ಕೆಂಡದಲ್ಲಿಟ್ಟಡೆ ಮೆಯ್ ಬೆಂದುದೆಂಬರು:
ಕೊಂಡಿಟ್ಟವನ ಕೈ ಮುನ್ನವೇ ಬೆಂದುದು!
ನೊಂದೆನಾನು ನೊಂದೆನಯ್ಯಾ, ಬೆಂದೆನಾನು ಬೆಂದೆನಯ್ಯಾ!
ಕೂಡಲಸಂಗನ ಶರಣರ ಕಂಡು ಕಾಣದಂತಿದ್ದರೆ
ನಾನಂದೇ ಬೆಂದೆನಯ್ಯಾ!
Transliteration Keṇḍadalliṭṭaḍe mey bendudembaru:
Koṇḍiṭṭavana kai munnave bendudu!
Nondenānu nondenayyā, bendenānu bendenayyā!
Kūḍalasaṅgana śaraṇara kaṇḍu kāṇadantiddāre
nānandē bendenayyā!
Manuscript
English Translation 2 They say a body burns if placed
Upon live coal: the hand
That placed it already burns!
I am in pain, O Lord, I am on fire!
If, seeing Kūḍala Saṅga's Śaraṇās ,
I act as if I didn't, on the spot
I burn, O Lord!
Translated by: L M A Menezes, S M Angadi
Hindi Translation कहते हैं, अंगार पर अंग रखने से जल जाता है,
उसे रखनेवाले का हाथ पहले ही जल जाता है,
मैं व्यथित होऊँ, जल जाऊँ, भस्म होऊँ,
कूडलसंग के शरणों को देख अनदेखा रहूँ,
तो मैं उसी दिन दग्ध होऊँगा ॥
Translated by: Banakara K Gowdappa
Telugu Translation నిప్పుల బడ మేను బొబ్బలగు నందురు
తెచ్చినవాని చేయి మొదలే కాలెనయ్యా
నొచ్చితి నొచ్చితినయ్యా కందితి కందితినయ్యా
కూడల సంగని శరణుల జూచి
చూడనట్లుండిన నే నపుడే మాడితినయ్యా!
Translated by: Dr. Badala Ramaiah
Tamil Translation தீயிலிட்டால், உடல் வேகும் என்பர்
கொண்டு வைத்தவனின்
கை முன்பே வெந்தது! நொந்தேன்
ஐயனே, நான் நொந்தேன் ஐயனே
கூடல சங்கனின் அடியாரைக் கண்டு
காணாதனையதிருப்பின்
நான் அன்றே வெந்தேன் ஐயனே.
Translated by: Smt. Kalyani Venkataraman, Chennai
Marathi Translation
शरणा पाहुनिया, न पाहिलेसे करी
जळो मिथ्याचारी, टाळू पाहे
अग्नित टाकीता, जळते हे शरीर
तसे हे विकार, जाळिताती
माझा अहं मज, जाळूनिया टाकी
दुजा कोण राखी, तुझ्याविणा ?
होतसे यातना, तया कल्पनेने
अन्यथा मी नेणे, सेवेवीण
कूडलसंगमदेवा! नको मिथ्या भाव
शरणत्व सर्वस्व मज थोर
अर्थ - शिवणरणांना पाहून न पाहिल्यासारखे करणे म्हणजेच दंभाचार होय उलट तेथे एकमेव अहंकारच दिसून येतो. असे जेंव्हा माझ्या पाहण्यात येते तेव्हा मरणाआधि मरण आल्यासारखे वाटते डोळ्यांनी तो मिथ्याचार पाहवला जात नाही. अत्यंत वेदनेमुळे सर्वांग होरपळून गेल्यासारखे होते. हे कूडलसंगमदेवा शरणांना टाळण्यांची कल्पनाच मला जळून भस्म व्हावीशी वाटते.
Translated by Rajendra Jirobe, Published by V B Patil, Hirabaug, Chembur, Mumbai, 1983
आगीत टाकल्याने देह जळाला म्हणतात.
टाकणाऱ्याचा हात आधीच जळालेला असतो.
वेदना होते मला, वेदना होते, भाजतो मी भाजतो देवा.
कूडलसंगाच्या शरणांना
पाहून न पाहिल्या सारखे राहिलो तर तेव्हाही जळतो देवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಯಾರಿಗಾದರೂ ದೊಡ್ಡವರಿಗೆ ಅವಮಾನ ಮಾಡಿದರೆ ಮೊದಲು ನಮಗೆ ಅವಮಾನವಾಗಿರುವುದು-ಅನುಭವದ ವಿಷಯ. ಬಸವಣ್ಣನವರು ಇದಕ್ಕೊಂದು ಉದಾಹರಣೆಯನ್ನು ಕೊಡುವರು : ಯಾರನ್ನಾದರೂ ಬೆಂಕಿಯಲ್ಲಿ ಬಲಾತ್ಕಾರವಾಗಿ ನೂಕಿ ಹಿಡಿದಾಗ ಅವರ ಮೈ ಬೆಂದುಹೋಯಿತೆಂಬ ಮಾತು ಹಾಗಿರಲಿ-ನೂಕಿ ಹಿಡಿದವರ ಕೈ ಮೊದಲೇ ಬೆಂದು ಹೋಗಿರುವುದು.
ಹಾಗೆ ಯಾವನಾದರೊಬ್ಬ ಭಕ್ತನು ಶರಣರನ್ನು ಕಂಡಾಗ ಅವಜ್ಞೆಯಿಂದಿರುವುದು ಆ ಭಕ್ತನಿಗೆ ಮಾನತರುವ ಮಾತಲ್ಲವೆಂಬುದಭಿಪ್ರಾಯ.
“ಕೆಂಡದಲ್ಲಿಟ್ಟರೆ ಮೈ ಬೆಂದುದೆಂಬರು-ಕೊಂಡಿಟ್ಟವರ ಕೈ ಮುನ್ನವೆ ಬೆಂದುದು” ಎಂಬ ಉಪಮೆಯ ಹಿನ್ನೆಲೆಗೆ-ಸಹಗಮನಕ್ಕೆ ಇಚ್ಛಿಸದ ಹೆಣ್ಣೊಂದು ಬಲಾತ್ಕಾರಕ್ಕೆ ಒಳಗಾದ ದಾರುಣ ಚಿತ್ರವಿರುವಂತಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು