•  
  •  
  •  
  •  
Index   ವಚನ - 396    Search  
 
ಭಕ್ತನ ಭಕ್ತಸ್ಥಲ - ಲಿಂಗ-ಜಂಗಮ
ಭಕ್ತದೇಹಿಕ ದೇವನಪ್ಪ ದೇವನು ಸದ್ಭಕ್ತರ ಬಳಿಯಲು ಬಪ್ಪನಾಗಿ, ಆಳ್ದನು ಬರಲು ಆಳು ಮಂಚದ ಮೇಲಿಪ್ಪುದು ಗುಣವೇ? ಹೇಳಾ. ಕೂಡಲಸಂಗಮದೇವರು- ಜಂಗಮರೂಪಾಗಿ ಸಂಗಯ್ಯ ಬಂದಾನೆಂದು ಎಂದೆಂದೂ ನಾನು ಮಂಚವನೇರದ ಭಾಷೆ!
Transliteration Bhaktadēhikadēvanappa dēvanu sadbhaktara baḷiyalu bappanāgi, āḷdanu baralu āḷu man̄cada mēlippudu guṇavē? Hēḷā. Kūḍalasaṅgamadēvaru- jaṅgamarūpāgi saṅgayya bandanendu endendū nānu man̄cavanērada bhāṣe!
Manuscript
English Translation 2 When the master comes, As a god who has taken a bhakta's form, Draws near his devotees, tell me Is it becoming for the servant to be On the cot? I take my pledge: in case Lord Kūḍala Saṅgama should come As Jaṅgama, I,ll never ascend the cot! Translated by: L M A Menezes, S M Angadi
Hindi Translation भक्तदेही देव के सद्भक्तों के समीप आने पर, कहो, प्रभु के आने पर सेवक का पलंग पर बैठना उचित है? जंगम के रूप में संगमेश कहीं न आ जाय, मैंने कभी पलंग पर न चढने की प्रतिज्ञा की है, कूडलसंगमदेव ॥ Translated by: Banakara K Gowdappa
Telugu Translation భక్త దేహిక దేవుడై స ద్భక్తుల సన్నిధి కరుదెంచు దేవుడు స్వామి రాగ భటుడు మంచముపై నుంట గుణమే పల్కుమా? కూడల సంగమదేవుడు జంగమ రూపమున నెపుడు వచ్చునో యని మంచ మెక్కనిదే నా బాస Translated by: Dr. Badala Ramaiah
Tamil Translation பக்தனின் உடலில் உறையும் கடவுள், உயர்ந்த பக்தரின் இருப்பிடத்திற்கு வருவான். ஆள்பவன் வரும்காலை சேவகன் கட்டிலின் மீதிருப்பது தகுமோ? கூறுவாய் கூடல சங்கமதேவனே, ஜங்கமர் உருவில் சங்கய்யன் வருவானென என்றென்றும் மஞ்சம் ஏறுவதில்லை இது என் சூளுரை. Translated by: Smt. Kalyani Venkataraman, Chennai
Marathi Translation भक्तदेही म्हणतात देवाला कारण सद्भक्ताजवळ तो राहतो. मालक येता मंचावर नोकराने थांबणे योग्य ? सांगावे. कूडलसंगमदेवा, जंगमरुपात संगय्या येतील म्हणून कधीही मी मंचावर चढणार नाही अशी शपथ घेतली. Translated by Shalini Sreeshaila Doddamani
ಶಬ್ದಾರ್ಥಗಳು ಒಪ್ಪ = ; ಜಂಗಮ = ; ದೇಹಿಕ = ;
ಕನ್ನಡ ವ್ಯಾಖ್ಯಾನ ಭಕ್ತರ ದೇಹ ತನ್ನ ದೇಹವಾದ ದೇವರು ಆ ಭಕ್ತರ ಬಳಿಗೆ ಬರುವುದು ಸಹಜ. ಹೀಗಾಗಿ ಶಿವನು ಜಂಗಮರೂಪವನ್ನು ಧರಿಸಿ ಭಕ್ತನಾದ ನನ್ನ ಬಳಿಗೆ ಬಂದಾಗ-ಯಾವ ಘಳಿಗೆಯಲ್ಲಿ ಬರುವನೋ ತಿಳಿಯದು-ನಾನು ಮಂಚದ ಮೇಲಿದ್ದರೆ ನನ್ನ ಗತಿಯೇನು ಎನ್ನುತ್ತ-ಬಸವಣ್ಣನವರು ಯಾವತ್ತೂ ಮಂಚವನ್ನೇ ಏರುವುದಿಲ್ಲವೆಂದು ಪ್ರತಿಜ್ಞೆ ಮಾಡಿರುವ ವಚನವಿದು. ಸ್ವಾಮಿ ಬಂದಾಗ ಸೇವಕನು ಮಂಚದ ಮೇಲಿರಬಲ್ಲನೆ ? ಈ ಎಚ್ಚರದಿಂದ ಬಸವಣ್ಣನವರು ಎಂದೂ ಮಂಚ(ದಂಥ ಎತ್ತರವಾದ ಪೀಠ)ಗಳ ಮೇಲೆ ಕುಳಿತುಕೊಳ್ಳಲೇ ಇಲ್ಲ. ಮಂಚವೆಂದರೆ ಥಟ್ಟನೆ ಇಳಿಯಲು ಬಾರದ (ಎತ್ತರವಾದ) ಆಸನವೆಂದೇ ಕಲ್ಪಿಸಿಕೊಳ್ಳಬೇಕಾಗುವುದು. ಹೀಗಿರುವಲ್ಲಿ ಬಸವಣ್ಣನವರನ್ನು ಸಿಂಹಾಸನದ ಮೇಲೆ ಚಿತ್ರಿಸಿ ತೋರಿಸುವುದು ಅವಾಸ್ತವ ಅಬದ್ಧ. ವಿ : ಕೇಶಿರಾಜನು ಕೆಲವು ವಿಧವಾದ ಮಂಚಗಳ ಉಲ್ಲೇಖ ಮಾಡಿರುವನು : ಕಾಂಚನ ಮಂಚ, ರತ್ನ ಮಂಚ, ಸೆಳೆ ಮಂಚ, ತೂಗು ಮಂಚ (ನೋಡಿ ಸೂತ್ರ-312). ಮತ್ತು ಜಂಗಮರು ಬಸವಣ್ಣನವರಿದ್ದಲ್ಲಿಗೆ ಪೂರ್ವಸೂಚನೆ ಕೊಡದೆ ಅಡ್ಡಿಯಿಲ್ಲದೆ ಅವಾರಿಯಾಗಿ ಹೋಗುತ್ತಿದ್ದರೆಂಬುದು ಈ ವಚನದಿಂದ ಸ್ಪಷ್ಟವಾಗುವುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು