ಭಕ್ತನ ಭಕ್ತಸ್ಥಲ - ಅಸಹಾಯಕತೆ
ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ:
ಮೀನಜ, ರೋಮಜ ಮಹಾಮುನಿಗಳ
ಲಯವ ಮಾಡಿದುದ ನಾ ಬಲ್ಲೆನಾಗಿ,
ಅಯ್ಯಾ ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ:
ನವಕೋಟಿ ಬ್ರಹ್ಮರಿಗೆ
ಪ್ರಳಯವ ಮಾಡುವುದ ನಾ ಬಲ್ಲೆನಾಗಿ.
ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ:
ದಶಕೋಟಿ ನಾರಾಯಣರಿಗೆ
ಮರಣವ ಮಾಡುವುದ ನಾ ಬಲ್ಲೆನಾಗಿ,
ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ:
ಅನಂತಕೋಟಿ ರುದ್ರರಿಗೆ
ಲಯವ ಮಾಡುವುದ ನಾ ಬಲ್ಲೆನಾಗಿ.
ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ!
ಎನ್ನನೇಳೇಳು ಭವಕ್ಕೆ ತಂದಲ್ಲಿ
ಅನುಭವ ಲಿಂಗ ಜಂಗಮದ ಮೊರೆಹೊಕ್ಕು
ಭವಂ ನಾಸ್ತಿಯಾಗಿ ಬದುಕಿದೆನಯ್ಯಾ,
ಕೂಡಲಸಂಗಮದೇವಾ.
Transliteration Ayyā, nim'ma dēvarendu nambi pūjisalāgadava:
Mīnaja, rōmaja mahāmunigaḷa
layava māḍiduda nā ballenāgi,
ayyā nim'ma dēvarendu nambi pūjisalāgadayyā:
Navakōṭi brahmarige
praḷayava māḍuvuda nā ballenāgi.
Ayyā, nim'ma dēvarendu nambi pūjisalāgadava:
Daśakōṭi nārāyaṇarige
maraṇava māḍuvuda nā ballenāgi,
ayyā, nim'ma dēvarendu nambi pūjisalāgadava:
Anantakōṭirudrarige
layava māḍuvuda nā ballenāgi.
Ayyā, nim'ma dēvarendu nambi pūjisalāgadayyā!
Ennanēḷēḷu bhāvakke tandalli
ānubhaya liṅga jaṅgamada morehokku
bhavaṁ nāstiyāgi badukidenayyā,
kūḍalasaṅgamadēvā.
Manuscript
English Translation 2 One cannot worship Thee, O Lord,
Believing that Thou art God:
Because I know Thou did'st destroy
The great Seers born of fish and hair....
One cannot worship Thee, O Lord,
Believing that Thou art God:
Because I know Thou did'st efface
The nine billion Brahmas all....
One cannot worship Thee, O Lord,
Believing that Thou art God:
Because I know Thou did'st to death
The ten billion Nārāyaṇās ....
One cannot worship Thee, O Lord,
Believing that Thou art God:
Because I know Thou did'st destroy
The infinite billions of Rudras all....
One cannot worship Thee, O Lord,
Believing that Thou art God:
For when Thou brought'st me to seven births,
I sought my harbourage in both
Liṅga and Jaṅgama and shedding my births,
Was saved, O Kūḍala Saṅgama Lord!
Translated by: L M A Menezes, S M Angadi
Hindi Translation स्वामी, तुम्हें देव समझ विश्वास से पूजा
स्वामी, दैव भाव से तव पूजा नहीं कर सकता
क्योंकि मैं जानता हूँ, तुमने,
मीनज, रोमज नामक महामुनियों का संहार जो किया ।
स्वामी, इस विश्वास से कि तुम देवता हो
पूजा नहीं की जा सकती,
क्योंकि मैं जानता हूँ, तुमने
नवकोटि ब्रम्हों का प्रलय जो किया ।
स्वामी, इस विश्वास से कि तुम देवता हो
पूजा नहीं की जा सकती,
क्योंकि मैं जानता हूँ, तुमने
दशकोटि नारायणों को मार डाला ।
स्वामी, इस विश्वास से कि तुम देवता हो
पूजा नहीं की जा सकती,
क्योंकि मैं जानता हूँ, तुमने
अनंतकोटि रुद्रों का लय जो किया ।
स्वामी, इस विश्वास से कि तुम देवता हो,
पूजा नहीं की जा सकती,
क्योंकि तुमने मुझे
सात सात जन्मों में आने जो दिया
मैं लिंग जंगम की शरण में जाकर
भव रहित हो बच गया कूडलसंगमदेव ॥
Translated by: Banakara K Gowdappa
Telugu Translation అయ్యా నిను దేవుడని పూజింపరాదయ్య
మీనజ రోమజ మహామునుల
లయంబు సేయుట నే నెఱిగినాడ
అయ్యా నిను దేవుడని నమ్మి పూజింపరాదయ్య
నవకోటి బ్రహ్మలకు ప్రళయంబు
గూర్చుట నే నెఱగితి కాన
అయ్యా నిను దేవుడని నమ్మి
పూజింప రాదయ్యా
దశకోటి నారాయణులకు
మరణంబు గూర్చుట యెఱిగితి గాన
అయ్యా నిను దేవుడని నమ్మి
పూజింపరాదయ్యా
అనంతకోటి రుద్రుల
లయంబు సేయుట ఎఱిగితి గాన
అయ్యా నిను దేవుడని నమ్మి
పూజింప దగదయ్యా
ఏడేడు జన్మల నన్ను పుట్టింప
నేను భయలింగజంగముల
మఱుగుజొచ్చి భవంబడగార
బ్రతికితినయ్య సంగయ్యా !
Translated by: Dr. Badala Ramaiah
Tamil Translation ஐயனே, உம்மைக்கடவுள் என நம்பி
பூசிக்கவியலாது ஐயனே
மாபெரும் முனிவர்களை நீ இலயம்
செய்ததை நான் அறிவேன் ஐயனே
ஐயனே உம்மைக் கடவுள் என நம்பி
பூசிக்கவியலாது ஐயனே
ஒன்பது கோடி பிரம்மருக்கு அழிவினை
அளித்ததை நான் அறிவேன்.
ஐயனே உம்மைக் கடவுள் என்று நம்பி
பூசிக்கவியலாது ஐயனே
பத்து கோடி நாராயணருக்கு அழிவினை
அளித்ததை நானறிவேன் ஐயனே
ஐயனே, உம்மைக் கடவுள் என்று நம்பி
பூசிக்கவியலாது ஐயனே.
எண்ணற்ற கோடி உருத்திரர்களுக்கு
அழிவினை அளித்ததை நானறிவேனையனே
ஐயனே, உம்மைக்கடவுள் என்று நம்பி
பூசிக்கவியலாது ஐயனே.
என்னை ஏழேழு பிறவிகளில் தோற்றுவித்தனை
இலிங்க ஜங்கமத்திடம் தஞ்சமடைந்து
பிறவியழிந்து எஞ்சினேன் ஐயனே
கூடல சங்கமதேவனே.
Translated by: Smt. Kalyani Venkataraman, Chennai
Marathi Translation
देवा, तुमची देव म्हणून विश्वास ठेवून पूजा करु नये.
मीनज, रोमज, महामुनी हे कसे नष्ट झाले हो मी जाणतो.
देवा, तुमची देव म्हणून विश्वास ठेवून पूजा करु नये.
नवकोटी ब्रह्मांचा प्रलय कसा झाला हे मी जाणतो.
देवा, तुमची देव म्हणून विश्वास ठेवून पूजा करु नये.
दशकोटी नारायणांचा प्रलय कसा झाला हे मी जाणतो.
देवा, तुमची देव म्हणून विश्वास ठेवून पूजा करु नये.
अनंतकोटी रुद्रांना कसे नष्ट केले हे मी जाणतो.
देवा, तुमची देव म्हणून विश्वास ठेवून पूजा करु नये.
मला सात भवात कोणी आणले हे मी जाणतो.
मी उभयलिंग जंगमांना शरण जाऊन भवमुक्त होऊन
जगत आहे कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಘನ = ; ಪ್ರಳಯ = ; ಮೀನಜ = ; ರೋಮಜ = ;
ಕನ್ನಡ ವ್ಯಾಖ್ಯಾನ ಮೀನಜ ರೋಮಜ ಮಹಾಮುನಿಗಳನ್ನೂ, ಬ್ರಹ್ಮ ವಿಷ್ಣು ರುದ್ರಾದಿ ಮಹಾದೇವತೆಗಳನ್ನೂ ಲಯ ಮಾಡುವುದು ಮತ್ತೆ ಹುಟ್ಟಿಸುವುದು-ನಿನ್ನ ಹವ್ಯಾಸ.ನಾನು ನಿನ್ನ ದೆಸೆಯಿಂದ ಹುಲ್ಲಾದೆ ಮೀನಾದೆ ಹಕ್ಕಿಯಾದೆ ಪಶುವಾದೆ ಮಾನವನಾದೆ ದೇವತೆಯಾದೆ-ಮರಳಿ ಪಶುವಾದೆ ಮಾನವನಾದೆ-ಹೀಗೆ ಏಳೇಳು ಭವದಲ್ಲಿ ಹುಟ್ಟಿ ಸತ್ತೆ. ಈ ಪರಿಭವವನೆಲ್ಲ ನಾನು ಪರಿಹರಿಸಿಕೊಳ್ಳುವುದಕ್ಕಾಗಿ ಸ್ಥಾವರಲಿಂಗಸ್ವರೂಪಿಯೂ ಚರಲಿಂಗಸ್ವರೂಪಿಯೂ (ಉಭಯಲಿಂಗವೂ) ಆದ ಜಂಗಮದ ಮೊರೆಹೊಕ್ಕಿದ್ದೇನೆ.ಶಿವನನ್ನು ಪ್ರೇಮದಿಂದಲೇ ಭವ(ಕಾರಕ)ನೆಂದೂ ಸರ್ವಸಂಹಾರಕನೆಂದೂ ಆಕ್ಷೇಪಣೆಮಾಡುತ್ತ ಪತಿತೋದ್ಧಾರಕ ಜಂಗಮದ ಕೃಪಾಶಕ್ತಿಯನ್ನು ಕೊಂಡಾಡುತ್ತಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು