ಉಟ್ಟು-ತೊಟ್ಟು ಪೂಜ್ಯನಾಗಿ ಬಂದ ಜಂಗಮ ವಿಶೇಷವೆಂದು,
ಕಂತೆ-ಬೊಂತೆಯ ಜಂಗಮ ಬಂದರೆ ಹೀನವೆಂದು
ಕಂಡೆನಾದರೆ ಪಂಚಮಹಾಪಾತಕ!
ಇದು ಕಾರಣ, ಅನ್ನ-ವಸ್ತ್ರ-ಧನಮಾಟದಲ್ಲಿ
ಎರಡಾಗಿ ಕಂಡೆನಾದರೆ ನರಕದಲ್ಲಿಕ್ಕುವ,
ಕೂಡಲಸಂಗಮದೇವ.
Transliteration Uṭṭu-toṭṭu pūjyanāgi banda jaṅgama viśēṣavendu,
kante-bonteya jaṅgama bandare hīnavendu
kaṇḍenādare pan̄camahāpātaka!
Idu kāraṇa, anna-vastra-dhana māṭadalli
eraḍāgi kaṇḍenādare narakadallikkuva,
kūḍalasaṅgamadēva.
Manuscript
English Translation 2 If I should look as if
The Jaṅgama who is come,
Venerable for the garb he wears,
As something high and mighty, and
The Jaṅgama in threadbare motley as if base,
It is the fivefold mortal sin!
Therefore, should I behold with partial eye
In giving food, attire or money away,
Lord Kūḍala Saṅgama will thrust me
In hell.
Translated by: L M A Menezes, S M Angadi
Hindi Translation पूज्य जैसे आये जंगम को श्रेष्ट
और गुदडी के जंगम को हीन मानूँ,
तो वह पंचमहापातक है
अतः अन्न, वस्त्र, धन देने में
पक्षपात करूँ तो कूडलसंगमदेव
मुझे नरक में डालेंगे ॥
Translated by: Banakara K Gowdappa
Telugu Translation తిన-తొడగ పూజ్యుడై వచ్చు
జంగమమే విశేషమని
గంతబొంతగల జంగముడు రాగ
హీనుడని చూచిన పంచమహాపాతకము!
అన్న ధనవస్త్రవచనముల వీరిని
వేర్వేరుగా చూడ నరకమునకు దొక్కు
కూడల సంగమదేవుడు
Translated by: Dr. Badala Ramaiah
Tamil Translation உடுத்து, அணிந்து பூசனைக்கு உரியவனாக வந்த
ஜங்கமன் சிறப்பானவன்
கந்தல் கிழிசலுடன் ஜங்கமன் வரின்
கீழானவன் என்று கண்டேன் எனின்
ஐம்பெரும்பாதகங்களைச் செய்தவன் ஐயனே
எனவே உணவு, உடை, செல்வத்தை அளிப்பதில்
இருவிதமாகக் காணின், நரகத்தில்
இடுவன் கூடல சங்கமதேவன்.
Translated by: Smt. Kalyani Venkataraman, Chennai
Marathi Translation
वेषभूषा करुन, पूज्य होऊन आलेल्या जंगमाला विशेष समजून,
फाटके कपडे घालून आलेल्या जंगमाला हीन म्हणून
पाहिले तर पंचमहापातक होते.
म्हणून अन्न, वस्त्र, धनाचे अर्पण करताना भेदभाव केला तर
नरकात ढकलतील कूडलसंगमदेव.
Translated by Shalini Sreeshaila Doddamani
ಶಬ್ದಾರ್ಥಗಳು ಕಂತೆ = ; ಜಂಗಮ = ; ನರಕ = ; ಪಾತಕ = ; ಪೂಜ್ಯ = ; ಬೊಂತೆ = ; ಹೀನ = ;
ಕನ್ನಡ ವ್ಯಾಖ್ಯಾನ ಜಂಗಮಕ್ಕೆ ಒಂದು ಸ್ವಂತ ಆರ್ಥಿಕ ಭೂಮಿಕೆಯೇ ಇಲ್ಲ. ಅದೆಲ್ಲಾ ಇತ್ತೀಚಿನ ಬೆಳವಣಿಗೆ. ಭಕ್ತರ ಅರ್ಥ ಪ್ರಾಣ ಅಭಿಮಾನಕ್ಕೆ ಒಡೆಯನಾದ ನಿಜಜಂಗಮನೊಬ್ಬನಿಗೆ ಉಟ್ಟು ತೊಟ್ಟು ಬರುವ ವೈಯಕ್ತಿಕ ಆಡಂಬರದ ಧನಾಢ್ಯತೆಯಾಗಲಿ, ಕಂತೆಬೊಂತೆ ಧರಿಸಿಯೇ ತಿರುಗಬೇಕಾದ ವೈಯಕ್ತಿಕ ದಾರಿದ್ರ್ಯದ ದುರ್ಗತಿಯಾಗಲಿ ಸದ್ಯೋಜಾತವಾದ ಬಸವಕಲ್ಪಿತ ಸಮಾಜದಲ್ಲಿ ಅವಾಸ್ತವ ಮತ್ತು ಅಬದ್ಧವಾಗುತ್ತದೆ.
ಬಡವನಾದ ಜಾತಿ ಜಂಗಮನೊಬ್ಬನು (ಅವನು ಯಾವ ಪಂಥದವನೇ ಆಗಲಿ) ಧನಿಕಜಂಗಮ ನಿನ್ನೊಬ್ಬನನ್ನು ದಟ್ಟಿಸಲೆಂಬ ಸಂದರ್ಭದಲ್ಲಿ ಹುಟ್ಟಿಕೊಂಡ ಒಂದು ಕೆಟ್ಟ ಕೋಟಾ ವಚನವಿದು. ಪಂಚಮಹಾಪಾತಕನರಕಾದಿ ಪದಗಳಿಂದ ವಿಡಂಬಿತವಾದ ಈ ವಚನ ಮುಗ್ಧಭಕ್ತರನ್ನು ನಂಬಿಸಿ ದಾರಿ ತಪ್ಪಿಸುವಂಥದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು