•  
  •  
  •  
  •  
Index   ವಚನ - 418    Search  
 
ಭಕ್ತನ ಭಕ್ತಸ್ಥಲ - ಲಿಂಗ-ಜಂಗಮ
ಆಚಾರವರಿಯಿರಿ, ವಿಚಾರವರಿಯಿರಿ: ಜಂಗಮಸ್ಥಲ ಲಿಂಗ ಕಾಣಿರಯ್ಯಾ. ಜಾತಿಭೇದವಿಲ್ಲ, ಸೂತಕವಿಲ್ಲ, ಅಜಾತಂಗೆ ಕುಲವಿಲ್ಲ! ನುಡಿದಂತೆ ನಡೆಯದಿದ್ದರೆ ಕೂಡಲಸಂಗಯ್ಯ ಮೆಚ್ಚ, ಕಾಣಿರಯ್ಯಾ.
Transliteration Ācāravariri, vicāravariri: Jaṅgamasthala liṅga kāṇirayya. Jātibhēdavilla, sūtakavilla, ajātaṅge kulavilla! Nuḍidante naḍeyadiddare kūḍalasaṅgayya mecca, kāṇirayya.
Manuscript
English Translation 2 Mark their behaviour and their minds; And you will see The Jaṅgama-stage is Liṅga. There's here No difference of caste, no taint,- The beyond birth is beyond class! Unless you live up to your words, Lord Kūḍala Saṅgama is not pleased! Translated by: L M A Menezes, S M Angadi
Hindi Translation आचार जानो विचार जानो; देखो जंगमस्थल ही लिंग है जातिभेद नहीं है, सूतक नहीं है, अजात का जात नहीं है । कथनानुसार आचरण नहीं करो तो कूडलसंगमदेव प्रसन्न नहीं होंगे ॥ Translated by: Banakara K Gowdappa
Telugu Translation ఆచార మెఱుగరు విచార మెఱుగరు జంగముడే లింగము కానరో జాతిభేదము సూతకము లేదు కులము లేదజాతునకు చెప్పినటుల చేయకున్న మెచ్చడయ్యా సంగమదేవుడు Translated by: Dr. Badala Ramaiah
Tamil Translation நன்னெறியை யறியீர், ஆராய்ந்தறியலரியீர் ஜங்கமத்தலம் இலிங்கம் காணீரோ சாதிவேறுபாடு இல்லை, மாசு இல்லை பிறப்பிலிக்குத் குலமில்லை கூறியவாறு ஒழுகாதிருப்பின் கூடலசங்கமதேவன் மெச்சுவதில்லை காணீர் Translated by: Smt. Kalyani Venkataraman, Chennai
Marathi Translation आचारा जाणूनी, विचार करुनी जंगमा समजूनी, घ्यावे आधि लिंगरुप जंगम, अरुप अनाम अजात उत्तम, सेव्य शरण नसे जातिभेद, अजाता सुतक कुल गोत्र देख, नसे तेथे बोलताती तसे, चालताती नित्य समाधानी सत्य, पूर्ण रुप कूडलसंगमदेवा ! जंगम अरुप मायातील रुप तयांचे ते अर्थ – आचार व विचार प्रथम चांगल्या तऱ्हेने जाणून घ्यावे कारण लिंग-जंगम - गुरू एकच असल्याकारणाने तेथे जातीभेद नाही. शिवाय जंगमगुरूच्या हस्त- मस्तक संयोगाने गुरू शिष्यास आपलेसे करून घेत असतो. या क्रियेमुळे गुरू शिष्यातील संबंध एखाद्या अजाताप्रमाणे होत. अर्थात तेथे अयोनी संबंध घडतो. अयोनि संबंधामुळे गुरू व शिष्यात जात-पात, पंचसूतक किंवा शिवा-शिवी वैगेरे बंधन गळून पडतात जसे अजात शिवशरण बोलतात तसे चालतात. म्हणून शिवशरणच परमेश्वरी प्रसन्नता प्राप्तीचे अधिकारी ठरतात. Translated by Rajendra Jirobe, Published by V B Patil, Hirabaug, Chembur, Mumbai, 1983 आचार जाणून घ्या, विचार समजून घ्या. जंगमस्थली लिंग आहे पहा देवा. जातीभेद नाही, सूतक नाही, अजाताला कुल नाही. बोलल्याप्रमाणे चालले नाही तर कूडलसंगम प्रसन्न होणार नाही. Translated by Shalini Sreeshaila Doddamani
ಶಬ್ದಾರ್ಥಗಳು ಅಜಾತ = ಹುಟ್ಟು ಇಲ್ಲದ, ಭವವಳಿದ, ಶರಣ; ಜಂಗಮ = ; ವಿಚಾರ = ; ಸೂತಕ = ; ಸ್ಥಲ = ;
ಕನ್ನಡ ವ್ಯಾಖ್ಯಾನ ಯಾರು ತಮ್ಮ ವೈರಾಗ್ಯದಿಂದ ಮತ್ತು ಸಾಧನೆಯಿಂದ ಜಂಗಮಸ್ಥಲವನ್ನು ತಲುಪಿರುವರೋ-ಅವರೇ ಸಾಕ್ಷಾತ್(ಶಿವ)ಲಿಂಗ. ಅವರಿಗೆ ಕೀಳು ಮೇಲು ಎಂಬ ಜಾತಿಯಿಲ್ಲ. ಸ್ಪೃಶ್ಯ ಅಸ್ಪೃಶ್ಯವೆಂಬ ಸೂತಕವಿಲ್ಲ. ಜಂಗಮತ್ವವೆಂಬುದು ಹುಟ್ಟಿನಿಂದ ಬರುವುದಲ್ಲ ವೈರಾಗ್ಯ ಗುಣಮಟ್ಟದಿಂದ ಬರುವುದೆಂಬುದು ಬಸವೋಪದೇಶದಲ್ಲಿ ಬಹಳ ಮುಖ್ಯವಾದ್ದು. ಇದನ್ನೇ ಬಸವಪೂರ್ವದ ಮಾದಾರ ಚೆನ್ನಯ್ಯ, ದೇವರ ದಾಸಿಮಯ್ಯ ಮುಂತಾದವರೂ ಪ್ರಣೀತ ಮಾಡಿದ್ದರು. ಇದಕ್ಕೆ ವಿಶೇಷವಾದ ಒತ್ತುಕೊಟ್ಟವರು ಬಸವಣ್ಣನವರೇ. ಬಸವಣ್ಣನವರು-“ಆಚಾರವನರಿಯಿರಿ ವಿಚಾರವನರಿಯಿರಿ” ಎಂದು ಯಾರಿಗೆ ಹೇಳುತ್ತಿದ್ದಾರೆ ? ಜಾತಿಜಂಗಮವಾದಿಗಳಾದ ಸಂಪ್ರದಾಯಸ್ಥರಿಗೆ ! ಆದುದರಿಂದಲೇ “ಜಂಗಮ”ಪದವನ್ನಿಲ್ಲಿ “ಸ್ಥಲ”ಪದ ಸಹಿತವಾಗಿಯೇ ಬಳಸಿರುವರು. ಈ ಸ್ಥಲಶಬ್ದವು ಜಾತಿ ಎಂಬುದಕ್ಕೆ ವಿರುದ್ಧಾರ್ಥವುಳ್ಳುದು. ಇದನ್ನು ವೈಚಾರಿಕವಾಗಿ ಮಾನ್ಯ ಮಾಡದವನು ಭಕ್ತನೂ ಅಲ್ಲ, ಶರಣನೂ ಅಲ್ಲ, ಜಂಗಮನೂ ಅಲ್ಲ. ಅಜಾತ : ಶಿವಾವಿರ್ಭೂತ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು