•  
  •  
  •  
  •  
Index   ವಚನ - 406    Search  
 
ಭಕ್ತನ ಭಕ್ತಸ್ಥಲ - ಲಿಂಗ-ಜಂಗಮ
ಎಡದ ಕೈಯಲಿ ನಿಗಳವನಿಕ್ಕಿ ಬಲದ ಕೈಯ ಕಡಿದುಕೊಂಡರೆ ನೋಯದಿಪ್ಪುದೆ? ಪ್ರಾಣವೊಂದಾಗಿ ದೇಹ ಬೇರಿಲ್ಲ; ಲಿಂಗವ ಪೂಜಿಸಿ ಜಂಗಮವನುದಾಸೀನವ ಮಾಡಿದರೆ ಬೆಂದೆನಯ್ಯಾ ನಾನು, ಕೂಡಲಸಂಗಮದೇವಾ!
Transliteration Eḍada kaiyalu nigaḷavanikki balada kaiya kaḍidukoṇḍare nōyadippude? Prāṇavondāgi dēha bērilla; liṅgava pūjisi jaṅgamavanudāsīnava māḍidare bendenayyā nānu, kūḍalasaṅgamadēvā!
Manuscript
English Translation 2 If I embellish the left hand with a chain And chop the right hand off, does it not hurt? Since life is one, the body's not apart: If worshipping the Liṅga , I'm indifferent to a Jaṅgama, I burn, O Kūḍala Saṅgama Lord! Translated by: L M A Menezes, S M Angadi
Hindi Translation बाएँ हाथ में निगड पहन कर दाहिना हाथ काट लेने से पीडा नहीं होगी? प्राणयुक्त तन उससे भिन्न नहीं है । लिंग-पूजा कर, जंगम की उपेक्षा करुँ, तो मैं भस्म हो जाऊँगा, कूडलसंगमदेव ॥ Translated by: Banakara K Gowdappa
Telugu Translation ఎడమచేతికి సంకెలువైచి కుడిచేతిని కత్తరించుకొన నొప్పి లేకుండునే? ప్రాణమొకటి దేహమొకటి కాదు లింగమును పూజించి జంగమము నుదాసీను జేసిన వేగితినయ్యా నేను కూడల సంగమదేవా! Translated by: Dr. Badala Ramaiah
Tamil Translation இடது கையில் விலங்கைப் பூட்டி வலது கையை வெட்டிக் கொண்டால் வலி ஏற்படாமலிருக்குமோ? உயிருடன் இணைந்ததே உடலாகும். இலிங்கத்தைப் பூசித்து, ஜங்கமரை அலட்சியம் செய்யின், வெந்தேனையனே கூடல சங்கம தேவனே. Translated by: Smt. Kalyani Venkataraman, Chennai
Marathi Translation डाव्या हातात बेडी घालून, उजवा हात तोडला तर वेदना होणार नाही का? प्राण देहापासून वेगळा नाही. लिंगपूजा करुन, जंगमाची उपेक्षा केली तर जळून जातो कूडलसंगमा. Translated by Shalini Sreeshaila Doddamani
ಶಬ್ದಾರ್ಥಗಳು ಉದಾಸೀನ = ; ಜಂಗಮ = ; ನಿಗಳ = ;
ಕನ್ನಡ ವ್ಯಾಖ್ಯಾನ ಮೈಯಲ್ಲಿ ಹರಿದಾಡುವ ಪ್ರಾಣರಕ್ತ ಒಂದೇ ಆಗಿ-ಎಡಗೈ ಬಲಗೈ ಬೇರೆಯಾದೀತೆ ? ಎಡದ ಕೈಗೆ ಕಡಗವಿಟ್ಟು ಸಿಂಗರಿಸಿಕೊಂಡು-ಬಲದ ಕೈಯನ್ನು ಕಡಿದುಕೊಂಡರೆ (ಇಡಿಯಾಗಿ ತನಗೆ) ನೋವಾಗುವುದಿಲ್ಲವೆ? ಹಾಗೆ ಶಿವಧರ್ಮದ ಎಡಗೈ-ಬಲಗೈಯಂತಿರುವ ಲಿಂಗ ಮತ್ತು ಜಂಗಮವನ್ನು ಭಿನ್ನ ಭಾವದಿಂದ ನೋಡಲಾಗದು. ಲಿಂಗವನ್ನು ಪೂಜಿಸಿ ಜಂಗಮವನ್ನು ನೋಯಿಸಿದರೆ-ಅದು ಇಡಿಯಾಗಿ ಧರ್ಮಕ್ಕಾದ ನೋವು ಮತ್ತು ಅವಮಾನ-ಎನ್ನುತ್ತಿರುವರು ಬಸವಣ್ಣನವರು. ಇಲ್ಲಿ ಲಿಂಗವನ್ನು ಎಡಗೈಗೂ, ಜಂಗಮವನ್ನು ಬಲಗೈಗೂ ಹೋಲಿಸಿರುವುದು ಅರ್ಥಪೂರ್ಣವಾಗಿದೆ. ಎಡಗೈಯಲ್ಲಿ ಲಿಂಗಪೂಜೆ, ಬಲಗೈಯಲ್ಲಿ ಜಂಗಮಕ್ಕೆ ದಾನಧರ್ಮ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು