•  
  •  
  •  
  •  
Index   ವಚನ - 411    Search  
 
ಭಕ್ತನ ಭಕ್ತಸ್ಥಲ - ಲಿಂಗ-ಜಂಗಮ
ಬೇರೂರಲಿದ್ದು ಬಂದ ಜಂಗಮವೆ ಲಿಂಗವೆಂದು, ಮನೆಯಲಿದ್ದ ಜಂಗಮವನುದಾಸೀನವ ಮಾಡಿದರೆ, ನಾನು ಬೆಂದೆನಯ್ಯಾ. ಆನು ಬೆಂದ ಬೇಗೆಯನರಿಯೆ, ಕಾಣಾ, ಕೂಡಲಸಂಗಮದೇವಾ.
Transliteration Bērūralide banda jaṅgamave liṅgavendu, maneyalidda jaṅgamavanudāsīnava māḍidare, nānu bendenayyā. Ānu benda bēgeyanariye, kāṇā, kūḍalasaṅgamadēvā.
Manuscript
English Translation 2 If, calling a Jaṅgama, come From another village, Liṅga , I show Indifference to one who lives at home, I burn, my Lord! Mark you, Kūḍala Saṅgama Lord, I know not the fire I burn in! Translated by: L M A Menezes, S M Angadi
Hindi Translation अन्य ग्राम से आगत जंगम को ही लिंग मानकर घर के जंगम की उपेक्षा करूँ, तो मैं भस्म होऊँगा, देखो कूडलसंगमदेव, मुझे जलानेवाली ज्वाला मैं नहीं जानता ॥ Translated by: Banakara K Gowdappa
Telugu Translation పొరుగూరినుండి వచ్చు జంగమమే లింగమని యింటి జంగముని మఱచిన నా యెద భగ్గని మండునయ్యా మాడ్చు నా ‘మంటనే చూడలేనయ్యా కూడల సంగమదేవా! Translated by: Dr. Badala Ramaiah
Tamil Translation வேறு ஊரிலிருந்து வந்த ஜங்கமனே இலிங்கமென வீட்டிலுள்ள ஜங்கமனை அலட்சியம் செய்யின் நான் வெந்தேன் ஐயனே நான் வெந்த வெப்பத்தை அறியேன் காணாய் கூடல சங்கம தேவனே. Translated by: Smt. Kalyani Venkataraman, Chennai
Marathi Translation बाहेर गावाहून आलेल्या जंगमाला लिंग मानून, घरातील जंगमाची उपेक्षा केली तर मी जळून जाईन. मला जाळणारी आग असह्य आहे पहा कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಉದಾಸೀನ = ; ಜಂಗಮ = ; ಬೇಗೆ = ;
ಕನ್ನಡ ವ್ಯಾಖ್ಯಾನ ಬೇರೆ ಊರಿಂದ ಬಂದು ನೆಲಸಿದ ಜಂಗಮ, ಮನೆಯಲ್ಲಿದ್ದ ಜಂಗಮ ಎಂಬುದೆಲ್ಲಾ-ಸ್ಥಾಯಿಯಾದ ಮತ್ತು ಉಪಜೀವಿಯಾದ ಒಂದು ಜಾತಿಜಂಗಮವರ್ಗದ ಹಿನ್ನೆಲೆಯುಳ್ಳುದು, ಬಸವಣ್ಣನವರ ಪ್ರಕಾರ ಜಂಗಮ ಸ್ಥಾವರವಲ್ಲ ಮತ್ತು ಸಂಸಾರಿಯಲ್ಲ. ಇದನ್ನು ತಿದ್ದಿ, ಮನೆಮಾಡಿಕೊಂಡಿರುವ ಅಜಂಗಮವೂ ಮಾನ್ಯವೆಂದೇ ಸ್ಥಾಪಿಸಲೋಸುಗ ಜಾತಿಜಂಗಮನೊಬ್ಬನು ತೀರ ಸ್ಥಳೀಯವಾದ ಕ್ಷುದ್ರಕಾರಣಗಳಿಗಾಗಿ ಕಟ್ಟಿದ ವಚನವಿದು. ಬಸವಣ್ಣನವರ ಕಾಲಕ್ಕೂ ಹಿಂದೆಯೇ-ಹಳೆಯದಾದ ಒಂದು ಜಾತಿಜಂಗಮ ವರ್ಗವಿತ್ತು. ಶರಣರ ಪಂಥದಲ್ಲಿ ಮತ್ತು ಬಸವಸಮಕಾಲದಲ್ಲಿ ಸಮಾನಾಂತರವಾಗಿಯೇ ಗಣನೆಗೊಂಡ ನವ ಜಂಗಮ ಶ್ರೇಣಿಯೂ ಒಂದು ಅಸ್ತಿತ್ವದಲ್ಲಿತ್ತು. ಬಸವತತ್ತ್ವ ಅವನತಿಯಾದಂತೆಲ್ಲಾ ಈ ನವಜಂಗಮಶ್ರೇಣಿಯಲ್ಲಿ ಕೆಲವರು ಮಠಮಾನ್ಯ ಕಟ್ಟಿಕೊಂಡರು-ಇನ್ನು ಕೆಲವು ಗಣಾಚಾರಿಗಳೆಂದು, ಮಠಪತ್ತಿಯವರೆಂದು, ವಸ್ತ್ರದವರೆಂದು ಇತ್ಯಾದಿಯಾಗಿ ಆ ಹಳೆಯ ಜಂಗಮಗುರುಗಳ ಊಳಿಗಕ್ಕೆ ನಿಂತರು. ಹೀಗೆ ಬಸವಣ್ಣನವರು ಲಿಂಗೈಕ್ಯರಾದ ಅನತಿದೂರಕಾಲದಲ್ಲಿಯೇ ಅವರ ಜಂಗಮಕಲ್ಪನೆ ಸಂಪೂರ್ಣವಾಗಿ ಕುಸಿದು ಬಿದ್ದು-ಅದೂ ಒಂದು ಜಾತಿಜಂಗಮಪ್ರಕಾರವೇ ಆಯಿತು. ಇದನ್ನೆಲ್ಲ ಇಂದಿಗೂ ಒತ್ತಿ ನೋಡಿ ಗುರುತಿಸಬಹುದಾಗಿದೆ. ನೋಡಿ ವಚನ-420.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು