•  
  •  
  •  
  •  
Index   ವಚನ - 413    Search  
 
ಭಕ್ತನ ಭಕ್ತಸ್ಥಲ - ಶರಣರು
ಅಡ್ಡದೊಡ್ಡ ನಾನಲ್ಲಯ್ಯಾ: ದೊಡ್ಡ ಬಸರು ಎನಗಿಲ್ಲಯ್ಯಾ; ದೊಡ್ಡವರಲ್ಲದೆ ನಿಮ್ಮ ಶರಣರು ಮನ್ನಿಸರಯ್ಯಾ! ಹಡೆದುಂಬ ಸೂಳೆಯಂತೆ ಧನವುಳ್ಳವರನರಸಿಯರಸಿ, ಬೋಧಿಸಲು, ಪ್ರಾರ್ಥಿಸಲು ಮುನ್ನ ನಾನರಿಯೆನಯ್ಯಾ. ದೊಡ್ಡತನವೆನಗಿಲ್ಲ: ಅಂಜುವೆನಂಜುವೆ ನಿಮ್ಮ ಪ್ರಮಥರಿಗೆ, ಅನಾಥ ನಾನಯ್ಯಾ, ಕೂಡಲಸಂಗಮದೇವಾ.
Transliteration Aḍḍadoḍḍa nānallayya: Doḍḍa basaru ēnagillayya; doḍḍavarallade nim'ma śaraṇaru mannisarayya! Haḍedumba sūḷeyante dhanavuḷḷavaranarasiyarasi, bōdhisalu, prārthisalu munna nānariyenayyā. Doḍḍatanavenagilla: An̄juvenan̄juve nim'ma pramatharige, anātha nānayyā, kūḍalasaṅgamadēvā.
Manuscript
English Translation 2 I am not stout and tall; not mine A noble birth: unless a man Be big, your Śaraṇās Will heed him not! I do not know at all To preach and pray and run, Even as a harlot, after moneyed ones; I am not stout and tall: I dread Thy Pramathas, I dread! I am an orphan, Lord Kūḍala Saṅgama ! Translated by: L M A Menezes, S M Angadi
Hindi Translation न मैं हॄष्ट-पुष्ट हूँ, न प्रतिष्टित वंशज, श्रेष्ट के सिवा तव शरण औरों को सम्मान नहीं देते । धनोपजीवी वेश्या की भाँति धनियों को ढूंढकर उपदेश देना, प्रार्थना करना मैं पहले ही नहीं जानता ॥ मु्झमें बडप्पन नहीं है, तव प्रमथों से भयभीत हूँ । मैं अनाथ हूँ, कूडलसंगमदेव ॥ Translated by: Banakara K Gowdappa
Telugu Translation ఒడ్డుపాటు మనిసి గానయ్యా పెద్దకడుపు నాకు లేదయ్యా దొడ్డవారినిగాని నీ శరణులు మన్నింపరయ్యా పడుపుకూడు తిను వేశ్యగ వెదకి వెదకి ధనికులకు బోధింప ప్రార్ధింప నే తెలియనయ్యా! పెద్దఱికము నాకులేదు అదరెద బెదరెద నీ ప్రమథులకు అనదుడ నేనయ్యా కూడల సంగమదేవా! Translated by: Dr. Badala Ramaiah
Tamil Translation பெரிய உருவினனல்லன், வயிறு வளர்ப்பவன் அல்ல பெரியோரைத் தவிர உம் அடியார் மன்னிப்பதில்லை பெற்று உண்ணும் சூளையைப் போல, செல்வமுள்ளோரைத் தேடித்தேடி கற்பிக்க வேண்ட நான் அறியேனையனே. உம் கணங்களுக்கு, அஞ்சுவேன், அஞ்சுவேனையனே நான் அனாதை ஐயனே, கூடல சங்கமதேவனே. Translated by: Smt. Kalyani Venkataraman, Chennai
Marathi Translation अवाढव्य वाढलेला मी नाही, मोठ्या पोटाचा मी नाही. मोठ्या लोकांना आपले शरण मानत नाही. धन मिळविणारी वेश्या धनवानांच्या सहवासात राहते. धनवानांना शोधून उपदेश करुन मोबदला मागणे मी जाणत नाही. मोठेपणा माझ्यात नाही देवा, घाबरतो प्रमथांना. अनाथ मी आहे देवा कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಅನಾಥ = ನಿರ್ಗತಿಕ; ಅರಸಿ = ರಾಣಿ; ಪ್ರಮಥರು = ; ಬಸುರ = ; ಬೋದ್ಧಿಸು = ; ಮನ್ನಿಸು = ; ಹಡೆದುಂಬ = ;
ಕನ್ನಡ ವ್ಯಾಖ್ಯಾನ ಶರಣರು ದಢೂತಿದೇಹದ ಧನಿಕರನ್ನೇ ಹುಡುಕಿಕೊಂಡು ಹೋಗಿ ಪುರಸ್ಕರಿಸುವರೆನ್ನುತ್ತ, ಹಾಗೆ ಸೂಳೆಯಂತೆ ಧನಿಕರನ್ನೇ ಹುಡುಕಿಕೊಂಡು ಹೋಗಿ ಬೋಧಿಸುವುದು ಬೇಡುವುದು ತಮಗೆ ಹಿಡಿಸುವುದಿಲ್ಲವೆನ್ನುತ್ತ ಶರಣರನ್ನೆಲ್ಲ ಸಾರಾಸಗಟಾಗಿ ನಿಂದಿಸಿ ತಮ್ಮನ್ನೇ ಪ್ರಶಂಸೆಮಾಡಿಕೊಂಡಂತಿರುವ-(ಅಷ್ಟರಲ್ಲೇ) ಮರಳಿ “ಅಂಜುವೆನಂಜುವೆ ನಿಮ್ಮ ಪ್ರಮಥರಿಗೆ ಅನಾಥ ನಾನಯ್ಯ” ಎನ್ನುತ್ತ ಇಡೀ ವಚನದ ದಾಟಿಗೆ ವಿರೋಧವಾಗಿ ವಿನಯವನ್ನು (ಧೂರ್ತನಂತೆ) ತೋರಿಸಿಕೊಂಡಿರುವ ಈ ವಚನ ಬಸವಣ್ಣನವರ ನಿಜವಚನವಲ್ಲ. ಒಬ್ಬ ಸಣ್ಣ ಸ್ವಾಮಿ ಒಬ್ಬ ದೊಡ್ಡ ಸ್ವಾಮಿಯ ವಿರುದ್ಧ ತಂಟೆ ಮಾಡಲು ಬಸವಣ್ಣನವರ ಅಂಕಿತದಲ್ಲಿ ಬರೆದು ಸೇರಿಸಿದ ಖೊಟ್ಟಿವಚನವಿದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು