ಭಕ್ತನ ಭಕ್ತಸ್ಥಲ - ಭಾವಶುದ್ದಿ
ಜಂಗಮದ ಸನ್ನಿಧಿಯಲ್ಲಿ ನಾನು
ವಾಹನವನೇರಲಮ್ಮೆ; ಏರಿದರೆ ಭವ ಹಿಂಗದು,
ಅದೇನು ಕಾರಣ: ಮುಂದೆ ಶೂಲವನೇರುವ ಪ್ರಾಪ್ತಿಯುಂಟಾದ ಕಾರಣ,
ಜಂಗಮ ಬರಲಾಸನದಲ್ಲಿರಲಮ್ಮೆ: ಇದ್ದರೆ ಭವ ಹಿಂಗದು!
ಏನು ಕಾರಣ: ಮುಂದೆ ಕಾಯ್ದಿಟ್ಟಿಗೆಯ ಮೇಲೆ
ಕುಳ್ಳಿರಿಸುವ ಪ್ರಾಪ್ತಿಯುಂಟಾದ ಕಾರಣ.
ಜಂಗಮದ ಮುಂದೆ ದಿಟ್ಟತನದಲ್ಲಿ ಬೆರೆತು ನಿಂದಿರಲಮ್ಮೆನು:
ನಿಂದರೆ ಭವ ಹಿಂಗದಾಗಿ!
ಏನು ಕಾರಣ! ಮುಂದೆ ಹೆಡಗುಡಿಯ ಕಟ್ಟಿ
ಕುಳ್ಳಿರಿಸುವ ಪ್ರಾಪ್ತಿಯುಂಟಾದ ಕಾರಣ!
ಇಂತೀ ಬಾಧೆ ಭವಂಗಳಿಗಂಜುವೆನಯ್ಯಾ.
ನಿನ್ನವರ ಸುಳುಹು ನೀನೆಂದೇ ಭಾವಿಸಿ ತೊತ್ತು-ಭೃತ್ಯನಾಗಿಪ್ಪೆನಯ್ಯಾ,
ಕೂಡಲಸಂಗಮದೇವಾ.
Transliteration Jaṅgamada sannidhiyalli nānu
vāhanavanēralam'me; ēridare bhava hiṅgadu,
adēnu kāraṇa: Munde sūlavanēruva prāptiyuṇṭāda kāraṇa,
jaṅgama baralāsanadalli iralam'me: Iddare bhava hiṅgadu!
Ēnu kāraṇa: Munde kāyda iṭṭigeya mēle
kuḷḷirisuva prāptiyuṇṭāda kāraṇa.
Jaṅgamada munde diṭṭatanadalli beretu nindiralam'menu:
Nindare bhava hiṅgadāgi!
Ēnu kāraṇa! Munde heḍaguḍiya kaṭṭi
kuḷḷirisuva prāptiyuṇṭāda kāraṇa!
Intī bādhe bhavaṅgaḷigan̄juvenayyā.
Ninnavara suḷuhu nīnendē bhāvisi tottu-bhr̥tyanāgippenayyā,
kūḍalasaṅgamadēvā.
Manuscript
English Translation 2 In the presence of the Jaṅgama
I cannot mount the carrier: if I do,
My life-wheel does not cease!
For my reward shall be
To mount the gallows in my next.
I cannot be in the seat
Of the Jaṅgama, who comes:
And if I do,
My life-wheel does not cease!
For my reward shall be
To be, in my next, made to sit
On burning bricks.
I cannot insolently mix, and stand
Before the Jaṅgama ; for if I stand,
My life-wheel does not cease;
For my reward shall be
To be, in my next, made to sit
Bound hand and foot!
These penal births I fear, O Lord....
Thinking the movement of Thine own
Is but Thyself, I rest
Thy humble servant, Lord
Kūḍala Saṅgama!
Translated by: L M A Menezes, S M Angadi
Hindi Translation जंगम की सन्निधि में
मैं वाहन पर नहीं चढ सकता,
चढूँ तो भव से मुक्ति नहीं,
क्योंकि पश्चात् शूल पर चढ्ने की गति प्राप्त होगी ॥
जंगम के आने पर मैं आसन पर नहीं रह सकता
रहूँ, तो भव से मुक्ति नहीं,
क्योंकि पश्चात् तपी ईंट पर
बैठने की गती प्राप्त होगी ।
जंगम के सामने ढिटाई के साथ
मिलकर खडा नहीं रह सकता,
खडा होऊँ, तो भव से मुक्ति नहीं,
क्योंकि पश्चात् हाथ पैर बंधवाकर
बैंठने की गति प्राप्त होगी ।
अतः इन भव-बाधाओं से डरता हूँ
भवदियों के आगमन को तुम्हीं मान
मैं नम्र सेवक बनता हूँ कूडलसंगमदेव ॥
Translated by: Banakara K Gowdappa
Telugu Translation జంగముల ముందు నేను
వాహనమెక్క జంకెద
వచ్చిన జన్మ తొలగక
మున్ముందు శూలము నెక్కెడి ముప్పు తప్పని కారణమున
జంగమ మేతేర ఆసనమున నుండలేను
ఉన్న జన్మ మడగక
మున్ముందు కాలెడి ఇటిక పై
కాల్మోపు కష్టంబు కలుగు గాన
జంగముల ముందు దిట్టతనమూని
నిల్వ వెఱచెద నిల్చిన జన్మ అడగక
మున్ముందు పెడ కేలు గట్టుకొని
పడియుండు కష్టము వచ్చు గాన;
ఈ భవబాధలకు వెఱతునయ్యా
నీ వారి జాడలే నీవని నెఱనమ్మి
భృత్యుడై గొల్తునయ్యా కూడల సంగమదేవ!
Translated by: Dr. Badala Ramaiah
Tamil Translation ஜங்கமனின் எதிரில் வாகனத்தில் ஏறுவதோ!
ஏறின் பிறவி அகலாது
எதனால், பிறகு சூலத்தின் மீது ஏறும் நிலைவரும்
ஜங்கமன் வரின் அமர்ந்திருத்தலாகாது
இருப்பின் பிறவி அகலாது
எதனால், பிறகு எரியும் சூளையின் மீது
அமரும் நிலை வரும்.
ஜங்கமன் வரின் துணிவுடன் செருக்குற்று இரலாகாது
அவ்விதமிருப்பின் பிறவி அகலாது
எதனால், பிறகு கைகளைப் பின்னால் பிணைத்து
அமர்த்தும் நிலை வரும். இத்தகைய
துயரம், பிறவிகளுக்கு அஞ்சுவேன் ஐயனே
நிம்மவரின் அடையாளம் நீர் எனக் கருதி
தொண்டனாக இருப்பேன், கூடல சங்கமதேவனே.
Translated by: Smt. Kalyani Venkataraman, Chennai
Marathi Translation
जंगमाच्या सान्निध्यात वाहनावर चढत नाही.
चढल्याने भव सुटत नाही.
याचे कारण पुढे सुळावर चढविले जाण्याची शक्यता आहे.
जंगम आल्यावर आसनावर बसत नाही.
बसल्याने भव सुटत नाही.
कारण पुढे जळत्या विटेवर बसविले जाण्याची शक्यता आहे.
जंगमाच्या समोर आखडून उभा रहात नाही.
उभारल्याने भव सुटत नाही. याचे कारण,
पुढे भविष्यात करकचून बांधून बसविले जाण्याची शक्यता आहे.
अशा प्रकारच्या भवबंधनाला घाबरतो.
तुमच्या लोकांचे आगमन हे तुमचेच आगमन समजून
दास-चाकर होऊन राहतो देवा कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಜಂಗಮ = ; ಪ್ರಾಪ್ತಿ = ; ಭವ = ; ಸನ್ನಿಧಿ = ; ಸೂಲ = ;
ಕನ್ನಡ ವ್ಯಾಖ್ಯಾನ “ಜಂಗಮರೂಪಾಗಿ ಸಂಗಯ್ಯ ಬಂದಾನೆಂದು ಎಂದೆಂದೂ ಮಂಚವನೇರದ ಭಾಷೆ” ಎಂದು ಹಿಂದಿನ ವಚನದಲ್ಲಿದ್ದರೆ-ಅಲ್ಲಿನ “ಎಂದೆಂದೂ”ಎನ್ನುವ ಮಾತನ್ನು ತಿದ್ದಲೆಂದೇ ಈ ವಚನ ಹುಟ್ಟಿಕೊಂಡಂತಿದೆ. ಜಂಗಮ ಸನ್ನಿಧಿಯಲ್ಲಿ ವಾಹನವನೇರಲಮ್ಮೆ, ಜಂಗಮ ಬರಲಾಸನದಲಿರಮ್ಮೆ-ಎಂದು ಮುಂತಾಗಿ ಜಂಗಮದ ಎದುರಿನಲ್ಲಿ ಮಾತ್ರ ಕುದುರೆ ಏರುವುದಿಲ್ಲ, ಜಂಗಮದ ಎದುರಿನಲ್ಲಿ ಮಾತ್ರ ಆಸನದಲ್ಲಿ ಇರುವುದಿಲ್ಲ ಎನಿಸಿ-ಬಸವಣ್ಣನವರ ಮೂಲ ಪ್ರತಿಜ್ಞೆಗೆ ತಿದ್ದುಪಡಿ ತಂದಂತಿದೆ. ಈ ವಚನದಲ್ಲಿ ಅದು ಬಸವ ಭಕ್ತರ ಅಭಿಮಾನ; ವಚನಬಂಧವೂ ನಿಜವಚನಗಳ ಬಂಧಕ್ಕಿಂತ ಭಿನ್ನವಾಗಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು