ್ಲೊಂದು ಹಾಲ ಬಟ್ಟಲು. “ಬಲ”ದ ಕೈಯಲ್ಲೊಂದು ಬೆತ್ತ. ತಂದೆಯಾದವನು ಹಾಲು ಕುಡಿಯದ ಮಕ್ಕಳಿಗೆ ಬಲತ್ಕಾರವಾಗಿಯಾದರೂ ಹಾಲು ಕುಡಿಸುವ ರೀತಿಯದು. ಅವನು ಎಡಗೈಯಿಂದ (ಎಂದರೆ ನಿರ್ದಾಕ್ಷಿಣ್ಯವಾಗಿ) ನೀಡುವ ಧರ್ಮಾಮೃತವನ್ನು ಭಕ್ತನು ಭಯದಿಂದಲಾದರೂ ಈಂಟಿ ಆಧ್ಯಾತ್ಮಿಕವಾಗಿ ಬೆಳೆಯಬೇಕು. ಬಸವಣ್ಣನವರಿಗೆ ಹೀಗೆ ಬೈದು ಹೊಡೆದು ಬುದ್ಧಿ ಕಲಿಸುವ (ಕರುಣಾಮಯಿ!) ಜಂಗಮ ಬೇಕು-ಭಕ್ತಿಮಾರ್ಗವನ್ನು ತೋರಿಸುವ ಆ ಜಂಗಮ ತಂದೆ ಬೇಕು. ಉಲ್ಲೇಖವಾಗಿರುವ ಸಂಸ್ಕೃತ ಶ್ಲೋಕದ ಸರಳಾನುವಾದ : ಒಂದು ಕೈಯಲ್ಲಿ ಬೆತ್ತವನ್ನು ಇನ್ನೊಂದು ಕೈಯಲ್ಲಿ ಹಾಲನ್ನು ಹಿಡಿದಿರುವನು ಜಂಗಮ-ಅವನು ಭಕ್ತಿಯ ತವರುಮನೆ. ಅವನಿಗೆ ವಿಧೇಯನಾಗಿ ಭಕ್ತಿ ಮಾಡಿದರೆ ಲಿಂಗವು ಸಂತುಷ್ಟವಾಗುವುದು. ಅವನಿಗೆ ಅಪಹಾಸ್ಯ ಮಾಡಿದರೋ ಯಮದಂಡನೆಯಾಗುವುದು. ಓಜ<ಉಪಾಧ್ಯಾಯ, ಓಜುಗಟ್ಟಿಗೆ : ಉಪಾಧ್ಯಾಯರು ಶಿಷ್ಯರನ್ನು ಶಿಕ್ಷಿಸಲು ಹಿಡಿದಿರುವ ಬೆತ್ತ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು