•  
  •  
  •  
  •  
Index   ವಚನ - 408    Search  
 
ಭಕ್ತನ ಭಕ್ತಸ್ಥಲ - ಶರಣರು
ಆತ್ಮಸ್ತುತಿ ಪರನಿಂದೆಯ ಕೇಳಿಸದಿರಯ್ಯಾ, ನಿಮ್ಮ ಧರ್ಮ! ʼಆನು ಭಕ್ತನೆನ್ನಲ್ಲಿ ಲೇಸುಂಟೆಂದುʼ ಪರಿಣಾಮಿಸಿದರೆ ನಿಮಗಾನು ದ್ರೋ(ಹಿಯ)ಯ್ಯಾ! ಕೂಡಲಸಂಗಮದೇವಾ, ನಿಮ್ಮ ಶರಣರ ಲೇಸೇ ಎನ್ನ ಲೇಸಯ್ಯಾ!
Transliteration Ātmastuti paranindeya kēḷisadirayyā, nim'ma dharma! ʼānu bhaktanennalli lēsuṇṭendu’ pariṇāmisidare nimagānu drō(hiya)yyā! Kūḍalasaṅgamadēvā, nim'ma śaraṇara lēsē enna lēsayyā!
Manuscript
Music Courtesy:
English Translation 2 I pray Thy mercy, let me not know Self-praise or others' scorn! If I should rest content because I'm good in being a devotee, I'm traitor unto Thee, O Lord! O Kūḍala Saṅgama Lord, Thy Śaraṇās ' good is my good too! Translated by: L M A Menezes, S M Angadi
Hindi Translation स्वामी, आत्मस्तुति, परनिंदा न सुनने दो, कृपा करो । ‘मैं भक्त हूँ, मुझमें भलाई है’ समझ संतुष्ट होऊँ,तो मैं तव द्रोही होऊँगा । तव शरणों की भलाई ही मेरी भलाई है कूडलसंगमदेव ॥ Translated by: Banakara K Gowdappa
Telugu Translation ఆత్మ స్తుతి పరనింద ఆలింపనట్టు లనుగ్రహింపుమా! దయతో నేను భకుడ నాయందు గుణముండునని నీవు భావించునట్లైన నీకు నేను ద్రోహినయ్యా కూడల సంగమదేవా! మీ శరణుల సుఖమే నా సుఖమయ్యా ! Translated by: Dr. Badala Ramaiah
Tamil Translation தன்னைப் புகழ்ந்து, பிறரை இகழாதீர், உம் அறம் நான் பக்தன், என்னிடம் நல்லது உள்ளதென்று வெளிப்படுத்தின், உமக்கு நான் துரோகி ஐயனே கூடல சங்கமதேவனே, உம் அடியாரின் நன்மையே என் நன்மை ஐயனே. Translated by: Smt. Kalyani Venkataraman, Chennai
Marathi Translation नको आत्मस्तुती, नको परनिंदा न ऐकू त्या शब्दा, करो ऐसे भक्त म्हणविणे, इष्ट म्हणविणे तृप्त म्हणूनि घेणे, देवद्रोह कूडलसंगमदेवा ! शरणाचे ते हित तेचि माझे हित, समजेन अर्थ - हे प्रभो ! माझी स्तुती आत्मस्तुती किंवा इतराची निंदा दोन्ही मी ऐकू नये एवढेच कर. मी भक्त आहे, मी सुखी समाधानी आहे, मी तृप्त आहे असे म्हटल्यास मी तुझा द्रोही ठरेन. हे कूडलसंगमदेवा (परमेश्वरा) तुझ्या शरणांच्या हितातच माझे हित साठले आहेत. म्हणून मला सदैव शरणांची सेवा घडी हीच मागणी आहे. Translated by Rajendra Jirobe, Published by V B Patil, Hirabaug, Chembur, Mumbai, 1983 आत्मस्तुती, परनिंदा ऐकू नये असे करणे तुमचा धर्म. मी भक्त आहे असे म्हणण्यात मला तृप्ती झाली तर मी आपला द्रोही आहे कूडलसंगमदेवा. तव शरणांचे हितच मम हित आहे. Translated by Shalini Sreeshaila Doddamani
ಶಬ್ದಾರ್ಥಗಳು ಆತ್ಮ = ಜೀವ; ದ್ರೋಹಿ = ; ಪರನಿಂದೆ = ; ಪರಿಣಾಮಿಸು = ; ಲೇಸು = ; ಸ್ತುತಿ = ;
ಕನ್ನಡ ವ್ಯಾಖ್ಯಾನ ನಾನೇ ಶರಣ, ಲೇಸಿರುವುದು ನನ್ನಲ್ಲೇ-ಎಂದು ಕೊಚ್ಚಿಕೊಂಡರೆ ಅದು ಶಿವನಿಗೇ ಮತ್ತು ಶಿವಶರಣರಿಗೇ ಮಾಡಿದ ದ್ರೋಹವಾಗುವುದು. ಏಕೆಂದರೆ-ಶಿವಶರಣರಲ್ಲಿ ಗುಣವಿಲ್ಲ ಮತ್ತು ಗುಣವಿರುವುದು ತನ್ನಲ್ಲೇ ಎಂಬಂಥ ಪರನಿಂದಾವ್ಯಂಜಕವಾದ ಆತ್ಮಸ್ತುತಿಯಾಗುವುದದು, ಶಿವಶರಣರಲ್ಲಿ ಗುಣವಿದೆಯೆಂದರೆ ಸಹಿಸದ ದುರ್ಗುಣವಾಗುವುದದು, ಈ ವಿಧವಾದ ಆತ್ಮಸ್ತುತಿಯಲ್ಲಿ ಸ್ವತಃ ತೊಡಗಲೂ ಬಾರದು, ತೊಡಗಿದವರ ಬಳಿಯಿರಲೂ ಬಾರದು-ಎಂಬುದು ಬಸವಣ್ಣನವರ ಅಭಿಪ್ರಾಯ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು