•  
  •  
  •  
  •  
Index   ವಚನ - 417    Search  
 
ಭಕ್ತನ ಭಕ್ತಸ್ಥಲ - ಅಹಂಕಾರ
ಹಾಲ ಕಂದಲು, ತುಪ್ಪದ ಮಡಕೆಯ ʼಬೋಡು ಮುಕ್ಕೆʼನಬೇಡ- ಹಾಲು ಸಿಹಿ, ತುಪ್ಪ ಕಮ್ಮನೆ: ಲಿಂಗಕ್ಕೆ ಬೋನ! ಕೂಡಲಸಂಗನ ಶರಣರ ಅಂಗಹೀನರೆಂದರೆ ನಾಯಕನರಕ!
Transliteration Hāla kandalu, tuppada maḍakeya ʼbōḍu mukkeʼnabēḍa- hālu sihi, tuppa kam'mane: Liṅgakke bōna! Kūḍalasaṅgana śaraṇara aṅgahīnarendare nāyakanaraka!
Manuscript
English Translation 2 Do not say neckless or broken a little is The pottle of milk, the pot of ghee: The milk is sweet, savoury the ghee- Fit food for Liṅga ! Hell gapes for those who say Kūḍala Saṅga's Śaraṇās Have crippled limbs! Translated by: L M A Menezes, S M Angadi
Hindi Translation मत कहो कि दूध का घड़ा घी का मटका भद्धा है, टूटा है। दूध मीठा है, घी सुगंधित है, लिंग के नैवेद्य हैं । कूडलसगमेश के शरणों को अंगहीन कहने से नायक नरक मिलेगा ॥ Translated by: Banakara K Gowdappa
Telugu Translation పాలదుత్త నేతికుండ పెంకు బొప్పి అనబోకుర! పాలు తీపి నేయి కమ్మనిది లింగమునకు భోజనము కూడల సంగని శరణులు అంగహీనులనగా రౌరవనరకము. Translated by: Dr. Badala Ramaiah
Tamil Translation பால் குடுக்கை, நெய்ப்பானை பொக்கை, விரிசல் என்று கூறாதீர் பாலின் இனிமை நெய்யின் நறுமணம் இலிங்கத்திற்கு நிவேதனம் கூடல சங்கனின் அடியாரை ஊனமுற்றோர் என்று கூறின் கீழான நரகம் ஐயனே. Translated by: Smt. Kalyani Venkataraman, Chennai
Marathi Translation दूधाचे गाडगे, तूपाचे मडके यांना गळके म्हणू नको. दूध गोड, तूप खमंगलिंगाला नैवेद्य. कूडलसंगमदेवाच्या शरणांना अंगहीन म्हणाला तर घोर नरकप्राप्ती. Translated by Shalini Sreeshaila Doddamani
ಶಬ್ದಾರ್ಥಗಳು ಕಂದಲು = ; ಕಮ್ಮನೆ = ; ಬೋಡು = ; ಬೋನ = ; ಮುಕ್ಕು = ;
ಕನ್ನಡ ವ್ಯಾಖ್ಯಾನ ಹಾಲಿನ ಮಡಕೆಯನ್ನು ತುಪ್ಪದ ಕುಡಿಕೆಯನ್ನು ಮೆರುಗಿಲ್ಲವೆಂದರೆ ಮುಕ್ಕಾಗಿದೆಯೆಂದರೆ-ಅದರಲ್ಲಿರುವ ತುಪ್ಪದ ಕಂಪಿಗೆ, ಹಾಲಿನ ಸಿಹಿಗೆ ಕೊರತೆಯೇನು ? ಹಾಗೆಯೇ ಶಿವಶರಣರಿಗೆ ಹಲ್ಲು ಬಿದ್ದಿದೆಯೆಂದರೆ, ಕಾಲು ಕುಂಟಾಗಿದೆಯೆಂದರೆ ಅವರಲ್ಲಿರುವ ಶಿವಜ್ಞಾನಕ್ಕೆಂದಿಗೂ ಕೊರತೆಯಾಗುವುದಿಲ್ಲ. ತೀರ ದೈಹಿಕವಾದ ಕುಂದು ಕೊರತೆಗಳು ಶರಣನೊಬ್ಬನ ಗಣ್ಯತೆಗೆ ಆಧಾರವಾಗುವುದಿಲ್ಲ. ಶರಣರು ಎಂದಿಗೂ ಹೇಗಿದ್ದರೂ ಗೌರವಾರ್ಹರೆ ಆಗಿರುವರು. ಸ್ವತಂತ್ರ ಬಂದ ಮೇಲೆ-ಇತ್ತೀಚಿನ ದಿನಗಳಲ್ಲಿ ತಾನೇ-ಅಂಗವಿಕಲರ ಬಗ್ಗೆ ವೃದ್ಧರ ಬಗ್ಗೆ ಸೇವಾಭಾವನೆ ತೊಡಗಿದೆ. ಆದರೆ 800 ವರ್ಷಗಳ ಹಿಂದೆಯೇ ಬಸವಣ್ಣನವರು ತಾವು ನಿರ್ಮಿಸಿದ ಸಮಾಜದಲ್ಲಿ ಅಂಗ ವೈಕಲ್ಯವು ಮಾನವನ ಘನತೆಯನ್ನು ಕಡಿಮೆ ಮಾಡಲಾರದೆಂದು ಹೇಳಿದ್ದು ಅವರ ದೃಷ್ಟಿಯ ಅತ್ಯಾಧುನಿಕತೆಗೆ ಸಾಕ್ಷಿಯಾಗಿದೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು