•  
  •  
  •  
  •  
Index   ವಚನ - 394    Search  
 
ಭಕ್ತನ ಭಕ್ತಸ್ಥಲ - ಶರಣರು
ಶಿವಭಕ್ತರೆ ಅಧಿಕರು, ನೋಡಯ್ಯಾ. ಎಲ್ಲರಿಂದವು: ಇದಕ್ಕೆ ಅಧಿಕವಾಗಿ ಜಂಗಮವ ಕಂಡೆ. ಈ ದ್ವಿವಿಧವನೊಂದೇ ಎಂದು ನಂಬಿದೆ, ಕೂಡಲಸಂಗಮದೇವಾ.
Transliteration Śivabhaktare adhikaru, nōḍayya. Ellarindavu: Idakke adhikavāgi jaṅgamava kaṇḍe. Ī dvividhavanondē endu nambide, kūḍalasaṅgamadēvā.
Manuscript
English Translation 2 Śivabhaktas, see, excel all else: However, I found Jaṅgama greater than they: I believe, O Kūḍala Saṅgama Lord, That the two orders are but one. Translated by: L M A Menezes, S M Angadi
Hindi Translation देखो स्वामी, शिवभक्त ही श्रेष्ट हैं इनसे अधिक मैंने जंगम को पाया इन द्विविधों को एक ही माना कूडलसंगमदेव ॥ Translated by: Banakara K Gowdappa
Telugu Translation అందరికన్న శివభక్తులే అధికులు వారికన్న ఘనుడు జంగమ మయ్య ఈ ద్వివిధ మొకటేయని నమ్మితి కూడల సంగమ దేవా! Translated by: Dr. Badala Ramaiah
Tamil Translation சிவனடியாரே மேன்மையானோர் காணீர் இதற்கும் மேலாக ஜங்கமத்தைக் கண்டேன் இவ்விரண்டும் ஒன்று என நம்பினேன் கூடல சங்கம தேவனே. Translated by: Smt. Kalyani Venkataraman, Chennai
Marathi Translation शिवभक्त श्रेष्ठ आहे देवा. त्याहून श्रेष्ठ जंगम आहे पहा. या दोघांना एकच म्हणून विश्वास ठेवतो कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಅಧಿಕ = ಬಹಳ; ಜಂಗಮ = ;
ಕನ್ನಡ ವ್ಯಾಖ್ಯಾನ (ಎಲ್ಲರಿಗಿಂತ) ಶಿವಭಕ್ತರೇ ಶ್ರೇಷ್ಠರು. ಅವರಿಗಿಂತ ಅಧಿಕವಾದುದು ಜಂಗಮವೆಂದು ನಡೆದುಕೊಳ್ಳುತ್ತೇನೆ. ಆದರೂ ತತ್ತ್ವತಃ ಭಕ್ತ-ಜಂಗಮವೆಂಬುಭಯವೂ ಒಂದೇ ಎಂಬುದು ನನ್ನ ನಂಬಿಕೆ-ಎನ್ನುತ್ತಾರೆ ಬಸವಣ್ಣನವರು. ಧಾರ್ಮಿಕ ಸಾಮಾಜಿಕ ವ್ಯವಹಾರಕ್ಕಾಗಿ ಭಕ್ತರೆಂಬ ಶರಣರೆಂಬ ಜಂಗಮವೆಂಬ ಶ್ರೇಣಿಯಿದ್ದರೂ ಆ ಮೂರೂ ತತ್ತ್ವಗಳು ಭಕ್ತರೆಂಬ ಜಂಗಮವೆಂಬ ಉಭಯದಲ್ಲಿ ಅಡಗುವುದು. ಆ ಉಭಯವೂ ಶಿವತತ್ತ್ವದಲ್ಲಿ ಏಕವಾಗುವುದೆಂಬುದು ತಾತ್ಪರ್ಯ. ನೊಡಿ ವಚನ 391.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು