ಭಕ್ತನ ಭಕ್ತಸ್ಥಲ - ಶರಣರ ಸಂಗ
ಎನ್ನ ಆಪತ್ತು, ಸುಖ-ದುಃಖವನಿನ್ನಾರಿಗೆ ಹೇಳುವೆ?
ಶರಣಸ್ಥಲದವರಿಗೆ ಹೇಳಿದರೆ ಮಚ್ಚರ!
ಸವತಿ-ಸಕ್ಕರೆ, ಬೇವು-ಬೆಲ್ಲ ಉಂಟೆ? ಇನ್ನಾರಿಗೆ ಹೇಳುವೆ?
ಕೂಡಲಸಂಗಮದೇವಾ, ಜಂಗಮವಾಗಿ ಬಂದು
ಎನ್ನ ಮನದ ಸೂತಕವ ಕಳೆಯಾ.
Transliteration Enna āpattu, sukha-duḥkhavaninnārige hēḷuve?
Śaraṇasthaladavarige hēḷida maccara!
Savati-sakkare, bēvu-bella uṇṭe? Innārige hēḷuvudu?
Kūḍalasaṅgamadēvā, jaṅgamavāgi bandu
enna manada sūtakava kaḷeyā.
Manuscript
English Translation 2 To whom shall I report
My mishaps, my pleasures and my pains?
Should I report to those
Who dwell in Śaraṇa-sthala,
They are jealous!
Is there sweetness in the other wife?
Is there jagaree in neem?
So then, to whom shall I report,
O Kūḍala Saṅgama Lord?
Come as a Jaṅgama and purge
The infection of my soul !
Translated by: L M A Menezes, S M Angadi
Hindi Translation निज विपत्ति, सुख-दुःख किसे सुनाऊँ?
शरणस्थलवालों से कहूँ तो ईर्ष्य होगी,
सौत में शक्कर, नीम में मिठास हो सकती है?
और किससे कहूँ?
कूडलसंगमदेव, जंगम वेष में आकर
मेरे मन का सूतक मिटा दो॥
Translated by: Banakara K Gowdappa
Telugu Translation నా విపత్తు నా దుర్దశ యీ నా
సుఖదుఃఖంబు లిక యెవ్వరితో చెప్పుదు?
శరణస్థలమువారికి దెల్ప మచ్చరము
సవతి చక్కెర - వేము బెల్లమగునె?
ఇక ఎవరితో దెల్పుదు?
కూడల సంగమ దేవా జంగముడవై వచ్చి
నా మనఃసూతకము తొలచుమా!
Translated by: Dr. Badala Ramaiah
Tamil Translation என் ஆபத்து, இன்ப துன்பங்களை யாரிடம் கூறுவேன்
சரணத் தலத்தவருக்குக் கூறின் பொறாமை!
சக்களத்தி சர்க்கரை வேம்பு வெல்லம் உள்ளதோ?
இன்னும் யாரிடம் கூறுவேன்?
கூடலசங்கமதேவனே, ஜங்கமனாக வந்து
என்மன மாசினைக் களைவாய்
Translated by: Smt. Kalyani Venkataraman, Chennai
Marathi Translation
माझी आपत्ती, सुख-दुःख आणखी कोणाला सांगू ?
शरणस्थलीच्या साधकास सांगितले तर आवडत नाही!
सवतीत प्रेम, कडूनिंबात गोडी कशी असणार? आता कोणाला सांगू?
कूडलसंगमदेवा, जंगमरुपात येऊन माझ्या मनाचे सुतक नष्ट करा.
Translated by Shalini Sreeshaila Doddamani
ಶಬ್ದಾರ್ಥಗಳು ಆಪತ್ತು = ಕಷ್ಟ; ಜಂಗಮ = ; ಮಚ್ಚರ = ; ಶರಣಸ್ಥಲ = ; ಸವತಿ = ; ಸೂತಕ = ;
ಕನ್ನಡ ವ್ಯಾಖ್ಯಾನ ನನಗೆ ಜಂಗಮವೇ ಗತಿ. ನನ್ನ ಸುಖ ದುಃಖವನ್ನು ಇನ್ನಾರಿಗೆ ಹೇಳಿಕೊಳ್ಳಲಿ ? ಶರಣರಿಗೆ ಹೇಳಿದರೆ-ಆ ಶರಣರೂ ನಾನೂ ಶಿವನ ಸತಿಯರೇ ಆಗಿ-ನಮ್ಮಿಬ್ಬರಿಗೂ ಸವತಿಮತ್ಸರವಿದೆ. ನನಗೆ ಶಿವನು ಒಲಿಯಲಿಲ್ಲವೆಂದರೆ-ಆ ಶರಣಸವತಿಗೆ ಸಂತೋಷವೇ ! ಬೇವು ಬೆಲ್ಲವಾದೀತೆ ? ಸವತಿ ಸಹೃದಯಳಾದಾಳೆ ? ಜಂಗಮವಾದರೋ ಶಿವರೂಪಿಯೇ ಆಗಿರುವನು. ಆ ಶಿವನೊಲಿಯದೆ ಭರವಸೆಗೆಟ್ಟಿರುವ ನನ್ನ ಮನದ ಸೂತಕವನ್ನು ಕಳೆಯೆಂದು ಆ ಜಂಗಮಕ್ಕೆ ಮರೆಹೋಗುವೆನೆನ್ನುವರು ಬಸವಣ್ಣನವರು.
ಬಸವಣ್ಣನವರ ಪ್ರಕಾರ ಸಮಾಜದಲ್ಲಿ ಭಕ್ತ-ಶರಣ-ಜಂಗಮ ಎಂಬ ಮೂರು ಶ್ರೇಣಿಗಳಿವೆ. ಆ ಭಕ್ತಸ್ಥಲ-ಶರಣಸ್ಥಲ ಜಂಗಮಸ್ಥಲಗಳು ಉತ್ತರೋತ್ತರ ಉನ್ನತ ಶ್ರೇಣಿಗಳೆಂದೂ ತಿಳಿಯಬೇಕು.
ವಿ : ಗಂಡನೊಲಿಯದೆ ದುಗುಡಗೊಂಡವಳು ಸವತಿಯಲ್ಲಿ ದೂರಿದರೇನು ಪ್ರಯೋಜನ-ಅವಳದೂ ಅದೇ ಗತಿ ! ಆದ್ದರಿಂದ ಗಂಡನಿಗೆ ಸಮಾನಸ್ಕಂದರಾಗಿ ಸ್ನಿಗ್ಧರಾದವರಿಗೆ ಹೇಳಿಕೊಳ್ಳಬೇಕೆಂಬಂಥ ಪ್ರ ಣಯ ಪ್ರಪಂಚದ ಹಿನ್ನೆಲೆ ಈ ವಚನದಲ್ಲಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು