ಭಕ್ತನ ಭಕ್ತಸ್ಥಲ - ಲಿಂಗ-ಜಂಗಮ
ಲಿಂಗದರುಶನ ಕರಮುಟ್ಟಿ, ಜಂಗಮದರುಶನ ಶಿರಮುಟ್ಟಿ,
ಆವುದು ಘನವೆಂಬೆ, ಆವುದು ಕಿರಿದೆಂಬೆ?
ತಾಳಸಂಪುಟಕ್ಕೆ ಬಾರದ ಘನವ ಅರ್ಪಿಸ ಹೋದರೆ,
ಅರ್ಪಣ ಮುನ್ನವೆ ಇಲ್ಲ: ಗಮನ ನಿರ್ಗಮನವಾಯಿತ್ತು!
ಈ ಉಭಯ ಭೇದವನರಿಯರಾಗಿ,
ಜಂಗಮವೆ ಲಿಂಗ ಕೂಡಲಸಂಗಮದೇವಾ.
Transliteration Liṅgadaruśana karamuṭṭi, jaṅgamadaruśana siramuṭṭi,
āvuda ghanavembe, āvuda kiridembe?
Tāḷasampuṭakke bārada ghanava arpisa hōdare,
arpaṇa munnave illa: Gamana nirgamanavāyitu!
Ī ubhaya bhēdavanariyarāgi,
jaṅgamave liṅga kūḍalasaṅgamadēvā.
Manuscript
English Translation 2 When I greet Liṅga with touch of hand,
And Jaṅgama with the touch of head,
Which shall I say is greater or less?
If I offer the highest beyond my grasp,
There is no further offering:
The moving has become the motionless!
Since I can see no difference in both,
Jaṅgama is Liṅga, O Kūḍala Saṅgama Lord!
Translated by: L M A Menezes, S M Angadi
Hindi Translation लिंग-दर्शन कर-स्पर्श से करता हूँ
जंगमदर्शन शिर-स्पर्श से ।
इनमें कौन बडा है, कौन छोटा,
अंजली में न समाने योग्य
महानता अर्पण करना चाहूँ,
तो अर्पण पहले ही नहीं हैं, जंगम निर्गमन होता है,
इन उभय भेदों को नहीं जानने के कारण
जंगम ही लिंग है, कूडलसंगमदेव ॥
Translated by: Banakara K Gowdappa
Telugu Translation కరమంట లింగ దర్శనము
సిరమంట జంగమ దర్శనము
ఏది ఘనమం దేది తృణమందు?
తాళ సంపుటమునకు రాని ఘనత
అర్పింపబోయిన అర్పణ ముందే
గమనము నిర్గమనమయ్యె
ఈ రెంటికి భేదములేదు గాన
జంగమమే లింగము కూడల సంగమ దేవ!
Translated by: Dr. Badala Ramaiah
Tamil Translation கைதீண்டிட இலிங்க தரிசனம்
தலையிலே தீண்டிட ஜங்கம தரிசனம்
எதைப் பெரிதென்பேன்? எதைச் சிறிதென்பேன்?
அர்ப்பிப்பும் இல்லை செயலும் இல்லை
அளவற்ற சீர்மையை காணிக்கையாகி அர்ப்பிப்பின்
இந்த இரு வேறுபாட்டினை அறியாததால்
ஜங்கமமே இலிங்கம் கூடல சங்கம தேவனே.
Translated by: Smt. Kalyani Venkataraman, Chennai
Marathi Translation
लिंगदर्शन करस्पर्शाने, जंगमदर्शन मस्तकस्पर्शाने
कोणाला श्रेष्ठ म्हणू, कोणाला कनिष्ठ म्हणू?
वाचातीत तत्त्वाला अर्पण करण्यास जाता
अर्पण अर्पण नाही. गमन-निर्गमन झाले.
हा उभय भेद न जाणल्याने
जंगम हेच लिंग आहे कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಅರ್ಪಣ = ನಿವೇದನೆ; ಕರ = ; ಘನ = ; ಜಂಗಮ = ; ಜಂಗಮ = ; ದರುಶನ = ; ನಿರ್ಗಮನ = ;
ಕನ್ನಡ ವ್ಯಾಖ್ಯಾನ ಜಂಗಮ ಘನವೆಂಬುದಕ್ಕೆ ಮೊದಲನೆಯ ಕಾರಣ : ಕೈಮುಟ್ಟಿ ಪೂಜಾದಿಕ್ರಿಯಾಮಾರ್ಗವಾಗಿ ಲಿಂಗದರ್ಶನ, ಜಂಗಮದರ್ಶನವಾದರೋ ತಲೆಮುಟ್ಟಿ ಸರ್ವಸಮರ್ಪಣಮಾರ್ಗವಾಗಿ, ಮತ್ತು ಇಷ್ಟಲಿಂಗವು ಎಡಗೈಯಲ್ಲೇ ಇರುವುದರಿಂದ ಅದಕ್ಕೆ ಕೈಮುಟ್ಟಿ ಮಾತ್ರವೇ ಹೊರತು ಶಿರಸಾಷ್ಟಾಂಗವಾಗಿ ನಮಸ್ಕರಿಸಲಾಗದು. ಜಂಗಮಕ್ಕೆ ಶಿರಸಾಷ್ಟಾಂಗವಾಗಿ ನಮಸ್ಕರಿಸಲಡ್ಡಿಯಿಲ್ಲ. ಹೀಗೆನ್ನುತ್ತ ಬಸವಣ್ಣನವರು ಲಿಂಗ ಘನವೋ ಜಂಗಮ ಘನವೋ ಎಂದು ಪ್ರಶ್ನಿಸುತ್ತಾರೆ(ತಮ್ಮನ್ನು ತಾವೇ).
ಜಂಗಮ ಘನವೆಂಬುದಕ್ಕೆ ಎರಡನೇ ಕಾರಣ : ನಿರಾಕಾರವಾದ ಲಿಂಗವು ಸರ್ವವ್ಯಾಪಿಯಾಗಿ-ಅದಕ್ಕೆ ಎತ್ತುವ ಸ್ವೀಕರಿಸುವ ಗಮನವೊಂದೂ ಇಲ್ಲ-ಅದರದೆಲ್ಲಾ ನಿರ್ಗಮನ. ಆದ್ದರಿಂದ ಆ ವಾಗತೀತವಾದ ಆ ಲಿಂಗಕ್ಕೆ ಮಾಡುವ ಕೈಂಕರ್ಯವನ್ನು ಆ ಲಿಂಗದ ಸಾಕಾರವೂ ಮಾನವಮರ್ಯಾದಾ ಸಹಿತವೂ ಆದ ಜಂಗಮಕ್ಕೆ ಮಾಡುವುದು ಸಮಂಜಸವೇ ಆಗಿದೆ.
ಹೀಗೆ ಲಿಂಗ-ಜಂಗಮೋಭಯವನ್ನು ತಿಳಿಯದೆ ಮಾಡಿದ್ದೆಲ್ಲಾ ವ್ಯರ್ಥ.
ವಿ ; ತಾಳಸಂಪುಟ>ತಾಲು ಸಂಪುಟ : ತಾಲು ಎಂದರೆ ಬಾಯ ಛಾವಣಿ, ಸಂಪುಟವೆಂದರೆ ಸೇರುವೆ. ನಾಲಗೆಯ ಅಳವಡಿಕೆಯಿಂದ ಗಂಟಲಿಂದ ಹಿಡಿದು ತುಟಿಯವರೆಗೆ ಹೊರಡಿಸುವ ಅಕ್ಷರಗಳಿಂದ ಘಟಿತವಾದ(ಮಾತು) ಶಬ್ದ-ಎಂದರ್ಥ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು