ಭಕ್ತನ ಭಕ್ತಸ್ಥಲ - ಲಿಂಗ-ಜಂಗಮ
ಹಿಡಿವೆಡೆಯನೆ ಕಾಸಿ, ಹಿಡಿವ ಕೈ ಬೆಂದು,
ಮಿಡುಮಿಡನೆ ಮಿಡುಕುವ, ಮರುಳ ಮಾನವನೇ
ಬಡವರೆಂದೆನಬೇಡಾ ಲಾಂಛನಧಾರಿಯನು;
ಕಡುಸ್ನೇಹದಿಂದವರ ಪೂಜೆಯ ಮಾಡುವುದು.
ನಿಜವಡಗಿದ ರೂಪು, ನಿರ್ವಯಲ ಸ್ಥಾನ,
ನಡೆಲಿಂಗ, ಜಂಗಮ: ಕೂಡಲಸಂಗಮದೇವ!
Transliteration Hiḍiveḍeyane kāsi, hiḍiva kaibendu,
miḍumiḍane miḍukuva, maruḷa mānavanē
baḍavarendenabēḍā lāṁ chanadhāriyanu;
kaḍusnēhadindavara pūjemāḍuvudu.
Nijavaḍagida rūpu, nirvayala sthāna,
naḍeliṅga, jaṅgama: Kūḍalasaṅgamadēva!
Manuscript
English Translation 2 O foolish man, who chafe with pain
After you heat the handle and burn
The hand that holds,
Never say they are poor who wear the robe:
When you meet them, you must
Show them affectionate regard.
Form of the hidden Truth, home of the Absolute,
A walking Liṅga is Jaṅgama ,
O Kūḍala Saṅgama Lord!
Translated by: L M A Menezes, S M Angadi
Hindi Translation मुठिया को ही तपाकर गृहीत हाथ जलाकर
व्यथा से व्यथित हे मूढ मानव,
लांछनधारियों को अकिंचन मत समझ ।
स्नेह से देख उनकी पूजा कर ।
सत्य-निहित, निरावयल स्थान है,
चार-लिंग है जंगम, कूडलसंगमदेव ॥
Translated by: Banakara K Gowdappa
Telugu Translation పిడికిట నిప్పు బిగబట్టి చేయి కాలెనని
మిడిమిడికిపడు వెడమానవా!
బడుగన బోకుర! లాంఛనధారిని
కని భక్తి తో వారల పూజింపవలె
నిజమడగిన రూపున నిర్వయల స్థానము
నడలింగము జంగమము
కూడల సంగమదేవ!
Translated by: Dr. Badala Ramaiah
Tamil Translation கைப்பிடியைச் சூடாக்கி அதைப் பிடித்தால் கைவெந்து
வெடவெடவென நடுங்கும் மருண்ட மனிதனே
திருச்சின்னம் தரித்தவனை ஏழை எனலாகாது
மிகவும் அன்புடன் அவரைப் பூசிக்க வேண்டும்
உண்மையடங்கிய வடிவம், உருவமற்ற நிலை
ஜங்கமம், நடக்கும் இலிங்கம் கூடலசங்கமதேவனே.
Translated by: Smt. Kalyani Venkataraman, Chennai
Marathi Translation
तापलेल्या सांडशीला हात लावून भाजले म्हणून
तळमळणाऱ्या मूर्ख मानवा,
गरीब म्हणू नको लिंगधारीला
दर्शन घडताच प्रेमाने त्यांची पूजा कर.
सत्यगर्भीतरुप, र्निवलयस्थान
हे चरलिंग जंगम आहे कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಕಡು = ; ಜಂಗಮ = ; ನಿರ್ವಯಲು = ; ಮರುಳ = ; ಮಿಡು = ; ಮಿಡುಕು = ; ಲಾಂಚನ = ;
ಕನ್ನಡ ವ್ಯಾಖ್ಯಾನ ಜಂಗಮಕ್ಕೆ ಮನೆ ಸ್ವತ್ತು ಸಂಪತ್ತು ಏನೂ ಇಲ್ಲವಾಗಿ ಅವರು ಲೌಕಿಕವಾದ ಅರ್ಥದಲ್ಲಿ ಬಡವರು ನಿಜ-ಆದರೆ ಅವರು ಆಧ್ಯಾತ್ಮಿಕವಾಗಿ ಅಪಾರ ಶ್ರೀಮಂತರು. ಶಿವನು ಅಡಗಿರುವುದು ಅವರಲ್ಲೇ, ಅವರು ಜೀವನ್ಮುಕ್ತರು, ನಡೆದಾಡುವ ಲಿಂಗಸ್ವರೂಪಿಗಳು. ಅವರನ್ನು ಬಡವರೆಂದು ಉಪೇಕ್ಷಿಸಿ ಮುಂದೆ ದುಃಖಭಾಜನನಾಗಬೇಡ.
ಮತ್ತು ಶಿವನನ್ನು ಸಾಕ್ಷಾತ್ಕರಿಸಿಕೊಳ್ಳಬೇಕಾದರೆ ಮೊದಲು ಹಿಡಿಯಬೇಕಾದ್ದು ಜಂಗಮಪಾದಗಳನ್ನೇ ಅಂಥ ಪೂಜ್ಯಪಾದಗಳನ್ನು ನಿನ್ನ ಮನೆಯ ಮುಂದೆ ಕಾಯಿಸಿ ನೋಯಿಸಬೇಡ. ಪದಾರ್ಥವೊಂದನ್ನು ಯಾವ ಕಡೆಯಿಂದ ಹಿಡಿಯಬೇಕೋ ಆ ಕಡೆಯೇ ಕಾಯಿಸಿ ಹಿಡಿದು ಕೈಬೆಂದು ಸಂಕಟಪಡುವುದು ಮೂರ್ಖತನವಲ್ಲವೆ?
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು