•  
  •  
  •  
  •  
Index   ವಚನ - 414    Search  
 
ಭಕ್ತನ ಭಕ್ತಸ್ಥಲ - ಶರಣರು
ಕುದುರೆ- ಸತ್ತಿಗೆಯವರ ಕಂಡರೆ ಹೊರಳಿಬಿದ್ದು ಕಾಲಹಿಡಿವರು! ಬಡಭಕ್ತರು ಬಂದರೆ `ಎಡೆಯಿಲ್ಲ, ಅತ್ತ ಸನ್ನಿ' ಎಂಬರು: ಎನ್ನೊಡೆಯ ಕೂಡಲಸಂಗಯ್ಯನವರ ತಡಗೆಡಹಿ ಮೂಗ ಕೊಯ್ಯದೆ ಮಾಣ್ಬನೆ;
Transliteration Kudure- sattigeyavara kaṇḍare horaḷibiddu kālahiḍivaru! Baḍabhaktaru bandare `eḍeyilla, atta sanni' embaru: Ennoḍeya kūḍalasaṅgayyanavara taḍageḍahi mūga koyyade māṇbane;
Manuscript
English Translation 2 When they meet such as ride a horse And carry a shade, they fall And roll, and clasp their feet; When a poor saint comes, they say 'No room here, move away!' Will not my Lord Kūḍala Saṅga Be sure to fell and punish them By cutting off their nose? Translated by: L M A Menezes, S M Angadi
Hindi Translation अश्वारोही छत्रधारियों को देख लोटकर चरण स्पर्श करते हैं; दीन भक्तों के आने पर ‘स्थान नहीं, हट जा’ कहते हैं; मेरे प्रभु कूडलसंगमदेव उन्हें गिराकर नाक काटना छोड देंगे? Translated by: Banakara K Gowdappa
Telugu Translation గొడుగు గుఱ్ఱము కలవారినరయ బోరగిలి వారి కాళ్ళు బట్టెదరు బడుగు భక్తులురాగ బిడువు లేదటు నడువుడందురు నా స్వామి కూడల సంగయ్య వారలబడవైచి ముక్కు కోయక మానునే Translated by: Dr. Badala Ramaiah
Tamil Translation குதிரை, குடையுடன் வருவோரைக் காணின் புரண்டு வீழ்ந்து, காலைப் பிடிப்பர் ஐயனே ஏழை பக்தர் வரின் “இடமில்லை அங்கு நில்” என்பர் என் உடையன் கூடலசங்கய்யன் அவர்களைக் குப்புற வீழ்த்தி மூக்கைக் கொய்யாமலிருப்பனோ? Translated by: Smt. Kalyani Venkataraman, Chennai
Marathi Translation येता वैभवात, घोड्यावर स्वार दिसता अब्दागीर, डोईवर तया पाहोनिया, घाली दंडवत येता दीन भक्त, धिक्कारिती दांभिकासी नम्र, सात्विका कठोर ऐशा तो व्यवहार, अज्ञानाचा कूडलसंगमदेव! ऐसिया पाहून करील शासन, तया लागी अर्थ - घोडयावर बसून अब्दागिऱ्यासह, वैभवशाली वस्त्रात येणाऱ्यापुढे लोक दंडवत घालतात जे पाया पडतात. हेच लोक दारावर येणाऱ्या गरिब सद्भक्ताना अपमानीत करून हाकलून देतात. अशा लोकांना माझा कूडलसंगमनाथ (परमेश्वर) शासन केल्याशिवाय राहणार नाही. बुद्धीवादी व सामान्य माणसे श्रीमंतापुढे व सत्ताधान्यापुढे कसे नमतात व त्यांची बुद्धी सत्याला लाथाडून असत्याचे पाय कशी चाटते हे वरील वचनातून दिसून येते. खोट्या वैभवाची सेवा मोक्ष मिळवून देऊ शकत नाही. Translated by Rajendra Jirobe, Published by V B Patil, Hirabaug, Chembur, Mumbai, 1983 छत्र धरुन घोड्यावरुन येणाऱ्यांना पाहून खाली पडून पाया पडतात. गरीब भक्त येता `भोजन नाही तिकडे जा` असे म्हणतात. माझा मालक कूडलसंगमदेव अशा लोकांचे लगेचच नाक कापल्याशिवाय राहिल का ? Translated by Shalini Sreeshaila Doddamani
Urdu Translation بانکے رَہوار پرجو کوئی سوار ناز سے تمکنت سے سج دھج کر جلوہ افروز ہو تو سارے لوگ دو قدم بڑھ کےاس کو لیتے ہیں پھرعقیدت سے پاؤں چھُوتے ہیں اور ایک مضمحل غریب بھگت دُور کی راہ سے اگرآئے کوئی اس کی خبَرنہیں لیتا ایسے لوگوں پہ کوڈلا سنگا قہرنازل کر یں گے، پھران کی ناک کا ٹے بِنا نہ چھوڑیں گے Translated by: Hameed Almas
ಶಬ್ದಾರ್ಥಗಳು ಎಡೆ = ; ಮಾಣ್ಬು = ; ಸತ್ತಿಗೆ = ; ಸನ್ನಿ = ;
ಕನ್ನಡ ವ್ಯಾಖ್ಯಾನ ಕುದುರೆಯೇರಿ ಸತ್ತಿಗೆ (ಛತ್ರಿ) ಹಿಡಿಸಿಕೊಂಡು ಬರುವ ಶ್ರೀಮಂತರಿಗೆ ಅಧಿಕಾರಿಗಳಿಗೆ ಅಡ್ಡಬಿದ್ದು ಕಾಲುಹಿಡಿದು ಸ್ವಾಗತಿಸುವರು-ಬಡಭಕ್ತರು ಬಂದರೆ ಜಾಗವಿಲ್ಲ ಹೋಗಿ ಎನ್ನುತ್ತ ದೂರ ಓಡಿಸುವರು. ಅಂಥವರಿಗೆ ಶಿವನು ಉಗ್ರವಾಗಿ ಶಿಕ್ಷಿಸುವನೆಂಬುದು ಈ ವಚನದ ತಾತ್ಪರ್ಯ. ಶ್ರೀಮಂತಿಕೆಗೆ ಮಾರು ಹೋಗುವ ಜನ ಭಕ್ತಿಯ ಬೆಲೆಯನ್ನು ಅರಿಯರೆಂಬ ಒಂದು ನೀತಿ ವಚನವಿದು. ಕುದುರೆಸತ್ತಿಗೆಯವರೆಂದರೆ ರಾಜನಾಗಬಹುದು ಮಂತ್ತಿಯಾಗಬಹುದು ಧನಿಕನಾಗಬಹುದು-ಒಬ್ಬ ಸಾಂಪ್ರದಾಯಿಕ ಪ್ರತಿಷ್ಠಿತ ಸ್ವಾಮಿಯೂ ಆಗಬಹುದು. ಸನ್ನಿ<ಸರಿ ನೀ. ನೋಡಿ ವಚನ639.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು