•  
  •  
  •  
  •  
Index   ವಚನ - 407    Search  
 
ಭಕ್ತನ ಭಕ್ತಸ್ಥಲ - ಲಿಂಗ-ಜಂಗಮ
ತನುವ ನೋಯಿಸಿ, ಮನವ ಬಳಲಿಸಿ, ನಿಮ್ಮ ಪಾದವಿಡಿದವರೊಳರೆ? ಈ ನುಡಿ ಸುಡದಿಹುದೆ? ಕೂಡಲಸಂಗಮದೇವಾ, ಶಿವಭಕ್ತರ ನೋವೇ ಅದು ಲಿಂಗದ ನೋವು!
Transliteration Tanuva nōyisi, manava baḷalisi, nim'ma pādaviḍidavaroḷare? Ī nuḍi suḍadihude? Kūḍalasaṅgamadēvā, śivabhaktara nōvē adu liṅgada nōvu!
Manuscript
English Translation 2 Is there anybody who, vexing the mind And hurting the body of Śaraṇās clasp Thy feet? This thing is bound to burn them O Kūḍala Saṅgama Lord, Is it Śivabhakta's pain? It is Liṅga's pain! Translated by: L M A Menezes, S M Angadi
Hindi Translation तन दुखाकर, मन थका कर किसीने तव चरण पाया है? यह कथन भस्म न करेगा? कूडलसंगमदेव, शिवभक्तों का दुःख ही लिंग देव का दुःख है ॥ Translated by: Banakara K Gowdappa
Telugu Translation తనువు నొప్పించి మనసు కలచి నిను చేరుకొనువారు గలరే? ఈనుడి కాల్పకుండునె? కూడల సంగమదేవా భక్తులబాధే పరమాత్ముని బాధ Translated by: Dr. Badala Ramaiah
Tamil Translation உடலை வாட்டி, மனத்தை வாட்டி உம் திருவடியைச் சேர்ந்தோர் உண்டோ? இச்சொல் சுடாதிருக்குமோ? கூடல சங்கமதேவனே, அடியார்களின் வேதனை அது இலிங்கத்தின் வேதனை! Translated by: Smt. Kalyani Venkataraman, Chennai
Marathi Translation तनास बुडवून, मनास शिणवून चरण तुझे मिळवू कैसा शरण तुझा होऊ ? बोलचि तोंडून, टाकीन जाळून वाणीस का शिणवू कैसा शिवशरण तुझा होऊ ? शरण वेदना, लिंग वेदना समजाणून घेऊ कूडलसंगमात राहू ? अर्थ - शिवभक्तास कष्ट देऊन त्यांच्या शरीरास कष्टविणारे, मनास शिणविणारे, दुखविणारे परमेश्वर प्राप्तीस अपात्र होत. शिवाय एका पायावर थांबून किंवा रात्रभर उभे राहून जपतप करा. एकादशी करा ! असले शब्दच त्या भक्तांना जाळून टाकतील. शिवभक्तांना वेदना झाल्यास किंवा दु:ख पोहोचल्यास, त्याचे मन दुखविले गेल्यास लिंगदेवास दुःख देण्यासारखे होय. Translated by Rajendra Jirobe, Published by V B Patil, Hirabaug, Chembur, Mumbai, 1983 तनू दुखवून, मनाला पीडा देवून, तुमच्या चरणाची प्राप्ती करुन घेणारे आहेत? हे बोलणे जाळणार नाही? कूडलसंगमदेवा, भक्ताची वेदना हीच लिंगाची वेदना आहे. Translated by Shalini Sreeshaila Doddamani
Urdu Translation کسی کےجسم کو، د ل کواذیّتیں دے کر خُلوصِ دل سے،عقیدت سے،احترام کےساتھ تمھارے پاؤں جوچھولیں تو فائدہ کیا ہے جوسب کےغم میں نہ سلگے وہ د ل نہیں ہوتا جوتیرے شرنوں کےسینوں میں درد پلتا ہے وہی ہے لِنگ کا بھی درد کوڈلا سنگا Translated by: Hameed Almas
ಶಬ್ದಾರ್ಥಗಳು ಒಳರೆ = ; ತನು = ;
ಕನ್ನಡ ವ್ಯಾಖ್ಯಾನ ಧರ್ಮ ಮತ್ತು ದೇವರ ಹೆಸರಿನಲ್ಲಿ ತಪ ಉಪವಾಸಾದಿಗಳಿಂದ ದೇಹವನ್ನು ದಂಡಿಸುವುದೇ ಅಲ್ಲದೆ-ಬೆರಳನ್ನು ಕತ್ತರಿಸಿಕೊಳ್ಳುವುದು, ಮೂಗನ್ನು ಕೊಯ್ದುಕೊಳ್ಳುವುದು, ಹಿಂಸಾತ್ಮಕವಾಗಿಯೇ ಆತ್ಮಹತ್ಯೆ ಮಾಡಿಕೊಳ್ಳುವುದು. ವಾಮಾಚಾರಗಳಿಂದ ಉಗ್ರಧ್ಯಾನಾದಿಗಳಲ್ಲಿ ಮನಸ್ಸನ್ನು ಬಳಲಿಸುವುದು ಮುಂತಾದ ದುಷ್ಟ ಆಚರಣೆಗಳು ರೂಢಿಯಲ್ಲಿದ್ದವು. ಬಸವಣ್ಣನವರಿಗೆ ಹಿಂದಿದ್ದ ಶಿವಶರಣರಲ್ಲಿಯೂ ಈ ರೂಢಿಗಳಲ್ಲಿ ಕೆಲವು ವಿಶಿಷ್ಟ ರೀತಿಯಲ್ಲಿದ್ದವು : ಕೊಂಡ ಗುಳಿಕೇಶಿರಾಜನೆಂಬ ಶರಣನೊಬ್ಬನು ತನ್ನ ಇಷ್ಟಲಿಂಗ ಕಳೆದುಹೋಯಿತೆಂದು ತನ್ನನ್ನು ತಾನೇ ಕೊಂದುಕೊಳ್ಳಲು ನಿಶ್ಚಯಿಸಿದ್ದನು. ಎರಡನೆಯದಾಗಿ ಕೋವೂರಿನ ಅರಸನಾಗಿದ್ದ ಬೊಮ್ಮಯ್ಯನೆಂಬ ಶರಣನು ತನ್ನ ಆರಾಧ್ಯದೈವವಾದ ಅಂಬುಧಾರಾ ರಾಮನಾಥದೇವರ ಮುಂದೆ “ವೀರ ಮಾರ್ಗ”ದಿಂದ ತನ್ನನ್ನು ತಾನೇ ಪರಿಪರಿಯಾಗಿ ಕತ್ತರಿಸಿಕೊಂಡು ಸಾಯುವನು. ಇವನ ಜೊತೆಯಲ್ಲಿ ವೀರ ಸಂತಾನದ ಮೂನ್ನೂರ್ವರೂ ಅದೇ ರೀತಿಯಲ್ಲಿ ಸಾಯುವರು-(ನೋಡಿ ಹರಿಹರನು ಬರೆದ ಕೊಂಡಗುಳಿ ಕೇಶಿರಾಜನ ರಗಳೆ ಮತ್ತು ಕೋವೂರು ಬ್ರಹ್ಮಯ್ಯನ ರಗಳೆ). “ತನುವ ನೋಯಿಸಿ ಮನವ ಬಳಲಿಸುವ” ಈ ಮುಂತಾದುವೆಲ್ಲವನ್ನೂ ಬಸವಣ್ಣನವರು ನಿಷೇಧಿಸಿರುವರು. ಭಕ್ತರು ನೊಂದರೆ ಶಿವನೂ ನೋಯುವನು. ಈ ವಿಧವಾದ ಹಿಂಸಾಮಾರ್ಗದಿಂದ ಯಾವನೂ ಶಿವನನ್ನು ಸೇರಲಾರನೆನ್ನುತ್ತಿರುವರು ಬಸವಣ್ಣನವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು