ಬಂಜೆ ಬೇನೆಯನರಿಯದಂತೆ
ಒಬ್ಬರೊಂದ ನುಡಿವಿರಿ, ಕೇಳಿರಯ್ಯಾ.
ಎನ್ನಾಯುಷ್ಯ ಭವಿಷ್ಯ ಎನ್ನಾ ಭಕ್ತರು, ಕಂಡಯ್ಯಾ;
ಎನ್ನಾಯುಷ್ಯ ಭವಿಷ್ಯ, ಎನ್ನಾ ಪ್ರಮಥರು ಕಂಡಯ್ಯಾ!
ಕೂಡಲಸಂಗನ ಶರಣರು ಮುಖಲಿಂಗಿಗಳಯ್ಯಾ.
Transliteration Ban̄je bēneyanariyadante
obbaronda nuḍiviri, kēḷirayya.
Ennāyuṣya bhaviṣya enna bhaktaru, kaṇḍayya;
ennāyuṣya bhaviṣya, enna pramatharu kaṇḍayya!
Kūḍalasaṅgana śaraṇaru mukhaliṅgigaḷayya.
Manuscript
English Translation 2 Listen, you speak each one one thing,
Like a barren woman who's never known
The throes of birth!
Look you, my life, my future are
My devotees!
Look you, my life, my future are
My Pioneers!
Kūḍala Saṅga's Śaraṇās
Are incarnations of Liṅga , Lord!
Translated by: L M A Menezes, S M Angadi
Hindi Translation प्रसव-पीडा से अनभिज्ञ बाँझ सी सुनो
तुम प्रत्येक की वाणी भिन्न है
देखो मेरा आयुष्य भविष्य मेरे भक्त हैं ।
देखो, मेरा आयुष्य-भविष्य मेरे प्रमथ हैं ।
कूडलसंगमेश के शरण लिंग-मुखी हैं ॥
Translated by: Banakara K Gowdappa
Telugu Translation పురిటి నొప్పులు గొడ్రాలికి తెలియనట్లు
ఎవరో ఏమో చెప్పిరి వినుడయ్యా
నా ఆయుష్య భవిష్యంబులు
నీ భక్తులేనయ్యా
నా ఆయుష్య భవిష్యంబులు
నీ ప్రమథులేనయ్యా
సంగని శరణులు ముఖలింగులయ్యా!
Translated by: Dr. Badala Ramaiah
Tamil Translation மலடி, பிரசவ வேதனையை அறியாததைப் போல
ஒருவர் ஒன்றினைக் கூறுவீர், கேண்மின்
என் ஆயுள், எதிர்காலம், என் பக்தர் ஐயனே
என் ஆயுள், எதிர்காலம் என் அடியார், கேளீர்
கூடல சங்கனின் அடியார் முகமுள்ள இலிங்கவடிவினராம்.
Translated by: Smt. Kalyani Venkataraman, Chennai
Marathi Translation
वांझेसि तो काय, प्रसव वेदना
फळे तीस जाणा, कळे सर्व
शरणत्व न अंगी, आयुष्य ते फोल
डोई होई बोल, आगळाचि
स्वाणुभावावीण, बडबडती जाण
बोल अप्रमाण, तयांचे ते
ममायु-भविष्य जाणताती शरण
आणि प्रमथगण, जाणती ते
कूडलसंगमदेवा ! शरण लिंगमुखी
सदा सर्व सूखी, पवित्र ते
अर्थ – ज्यांना परमेश्वरी प्रसन्नता लाभली नाही अशांनी त्यातील सुख-दुःख सांगू नये. नाही तर एखाद्या वांझेने प्रसूती वेदनेचे सुख-दुःख दुसऱ्याना सांगितल्याप्रमाणे होईल. काही लोक अर्धवट ज्ञानाच्या जोरावर आपलेच सुखदुःख सांगत सुटतात. आणि ज्यांना पूर्ण ज्ञान झालेले असते ते मौन धारण करतात. म्हणून आयुष्य व भविष्य एकमेव शिवणरणच जाणू शकतात. तसेच स्वानुभवी व त्रिकालज्ञ अशा प्रमथ गणानाच ते कळू शकते. इतरांना ते असंभव होय.
Translated by Rajendra Jirobe, Published by V B Patil, Hirabaug, Chembur, Mumbai, 1983
वांझ प्रसव वेदना जाणत नाही
त्याप्रमाणे प्रत्येक जण आपापले बोलतो, ऐकावे देवा.
माझे आयुष्य भविष्य माझे भक्त आहेत.
माझे आयुष्य विष्य माझे प्रमथ आहे देवा.
कूडलसंगाचे शरण मुखलिंगी आहेत.
Translated by Shalini Sreeshaila Doddamani
ಶಬ್ದಾರ್ಥಗಳು ಪ್ರಮಥರು = ; ಬಂಜೆ = ; ಬೇನೆ = ; ಭವಿಷ್ಯ = ;
ಕನ್ನಡ ವ್ಯಾಖ್ಯಾನ ಬಸವಣ್ಣನವರು ತಾವು ಕಂಡ ಹೊಸ ಸಾಮಾಜಿಕಸೃಷ್ಟಿಯ ಕನಸನ್ನು ನನಸು ಮಾಡಲು ವೇದನೆಪಡುತ್ತಿರುವಲ್ಲಿ-ಅದನ್ನು ಟೀಕಿಸುತ್ತ ಬಂಜೆಬುದ್ಧಿಯವರಾಡುತ್ತಿದ್ದ ಬರಿಯ ಮಾತುಗಳನ್ನು ನೋವಿನಿಂದಲೇ ಆದರೂ ನಿರ್ದಾಕ್ಷಿಣ್ಯವಾಗಿ ಅಲ್ಲಗಳೆಯುತ್ತಿರುವರು.
ಬಸವಣ್ಣನವರು ಪುರೋಗಾಮಿಗಳಿಗೆಷ್ಟು ವಿನೀತರೋ ತಿರೋಗಾಮಿಗಳಿಗೆ ಅಷ್ಟೂ “ದುರ್ವಿನೀತ”ರು! ಹೀಗಿರುವುದು ಅವರಿಗೆ ಅನಿವಾರ್ಯವೂ ಆಗಿತ್ತು. ಹೊಸದೊಂದು ಭಕ್ತಸಮೂಹವನ್ನೂ, ಪ್ರಗತಿಗೆ ಬದ್ಧವಾದ ಹೊಚ್ಚಹೊಸದೊಂದು ಶರಣವರ್ಗವನ್ನೂ-ಇವರನ್ನೆಲ್ಲಾ ಕ್ರಿಯಾತ್ಮಕವಾಗಿ ಒಗ್ಗೂಡಿಸುವ ಸಂವಿಧಾನವೊಂದನ್ನು ನಿರ್ಮಿಸುವ ಜಂಗಮಮಂಡಲಿಯನ್ನೂ ಕಟ್ಟುವುದರಲ್ಲಿ ಅವರು ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದರು. ಈ ಕ್ರಾಂತಿ ಆಗಬೇಕು-ಇಲ್ಲ ನಾನು ಸಾಯಬೇಕು ಎಂಬ ಪ್ರತಿಜ್ಞೆ ಅವರದು. (ಪ್ರಮಥರು : ಶರಣರು, ಮುಖಲಿಂಗ ಶರಣರು : ಜಂಗಮರು) ನೋಡಿ ವಚನ-400
ವಿ: ಬಸವಣ್ಣನವರ ಭಕ್ತ-ಶರಣ-ಜಂಗಮಶ್ರೇಣಿಗಳು ಗಾಳಿಯಾಡದ ಮೂರು ಖಾನಿಗಳಲ್ಲ-ಅವು ಪ್ರಗತಿಯ ಪ್ರಣಾಳಿಯ ಮೂರು ಹರಿಹಂತಗಳು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು