•  
  •  
  •  
  •  
Index   ವಚನ - 402    Search  
 
ಭಕ್ತನ ಭಕ್ತಸ್ಥಲ - ಜಂಗಮ
ಲಾಂಛನವ ಕಂಡು ನಂಬುವೆ: ಅವರಂತರಂಗವ ನೀನೇ ಬಲ್ಲೆ! ತೊತ್ತಿಂಗೆ ತೊತ್ತುಗೆಲಸವಲ್ಲದೆ, ಅರಸರ ಸುದ್ದಿ ಎನಗೇಕಯ್ಯಾ? ರತ್ನಮೌಕ್ತಿಕದಚ್ಚು, ಕೂಡಲಸಂಗಮದೇವಾ ನಿಮ್ಮ ಶರಣರು.
Transliteration Lān̄chanava kaṇḍu nambuve: Avarantaraṅgava nīnē balle! Tottiṅge tottugelasavallade, arasara suddi ēnagēkayyā? Ratnamauktikadaccu, kūḍalasaṅgamadēvā nim'ma śaraṇaru.
Manuscript
English Translation 2 I see the robes and I believe: Thou know'st the secrets of their hearts! Enough unto the drudge his drudgery: What are to me the King's affairs? Thy Śaraṇās, Kūḍala Saṅgama Lord, Are of the stamp of gems and pearls. Translated by: L M A Menezes, S M Angadi
Hindi Translation लांछन देख विश्वास करता हूँ, उनका अंतरंग तुम ही जानो मुझको भृत्यवृत्ति के सिवा राजाओं का समाचार क्यों? कूडलसंगमदेव, तव शरण मुक्ता-मणि के साँचे हैं ॥ Translated by: Banakara K Gowdappa
Telugu Translation లాంఛనము చూచి నమ్మెద ఒక వారి యంతరంగము నీకే తెలుసు భృత్యునకు భృత్యాచారమె కాని స్వామి సంగతి నా కేలనయ్యా? స్వచ్ఛమగు రత్నమౌక్తికములు నీ శరణులు కూడల సంగమ దేవ! Translated by: Dr. Badala Ramaiah
Tamil Translation திருச்சின்னமணிந்தோனைக் கண்டு நம்புவேன் அவருடைய திருவுள்ளத்தை நீயே அறிவாய் தொண்டனுக்குத் தொண்டனின் பணியல்லதே அரசனைக் குறித்த செய்தி நமக்கு எதற்கு ஐயனே? கூடல சங்கமதேவனே உம்மடியார் இரத்தின, முத்தின் அச்சனையவரன்றோ Translated by: Smt. Kalyani Venkataraman, Chennai
Marathi Translation इष्टलिंग लांछन पाहून विश्वास ठेवतो. त्याचे अंतरंग तुम्हीच जाणता. सेवकाला सेवेशी कर्तव्य, राजाच्या वार्ताशी मला काय कर्तव्य? रत्न-मोत्यांची रास आहेत आपले शरण कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಅಂತರಂಗ = ಹೃದಯಾಂತರಂಗ; ತೊತ್ತು = ; ಮೌಕ್ತಿಕ = ; ಲಾಂಛನ = ;
ಕನ್ನಡ ವ್ಯಾಖ್ಯಾನ ಶೈವಲಾಂಛನವಾದ ವಿಭೂತಿ ಮುಂತಾದುದರ ಬಗ್ಗೆ ನನಗೆ ವಿಶ್ವಾಸವಿದೆ-ಆದರೆ ಅದನ್ನು ಬಹಿರಂಗದಲ್ಲಿ ಧರಿಸಿ ಬಂದವರ ಅಂತರಂಗದಲ್ಲಿ ತಕ್ಕ ಘನತೆಯಿದೆಯೋ ಇಲ್ಲವೋ ನನಗೆ ತಿಳಿಯದು. ಶಿವನೇ, ನೀನು ಸರ್ವಾಂತರ್ಯಾಮಿಯಾದುದರಿಂದ-ಅವರ ಅಂತರಂಗವನ್ನು ನೀನೇ ಬಲ್ಲೆ. ನನ್ನ ಕರ್ತವ್ಯವಾದರೋ-ಎಲ್ಲಿ ಶಿವಲಾಂಛನವಿದೆಯೋ ಅಲ್ಲಿ ಭಕ್ತಿ ಮಾಡುವುದಷ್ಟೇ. ನಾನು ಶಿವಶರಣರ ಗುಲಾಮನಾದುದರಿಂದ-ನನ್ನ ಪರಿಮಿತಿ ಅಷ್ಟಕ್ಕೇ ಸೀಮಿತ. ಅರಸರಂತಿರುವ ಶರಣರ ಅಂತರಂಗವನ್ನು ಪರೀಕ್ಷಿಸಿ ನೋಡುವ ವ್ಯರ್ಥ ಸಾಹಸ ನನಗೇಕೆ-ಎನ್ನುತ್ತ ಬಸವಣ್ಣನವರು ಆ ಶರಣರನ್ನು ರತ್ನಮೌಕ್ತಿಕದಚ್ಚು ಎಂದಿರುವರು. ಮುತ್ತುಗಳು ಆಕಾರ-ವರ್ಣ-ಗಾತ್ರಗಳಿಂದ ವಿವಿಧವಾದುವಾದರೂ-ಮೂಲಧಾತುವಿನಿಂದ ಅಮೂಲ್ಯವೇ ಆಗಿವೆಯೆನ್ನುವರು. (ರತ್ನಮೌಕ್ತಿಕ : ಜಾತಿಮುತ್ತು, ಅಚ್ಚು : ಪ್ರತಿರೂಪ) ಲಾಂಛನಕ್ಕೆ ತಕ್ಕ ಆಚಾರವಿಲ್ಲದಿದ್ದರೂ ಭಕ್ತರನ್ನು ಶರಣರನ್ನು ಜಂಗಮರನ್ನು ಬಸವಣ್ಣನವರು (ಮೇಲಿನ ವಚನದಲ್ಲಿ ಹೇಳಿಕೊಂಡಿರುವಂತೆ) ಮನ್ನಿಸುತ್ತಿದ್ದರೆಂದು ತಿಳಿಯಬಾರದು. ಅನಾಚಾರಿಗಳೆಂಬುದು ತಮಗೆ ಸ್ಪಷ್ಟವಾದರೆ ಅವರಿಗೆ ಛೀಮಾರಿ ಹಾಕದೆ ಸುಮ್ಮನೆ ಬಿಡುತ್ತಿರಲಿಲ್ಲ (ನೋಡಿ ವಚನ 760). ಆದರೆ ಸಂಶಯಾಸ್ಪದವಾದಾಗ-ಪತ್ತೇ ಕಾರ್ಯದಲ್ಲಿ ತೊಡಗದೆ-ಶಿವನ ಮೇಲೆ ಭಾರ ಹಾಕಿ ಯಥೋಚಿತವಾಗಿ ಒಟ್ಟಾರೆಯಾಗಿ ಶಿವಭಕ್ತರನ್ನು ಗೌರವದಿಂದಲೇ ನಡೆಸಿಕೊಳ್ಳುತ್ತಿದ್ದರು-ಎಂಬುದನ್ನಷ್ಟೇ ಈ ವಚನಾಧಾರದಿಂದ ನಾವು ತಿಳಿಯಬೇಕಾಗಿದೆ. ಇದೇ ಅರ್ಥದಲ್ಲಿ ಈ ಮುಂದಿನ ವಚನವನ್ನು ಅರ್ಥೈಸಬೇಕಾಗಿದೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು