•  
  •  
  •  
  •  
Index   ವಚನ - 400    Search  
 
ಭಕ್ತನ ಭಕ್ತಸ್ಥಲ - ಲಿಂಗ-ಜಂಗಮ
ಸಮಯೋಚಿತದಲ್ಲಿ ಲಿಂಗಾರ್ಚನೆಯ ಮಾಡುತಿಪ್ಪನಾ ಭಕ್ತನು: ಮಾಡಿದಡೆ ಮಾಡಲಿ: ಮಾಡಿದರೆ ತಪ್ಪೇನು? ಆ ಜಂಗಮದ ಶಬ್ದವ ಕೇಳಿ ಪ್ರಸಾದಕ್ಕೆ ಕೈದುಡುಕಿದರೆ ಅದು ಪ್ರಸಾದವಲ್ಲ: ಕಲ್ಮಷ! ಆ ಸಮಯೋಚಿತದಲ್ಲಿ ಬಂದ ಜಂಗಮದ ಶಬ್ದವ ಕೇಳಿ ಪ್ರಸಾದಕ್ಕೆ ಕೈದೆಗೆದರೆ, ಅದು ಲಿಂಗಕ್ಕೆ ಬೋನ. ಇದು ಕಾರಣ, ಕೂಡಲಸಂಗಮದೇವಾ, ಇಂತಪ್ಪ ಸದಾಚಾರಿಗಳನೆನಗೆ ತೋರಾ.
Transliteration Samayōcitadalli liṅgārcaneya māḍutippanā bhaktanu: Māḍidaḍe māḍali: Māḍidare tappēnu? Ā jaṅgamada śabdava kēḷi prasādakke kaiduḍukidare adu prasādavalla: Kalmaṣa! Ā samayōcitadalli banda jaṅgamada śabdava kēḷi prasādakke kaidegedare, adu liṅgakke bōna. Idu kāraṇa, kūḍalasaṅgamadēvā, intappa sadācārigaḷanenage tōrā.
Manuscript
English Translation 2 He is the bhakta who makes The Liṅga -worship at the proper time: If he does, well; if not, what's wrong? On hearing the Jaṅgama's voice, To put your hand to the Prasāda, That's sin! But hearing the voice Of the Jaṅgama come at the proper time, To withdraw your hand from the Prasāda , That's feast for Liṅga ! Therefore, O Kūḍala Saṅgama Lord, Show me such real devotees. Translated by: L M A Menezes, S M Angadi
Hindi Translation उचित समय पर भक्त लिंगार्चन करता है, तो करने दो, सद्भक्त करने में क्या दोष है? जंगम की वाणी सुनकर प्रसादार्थ हाथ बढाएँ, तो वह प्रसाद नहीं, किल्विष है ! उचित समय पर आगत जंगम की वाणी सुनकर प्रसाद से हाथ हटा लें, तो वह लिंग का नैवेद्य होता है । अतः कूडलसंगमदेव, मुझे ऐसे सदाचारियों को दिखाओ ॥ Translated by: Banakara K Gowdappa
Telugu Translation సమయోచితముగ లింగార్చన సలుపువాడే భక్తుడు వాడు. చేసినా చేయక మానినా తప్పేమి? జంగము డనుపేరు విన్నంతనే ఆతడిచ్చు ప్రసాదమునకు కై సాప ప్రసాదము కాదది పాషాణము సమయోచితముగ వచ్చు జంగమ శబ్దము విని కేల్ముడిచెనేని లింగమునకు భోనభమగు, చూపు మోప్రభూ నాకు సదాచారుల Translated by: Dr. Badala Ramaiah
Tamil Translation தக்க தருணத்தில் இலிங்கபூசையைப் பக்தன் செய்வானன்றோ செய்தால் செய்யட்டும், செய்யின் தவறென்ன? ஜங்கமனின் ஒலியைக் கேட்டு திருவமுதிற்குக் கை நீட்டின், அது பிரசாதமன்று, நஞ்சு தக்க தருணத்தில் வந்த ஜங்கமனின் ஒலிகேட்டு பிரசாதத்திற்கு கை நீட்டாதிருப்பின் அது இலிங்கத்திற்கு நிவேதனம் இதனால் கூடல சங்கம தேவனே, இத்தகு நன்னெறியுடையோரை எனக்குக் காட்டுவாய் ஐயனே. Translated by: Smt. Kalyani Venkataraman, Chennai
Marathi Translation समयोचित लिंगार्चना भक्त करीत असेल तर करु देत, करण्यात कोणता दोष आहे? त्या जंगमाचा शब्द ऐकून प्रसादासाठी हात पसरला तर तो प्रसाद नाही, किल्मीष. त्या समयी आलेल्या जंगमाचा शब्द ऐकून प्रसादापासून हात दूर केला तर तो लिंगाचा नैवेद्य आहे. म्हणून कूडलसंगमदेवा, अशा सदाचारीचे दर्शन करावे. Translated by Shalini Sreeshaila Doddamani
ಶಬ್ದಾರ್ಥಗಳು ಅರ್ಚನೆ = ಪೂಜೆ; ಕಿಲ್ಬಿಷ = ; ಕೈದುಡುಕು = ; ಕೈದೆಗೆ = ; ಪ್ರಸಾದ = ; ಬೋನ = ;
ಕನ್ನಡ ವ್ಯಾಖ್ಯಾನ ವೇಳೆ ಬಂದಾಗ ಭಕ್ತನು ಲಿಂಗಪೂಜೆಯನ್ನು ಮಾಡತೊಡಗುವನು-ತಪ್ಪೇನೂ ಇಲ್ಲ. ಆದರೆ ತಾನು ಪೂಜೆ ಮಾಡುತ್ತಿರುವಾಗ-ಜಂಗಮ ಮನೆಗೆ ಬಂದನೆಂಬ ವಾರ್ತೆಯನ್ನು ಕೇಳಿಯೂ-ಪೂಜೆಯಾದ ಮೇಲೆ-ತಾನೊಬ್ಬನೇ ಉಂಡನಾದರೆ-ಅದು ಊಟವಲ್ಲ ಪಾಪಕರ್ಮ. ಬಂದ ಜಂಗಮದ ಜೊತೆಗೂಡಿ ಉಂಡನಾದರೆ-ಅದು ಲಿಂಗಕ್ಕೂ ಅರ್ಪಿತವಾಗುವುದು. ಹೀಗೆ ಜಂಗಮದಾಸೋಹವೇ ಸದಾಚಾರ-ಅಂಥ ಜಂಗಮ ದಾಸೋಹಿಗಳ ದರ್ಶನ ಪಡೆಯಲು ನಾನು ಇಚ್ಛಿಸುತ್ತೇನೆ-ಎನ್ನುವರು ಬಸವಣ್ಣನವರು. (ಕೈದುಡುಕು : ಕೈಚಾಚು, ಕೈದೆಗೆ, ಕೈಯನ್ನು ಹಿಂದಕ್ಕೆ ತೆಗೆದುಕೋ, ಬೋನ : ನೈವೇದ್ಯ, ಅನ್ನ).

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು