•  
  •  
  •  
  •  
Index   ವಚನ - 391    Search  
 
ಭಕ್ತನ ಭಕ್ತಸ್ಥಲ - ಲಿಂಗ-ಜಂಗಮ
ನಾನಾಸ್ಥಾನಂಗಳಲ್ಲಿ ಬಂದು ಕುಳ್ಳಿರ್ದುದು ತೆರಳುವುದೆ, ಅಯ್ಯಾ: ಉಭಯಕುಳಕ್ಕಲ್ಲದೆ ತೆರಳದು. ಬೀದಿಯಲ್ಲಿ ಬಿದ್ದ ಶಿಶುವನು ಹೆತ್ತ ತಾಯಿ ಹತ್ತಿರ ಬಂದು ಎತ್ತುವಂತೆ! ಎನ್ನನಾರು ಜನ್ಮಕ್ಕೆ ತಂದು ಅಘೋರನರಕದಲ್ಲಿಕ್ಕಿದುದ ನಾ ಬಲ್ಲೆ: ಕೂಡಲಸಂಗಮದೇವಾ ನಿಮ್ಮ ಹಂಗೇನು? ಹರಿಯೇನು? ಅನುಭವ ಲಿಂಗಜಂಗಮದ ಮರೆಹೊಕ್ಕು ಬದುಕಿದೆನು.
Transliteration Nānāsthānagaḷalli bandu kuḷḷirdudu teraḷuvude, ayyā: Ubhayakuḷakkallade teraḷadu. Bīdiyalli bidda śiśuvanu hetta tāyi hattara bandu ettuvante! Ennanāru janmakke tandu aghōranarakadallikkiduda nā balle: Kūḍalasaṅgamadēvā nim'ma haṅgēnu? Hariyēnu? Anubhava liṅga jaṅgamada morehokku badukidenu.
Manuscript
English Translation 2 Can it depart, O Lord, That which has come and lodged In several regions of myself? Except by either order, it Cannot depart! I know you brought me to six births And thrust me in this terrible hell- Even as a mother rushes to the spot Where, in the street, her child is lost, And lifts it in her arms! O Kūḍala Saṅgama Lord, What debt or obligation do I owe To you? For I was saved When I surrendered me to both Liṅga and Jaṅgama ! Translated by: L M A Menezes, S M Angadi
Hindi Translation नाना स्थानों में जो आकर जमा है क्या वह दूर होगा प्रभो? उभयों के बिना, दूर नहीं होगा। पथ पर पतित शिशु को माता पास जाकर उठा लेती है । मैं जानता हूँ कि किसने मुझे जन्म देकर घोर नरक में डाला । कूडलसंगमदेव, तव कौन सा उपकार है? कौन सा ऋण है? मैं उभय लिंग-जंगम की शरण में जाकर बच गया ॥ Translated by: Banakara K Gowdappa
Telugu Translation నానాస్థానములబడి వచ్చి కూర్చున్నది మానునే అయ్యా ఉభయ కులంబులకు గాక మానదు వీధినిపడు శిశువును కన్నతల్లి దరిజేరి ఎత్తికొనినట్లు ఆరుజన్మలకు దెచ్చి నన్న ఘోరనరకాన ద్రోయుట నే నెఱిగితి; కూడల సంగమదేవ నీ హంగేమి? నీవేమి? నే నుభయలింగజంగముల మఱుగుజొచ్చి బ్రతికెదను. Translated by: Dr. Badala Ramaiah
Tamil Translation பல பிறவிகளில் வந்து துய்த்துச் செல்வதோ ஐயனே இருவருக்கல்லது செல்லாது வீதியில் விழுந்த குழந்தையைப் பெற்றதாய் அருகில் வந்து தூக்குவதைப்போல என்னை யார் தோற்றி, கொடுமையான நரகத்திலிட்டனர் என்பதை நானறிவேன் கூடல சங்கமதேவனே, உம் தொடர்பென்னவோ இலிங்க ஜங்கமரிடம் தஞ்சமடைந்து வாழ்கிறேன். Translated by: Smt. Kalyani Venkataraman, Chennai
Marathi Translation नानाजन्मातील आलेले कर्म असेच सुटणार आहे देवा? उभय कुलाच्या लिंग जंगमाच्या कृपेविना सुटणार नाही. रस्त्यावर पडलेल्या मुलाला जन्मदाती येऊन उचलून घेते. त्याप्रमाणे मला कोणी जन्मात घालून घोर नरकात ढकलले हे मी जाणतो. कूडलसंगमदेवा तुमच्या मिंध्यात कशाला ? उपकारात कशाला ? उभय लिंग जंगमाला शरण जाऊन जगतो मी. Translated by Shalini Sreeshaila Doddamani
ಶಬ್ದಾರ್ಥಗಳು ಅಘೋರ = ನಿಷ್ಠುರ, ಭಯಂಕರ; ಕುಳ = ; ನರಕ = ; ಹಂಗು = ; ಹರಿ = ;
ಕನ್ನಡ ವ್ಯಾಖ್ಯಾನ ಬಸವಣ್ಣನವರು-ಶಿವಭಕ್ತಿಯಿಂದಲೇ ಆದರೂ-ಶಿವಲಿಂಗನಿಗಿಂತ ಜಂಗಮವೇ ಶರಣವೆನ್ನುತ್ತಿರುವರು (ನೋಡಿ ಮುಂದಿನ ವಚನವನ್ನು). ಅವರು ತಮ್ಮ ಶಿವಧರ್ಮದಲ್ಲಿ ಲಿಂಗದ ಅವಶ್ಯಕತೆಯೆಷ್ಟು ಎಂಬುದನ್ನು ಕುರಿತು ಜಿಜ್ಞಾಸೆ ಹುಟ್ಟುವಷ್ಟು ಹೆಚ್ಚಿನ ಪ್ರಾಶಸ್ತ್ಯವನ್ನು ಜಂಗಮಕ್ಕೆ ಕೊಟ್ಟಿರುವರು. ಇದಕ್ಕೆ ಕಾರಣವೆಂದರೆ-ಜೀವನನ್ನು ಜನ್ಮಾಂತರಕ್ಕೆ ಎಸೆದವನು ಶಿವನು-ಜೀವನಿಗೆ ಆ ಜನ್ಮಾಂತರಗಳನ್ನು ಪರಿಹರಿಸಿದವನು ಜಂಗಮ. ಆದ್ದರಿಂದಲೇ ಬಸವಣ್ಣನವರು ತಮ್ಮನ್ನು ಬೀದಿಯಲ್ಲಿ ಬಿದ್ದ ಶಿಶುವಿಗೆ ಹೋಲಿಸಿಕೊಂಡು-ಅದನ್ನು ಎತ್ತಿಕೊಳ್ಳುವ ಸಾಕುತಾಯಿಗೆ ಜಂಗಮವನ್ನು ಹೋಲಿಸಿರುವರು. “ನಾನಾ ಸ್ಥಾನಂಗಳಲ್ಲಿ ಒಂದು ಕುಳ್ಳಿದ್ದುದು ತೆರಳುವುದೇ ಅಯ್ಯ ? [ಅದು] ಉಭಯ ಕುಳಕ್ಕಲ್ಲದೆ ತೆರಳದು”-ಎಂದರೆ : ಜೀವನನ್ನು ಭವಭವಾಂತರದಿಂದ ಬೆನ್ನಟ್ಟಿ ಬರುತ್ತಿರುವ ಸಂಚಿತಕರ್ಮದ ದೆವ್ವ ಬಡಪೆಟ್ಟಿಗೆ ಬಿಟ್ಟು ಹೋಗದು-ಶಿವನ ಸ್ಥಾವರಲಿಂಗರೂಪಿಯೂ ಚರಲಿಂಗರೂಪಿಯೂ ಆದ ಜಂಗಮಕ್ಕಲ್ಲದೆ ಬಿಟ್ಟು ಹೋಗದು-ಎಂದು. “ಉಭಯಲಿಂಗ ಜಂಗಮ”-ಎಂದರೆ : ಸ್ಥಾವರಲಿಂಗರೂಪವೂ ಚರಲಿಂಗರೂಪವೂ ಆದ ಜಂಗಮ-ಎಂದು. ಬಸವಣ್ಣನವರ ಜನ್ಮಾಂತರಕ್ಕೆ ನೋಡಿ ವಚನ 3,4.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು