•  
  •  
  •  
  •  
Index   ವಚನ - 395    Search  
 
ಭಕ್ತನ ಭಕ್ತಸ್ಥಲ - ನಂಬಿಕೆ
ಕೃತಯುಗದಲ್ಲಿ ಕೇ(ದಾ)ರವೆಂಬ ಮೂಲಸ್ಥಾನ; ತ್ರೇತಾಯುಗದಲ್ಲಿ ವಾರಣಾಸಿಯೆಂಬ ಮೂಲಸ್ಥಾನ; ದ್ವಾಪಾರದಲ್ಲಿ ವಿರೂಪಾಕ್ಷನೆಂಬ ಮೂಲಸ್ಥಾನ; ಕಲಿಯುಗದಲ್ಲಿ ಪರ್ವತವೆಂಬ ಮೂಲಸ್ಥಾನ. ನಾನಾ ಸ್ಥಾನಂಗಳ ಮುಟ್ಟದೆ ಜಂಗಮವೆ ಲಿಂಗವೆಂದು ನಂಬಿದೆ, ಕೂಡಲಸಂಗಮದೇವಾ.
Transliteration Kr̥tayugadalli kē(dā)ravemba mūlasthāna; trētāyugadalli vāraṇāsiyemba mūlasthāna; dvāparadalli virūpākṣanemba mūlasthāna; kaliyugadalli parvatavemba mūlasthāna. Nānā sthānava muṭṭade jaṅgamave liṅgavendu nambide, kūḍalasaṅgamadēvā.
Manuscript
English Translation 2 In Kr̥tayuga , the primal seat Is Kēdāra by name; InTrētāyuga , the primal seat Is Vārāṇasi by name; In Dvāpara , the primal seat Is Virūpākṣa by name; In Kaliyuga, the primal seat Is Parvata by name..... Not touching at each several stage, I do believe, Lord Kūḍala Saṅgama, That Jaṅgama is Liṅga . Translated by: L M A Menezes, S M Angadi
Hindi Translation कृतयुग में केदार नामक मूल-स्थान, त्रेतायुग में वाराणसी नामक मू्ल-स्थान, द्वापर में विरूपाक्ष नामक मूल-स्थान, कलियुग में श्रीशैल नामक मूल स्थान, ये चारों मूल स्थान नाना स्थानों का स्पर्श न कर मैंने जंगम को ही लिंग माना, कूडलसंगमदेव॥ Translated by: Banakara K Gowdappa
Telugu Translation కృతయుగమున కేదారమే మూలస్థానము త్రేతాయుగమున వారణాసియే మూలస్థానము ద్వాపరమున విరూపాక్షుడే మూలస్థానము కలియుగమందు శ్రీపర్వతమే మూలస్థానము నాస్థానముల ముట్టిన జంగమమే లింగమని నమ్మితి కూడల సంగమ దేవా ! Translated by: Dr. Badala Ramaiah
Tamil Translation கிருதயுகத்தில் கேதாரம் எனும் மூலத்தானம் திரேதாயுகத்தில் வாரணாசி எனும் மூலத்தானம் துவாபரத்தில் விரூபாக்ஷன் எனும் மூலத்தானம் கலியுகத்தில் ஸ்ரீசைலம் எனும் மூலத்தானம் என்னும் நான்கு மூலத்தானங்கள் பல நிலைகளை அடையாமல், ஜங்கமமே இலிங்கமென நம்பினேன், கூடல சங்கமதேவனே. Translated by: Smt. Kalyani Venkataraman, Chennai
Marathi Translation कृतयुगात केदार मूलस्थान, त्रेतायुगात वाराणसी मूळस्थान, द्वापारयुगात विरुपाक्ष मूळस्थान, कलियुगात पर्वत मूळस्थान, या चार स्थलाना स्पर्श केल्याविना जंगमाला लिंग म्हणून विश्वास ठेवतो कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಜಂಗಮ = ; ಯಗ = ;
ಕನ್ನಡ ವ್ಯಾಖ್ಯಾನ ಕೃತಯುಗದಲ್ಲಿ ಕೇತಾರವೂ. ತ್ರೇತಾಯುಗದಲ್ಲಿ ವಾರಣಾಸಿ(ಕಾಶಿ)ಯೂ, ದ್ವಾಪರಯುಗದಲ್ಲಿ ವಿರೂಪಾಕ್ಷ(ಹಂಪೆ)ಯೂ, ಕಲಿಯುಗದಲ್ಲಿ ಪರ್ವತ(ಶ್ರೀಶೈಲ)ವೂ ಪ್ರಸಿದ್ಧವಾದ ಯಾತ್ರಾ ಸ್ಥಳಗಳೆಂದು ಹೇಳಿ-ಆ ಯಾವ ಯಾತ್ರಾಸ್ಥಳಗಳಿಗೂ ತಾವು ಹೋಗದೆ-ಅಲ್ಲಿರುವ ಕೇತಾರೇಶ್ವರ ವಿಶ್ವೇಶ್ವರ ವಿರೂಪಾಕ್ಷ ಮಲ್ಲಿಕಾರ್ಜುನ ಎಲ್ಲ ಲಿಂಗಗಳ ಏಕಸ್ವರೂಪಿಯೇ ಜಂಗಮವೆಂದು ತಾವು ನಂಬಿರುವುದಾಗಿ ಬಸವಣ್ಣನವರು ಈ ವಚನದಲ್ಲಿ ಅರಿಕೆ ಮಾಡಿಕೊಂಡಿರುವರು. ಪಂಚಸ್ಥಾನಗಳಿಲ್ಲದ್ದನ್ನು ಗಮನಿಸಿರಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು