•  
  •  
  •  
  •  
Index   ವಚನ - 409    Search  
 
ಭಕ್ತನ ಭಕ್ತಸ್ಥಲ - ಶರಣರು
ನಡೆಯಲರಿಯದೆ, ನುಡಿಯಲರಿಯದೆ ಲಿಂಗವ ಪೂಜಿಸಿ ಫಲವೇನು? ಅವರ ಸುಖವೆನ್ನ ಸುಖ. ಅವರ ದುಃಖವೆನ್ನ ದುಃಖ! ಕೂಡಲಸಂಗನ ಶರಣರ ಮನನೊಂದರೆ ಆನು ಬೆಂದೆನಯ್ಯಾ!
Transliteration Naḍeyalariyade, nuḍiyalariyade liṅgava pūjisi phalavēnu? Avara sukhavenna sukha. Avara gamanār'havennisuttade! Kūḍalasaṅgana śaraṇara mananondare ānu bendenayyā!
Manuscript
Music Courtesy: Album Name: Neerige Naidileye Shrungara, Singer: Ratna Hemantha Kulakarni, Music: M. S. Maruthi Label: Jhankar Music
English Translation 2 Unless you know To speak aright, to walk in righteous ways, What boots this Liṅga worship? Their joy is mine, their sorrow mine! If I should hurt Kūḍala Saṅga's Śaraṇās , I burn, O Lord! Translated by: L M A Menezes, S M Angadi
Hindi Translation आचार न जान, विचार न जान, लिंगार्चन करने से क्या लाभ? उनका सुख मेरा सुख है, उनका दुःख मेरा दुःख है, कूडलसंगमदेव के शरणों का मन दुःखे तो मैं भस्म हो जाऊँगा॥ Translated by: Banakara K Gowdappa
Telugu Translation నడత తెలియక నుడి తెలియక శివుని పూజించి ఫలమేమి? వారి సుఖమే నా సుఖము వారి దుఃఖమే నా దుఃఖము సంగని శరణుల మదినొచ్చిన నే నుడికిపోతినయ్యా! Translated by: Dr. Badala Ramaiah
Tamil Translation நடையையறியாது, சொல்லையறியாது இலிங்கத்தை வணங்கி என்ன பயன்? அவர் இன்பம் என் இன்பம், அவர் துன்பம் என் துன்பம் கூடல சங்கனின் அடியார்களின் மனம் நொந்தது எனின், நான் வெந்தேன் ஐயனே. Translated by: Smt. Kalyani Venkataraman, Chennai
Marathi Translation आचाराविना, विचाराविना लिंगपूजेचे कोणते फळ ? कोणते फळ आहे? त्यांचे दुःख माझे दुःख, त्यांचे सुख माझे सुख. कूडलसंगाच्या शरणांचे मन दुखविले तर मी जळून जाईन. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಒಳ್ಳೆಯ ನಡೆಬೇಕು, ಒಳ್ಳೆಯ ನುಡಿ ಬೇಕು, ಅವಿಲ್ಲದೆ-ಬರೀ ಲಿಂಗಪೂಜೆ ಮಾಡಿ ಪ್ರಯೋಜನವೇನು? ಲಿಂಗಪೂಜಕರು ಶರಣರ ಒಡನಾಡುವ ಸೂಕ್ಷ್ಮವನ್ನು ತಿಳಿದಿರಬೇಕು. ಭಕ್ತನಿಗೆ ಲಿಂಗಪೂಜೆ ಮಾಡಲು ಅರ್ಹತೆ ಬರುವುದು-ಅವನು ಶರಣರ ಇಂಗಿತವನ್ನು ತಿಳಿದು ತನ್ನನ್ನು ತಾನೇ ಪರಿಷ್ಕರಿಸಿಕೊಂಡಾಗ-ಮತ್ತು ಶರಣರ ಸುಖದುಃಖದಲ್ಲಿ ಸಹಭಾಗಿಯಾದಾಗ, ಇತ್ತ ಶರಣರ ಮನಸ್ಸಿಗೆ ಬೆಂಕಿ ಹಚ್ಚಿ-ಅತ್ತ ಲಿಂಗದ ಮೇಲೆ ನೀರು ಹೊಯ್ದರೆ-ಆ ಬೆಂಕಿ ಪ್ರಜ್ವಲಿಸಿ ಆ ಲಿಂಗಪೂಜಕನನ್ನೇ ಹುರಿದು ಮುಕ್ಕುವುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು