•  
  •  
  •  
  •  
Index   ವಚನ - 398    Search  
 
ಭಕ್ತನ ಭಕ್ತಸ್ಥಲ - ಲಿಂಗ-ಜಂಗಮ
ಜಂಗಮವಿರಹಿತ ಲಿಂಗಾರ್ಚನೆ ಓಡ ಬಲಲೆರಿದ ಜಲದಂತೆ! ಜಂಗಮಸನ್ನಿಹಿತ ಲಿಂಗಾರ್ಚನೆ: ಇದೆ ಭಕ್ತಿಗೆ ಪಥವಯ್ಯಾ. ಜಂಗಮ ಪ್ರಸಾದಭೋಗೋಪಭೋಗವು: ಎನಗಿದೇ ಲಿಂಗಾರ್ಚನೆ. ಬೇರೆ ಮತ್ತೊಂದರಿದೆನಾದರೆ, ಕೂಡಲಸಂಗಮದೇವ ನರಕದಲ್ಲಿಕ್ಕುವ.
Transliteration Jaṅgamavirahita liṅgārcane cālane bilalereda jaladante! Jaṅgamasannihita liṅgārcane: Ide bhaktige pathavayya. Jaṅgamaprasādabhōgōpabhōgavu: Enagide liṅgārcane. Bēre mattondanaridenādare, kūḍalasaṅgamadēva narakadallikkuva.
Manuscript
English Translation 2 Like water poured into the hole of a skull Is Liṅga-worship apart from Jaṅgama ! But Liṅga-worship before a Jaṅgama That is the path to piety, good Sir! To enjoy the offering and for a second time, Enjoy the offering offered back- The Prasāda of Jaṅgama, that That's Liṅga-worship for me. If I recognise aught else, Lord Kūḍala Saṅgama Will damn me in hell ! Translated by: L M A Menezes, S M Angadi
Hindi Translation जंगम रहित लिंगार्चन फूटे मटके में भरे जल सा है। जंगम की सन्निधि में लिंगार्चन करना, भक्ति का पथ है। जंगम-प्रसाद भोगोपभोग है, मेरे लिए यही लिंगार्चन है। किसी और को जानूँ, तो कूडलसंगमदेव नरक में डाल देंगे ॥ Translated by: Banakara K Gowdappa
Telugu Translation జంగమము లేని లింగహజ ఓటి పెంచునబడు జలంబుగ జంగమ సన్నిధి లింగపూజ భక్తి కి మార్గమయ్యా జంగమ ప్రసాద భోగోప భోగమిదే లింగార్చనమయ్యా! నాకు వేఱె యింకొక్కటి తెలిసినట్లేన సంగమదేవుడు నరకమునకు దొక్కునయ్యా! Translated by: Dr. Badala Ramaiah
Tamil Translation ஜங்கமனற்ற இலிங்க பூசை, பள்ளத்தில் இறைத்த நீர் அனையதாம் ஜங்கமனுள்ள இலிங்க பூசை, இதுவே பக்திக்கு வழி ஐயனே. ஜங்கம பிரசாதம் மேலாக இன்பமாம் எனக்கு இதுவே இலிங்க பூசை ஐயனே வேறு மற்றொன்றை அறிந்தேன் எனின் கூடல சங்கமதேவன், நரகத்திலிடுவான். Translated by: Smt. Kalyani Venkataraman, Chennai
Marathi Translation जंगमासहित करिता लिंगार्चन तीच भक्ति, जाण, पूर्ण रूप लिंगार्चन करिता, जंगमविरहित भंगल्या घटात, जळ जैसे जंगमप्रसाद, विधियुक्त सेवन खरे लिंगार्चन, हेचि होय कूडलसंगमदेवा! जाणें नच अन्य तोचि नरक होय, मनी घेता अर्थ – आचारमूर्ति जंगम गुरूजनांना अन्न, वस्त्र व संपती दान (दासोह) फक्त लिंगार्चना करणे म्हणजे एखाद्या फुटक्या मातीच्या मडक्यात पाणी भरल्याप्रमाणे होय म्हणून जंगम दासोह बरोबरच लिंगार्चना करीन. हीच खरी ईश्वरी भक्ति होय अन्य मार्गाचा अवलंब केल्यास किंवा आपल्या सोयीचा मार्ग धरल्यास घोर नरक चुकणार नाही. म्हणून हे कूडलसंगमदेवा, जंगम - गुरुजनांना लिंगार्चने इतकेच महत्व देईन. Translated by Rajendra Jirobe, Published by V B Patil, Hirabaug, Chembur, Mumbai, 1983 जंगमविरहीत लिंगार्चना ही फुटक्या तव्यावर पाणी टाकण्यासम, जंगमसहित लिंगार्चना भक्तीपथ आहे देवा. जंगमप्रसाद भोगोपभोग हीच माझी लिंगार्चना आहे. यास सोडून दुसरा मार्ग धरला तर कूडलसंगमदेव नरकात ठेवील. Translated by Shalini Sreeshaila Doddamani
ಶಬ್ದಾರ್ಥಗಳು ಅರ್ಚನೆ = ಪೂಜೆ; ಅರ್ಚನೆ = ಪೂಜೆ; ಜಂಗಮ = ; ಪ್ರಸಾದ = ; ಬಿಲ = ; ಭೋಗ = ; ಸನ್ನಿಹಿತ = ;
ಕನ್ನಡ ವ್ಯಾಖ್ಯಾನ (374 ನೇ ವಚನ ವ್ಯಾಖ್ಯಾನವನ್ನು ನೋಡಿ). ಜಂಗಮವಿಲ್ಲದೆ ಲಿಂಗಪೂಜೆ ಮಾಡುವುದೂ, ಒಡೆದ ಮಡಕೆಯಲ್ಲಿ ನೀರು ತುಂಬಿಡುವುದೂ ಒಂದೇ-ನಿಷ್ಪ್ರಯೋಜಕ ಜಂಗಮವನ್ನು ಕೂಡಿಕೊಂಡು ಮಾಡುವ ಲಿಂಗಾರ್ಚನೆಯೇ ಭಕ್ತಿಗುಚಿತ-ಜಂಗಮಪ್ರಸಾದ ಲಭಿಸಿದರೆ ಅದೇ ನನಗೆ ಲಿಂಗಪೂಜೆಯೆನ್ನುತ್ತ ಬಸವಣ್ಣನವರು ಜಂಗಮದಾಸೋಹವನ್ನು ಅವಧಾರಿಸುತ್ತಿರುವರು. ಆದರೆ ಭಕ್ತನು ಲಿಂಗಪೂಜೆಮಾಡುವಾಗಲೆಲ್ಲ ಜಂಗಮವನ್ನು ಕೂಡಿಕೊಂಡೇ ಇರಬೇಕು-ಇಲ್ಲದಿದ್ದರೆ ಆ ಲಿಂಗಪೂಜೆ ವ್ಯರ್ಥ-ಎಂಬುದು ಈ ವಚನದ ಆಶಯವಲ್ಲ. ಲಿಂಗಪೂಜೆಯು ಸಾರ್ಥಕವಾಗಬೇಕಾದರೆ-ಬಂದ ಜಂಗಮವನ್ನು ಸತ್ಕರಿಸಬೇಕೆಂಬುದಷ್ಟೇ ಈ ವಚನದ ತಾತ್ಪರ್ಯ-ನೋಡಿ ವಚನ 401.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು