ಭಕ್ತನ ಭಕ್ತಸ್ಥಲ - ಲಿಂಗ-ಜಂಗಮ
ಸ್ಥಾವರಭಕ್ತಂಗೆ ಸೀಮೆಯಲ್ಲದೆ
ಘನಲಿಂಗ ಜಂಗಮಕ್ಕೆ ಸೀಮೆಯೆಲ್ಲಿಯದು?
ಅಂಬುಧಿಗೆ ಸೀಮೆಯಲ್ಲದೆ
ಹರಿವ ನದಿಗೆ ಸೀಮೆಯೆಲ್ಲಿಯದು?
ಭಕ್ತಂಗೆ ಸೀಮೆಯಲ್ಲದೆ
ಜಂಗಮಕ್ಕೆ ಸೀಮೆಯುಂಟೆ, ಕೂಡಲಸಂಗಮದೇವಾ?
Transliteration Sthāvarabhaktaṅge sīmeyallade
ghanaliṅgajaṅgamakke sīmeyelliyadu?
Ambudhige sīmeyillade
hariva nadige sīmeyelliyadu?
Bhaktaṅge sīmeyallade
jaṅgamakke sīmeyuṇṭe, kūḍalasaṅgamadēvā?
Manuscript
English Translation 2 The devotee of the Static knows
A limit, but where's
The limit to the soverign moving God?
The ocean has a limit but where's
The limit to the flowing stream?
The bhakta has a limit, but where's
The limit to the Jaṅgama
O Kūḍala Saṅgama Lord?
Translated by: L M A Menezes, S M Angadi
Hindi Translation स्थावर-भक्त की सीमा है,
घनलिंग जंगम की सीमा कहाँ?
अंबुधि की सीमा है,
बहती नदी की सीमा कहाँ?
भक्त की सीमा है,
जंगम की सीमा कहाँ, कूडलसंगमदेव?
Translated by: Banakara K Gowdappa
Telugu Translation స్థావరభ క్తునకు హద్దుగాని
ఘనలింగ జంగమునకు మేర యున్న దే?
అంబుధికి మేరయే కాని
పారు నదికి సీమ యున్నదే?
భక్తునకు సీమగాని జంగమునకు సీమ గలదే?
Translated by: Dr. Badala Ramaiah
Tamil Translation ஸ்தாவர பக்தனுக்கு எல்லையுள்ள தல்லதே
மேலான லிங்கஜங்கமனுக்கு எல்லை உளதோ?
கடலிற்கு எல்லையுள்ளதல்லதே
பாயும் நதிக்கு எல்லை உளதோ?
பக்தனுக்கு எல்லையுள்ளதல்லதே, ஜங்கமனுக்கு
எல்லையுண்டோ? கூடலசங்கமதேவனே.
Translated by: Smt. Kalyani Venkataraman, Chennai
Marathi Translation
सीमासहित असती, भक्त ते स्थावर
लिंग जंगम मात्र, ते असीम
सागराती सीमा, असतेचि खास
वाहत्या नदीत, सीमा कैसी ?
कूडलसंगमदेवा ! भक्ता असे सीमा
जंगमा असीमा, जाणशि तू
अर्थ - स्थावर लिंगाची पूजा करणाऱ्या भक्तांना सीमा असते. तसेच सागराला देखील सीमा असते मात्र नदीला सीमा नसते, तसे शिवस्वरुपी चराचर लिंगमुखी जंगमगुरूना सीमा म्हणून नसते. कारण ते स्वच्छंदी, सर्व विकारातीत, इहलोक व परलोकाचे ध्यापक असे मानकरी असतात.
Translated by Rajendra Jirobe, Published by V B Patil, Hirabaug, Chembur, Mumbai, 1983
स्थावर भक्ताला सीमा असू शकते.
घनलिंग जंगमाला सीमा कोठे आहेत?
सागराला सीमा आहे पण वाहत्या नदीला सीमा आहे?
भक्ताला सीमा आहे, जंगमाला सीमा आहे का
कूडलसंगमदेवा ?
Translated by Shalini Sreeshaila Doddamani
ಶಬ್ದಾರ್ಥಗಳು ಅಂಬುಧಿ = ಸಮುದ್ರ; ಜಂಗಮ = ; ಸೀಮೆ = ; ಸ್ಥಾವರ = ;
ಕನ್ನಡ ವ್ಯಾಖ್ಯಾನ ಇಲ್ಲಿ ಜಂಗಮವು ನಿಂತಲ್ಲಿ ನಿಲ್ಲದೆ ಸದಾ ಸಂಚಾರಶೀಲನಾಗಿರುವನೆಂಬುದನ್ನು ವಿವಿಧ ಅರ್ಥಚ್ಛಾಯೆಗಳಲ್ಲಿ ಬಿಡಿಸಲಾಗಿದೆ : ಅವನನ್ನು ಹರಿಯುವ ನದಿಗೆ ಹೋಲಿಸಲಾಗಿದೆ. ಕುಟುಂಬಜೀವನದಲ್ಲಿ ತೊಡಗಿರುವ ಭಕ್ತನಿಗೆ-ಒಂದು ಎಲ್ಲೆಯಿದೆ-ಆ ಎಲ್ಲೆ ಜಂಗಮಕ್ಕಿಲ್ಲ. ಅತಿ ದೊಡ್ಡದಾದ ಸಮುದ್ರಕ್ಕೂ ಒಂದು ಎಲ್ಲೆಯಿದೆ-ಆ ಎಲ್ಲೆ ಜಂಗಮಕ್ಕಿಲ್ಲ. ಜಂಗಮವು ಭಕ್ತನಂತೆ ಒಂದು ಪರಿಮಿತಿಗೆ ಒಳಗಾದುದಲ್ಲ. ಸಮುದ್ರದಂತೆ ನಿಂತ ನೀರಲ್ಲ, ಸದಾ ಪ್ರ-ಗತಿಶೀಲ, ಬಸವಣ್ಣನವರ ಈ ಜಂಗಮವು ವೈದಿಕದ ಪರಿವ್ರಾಜಕ ಪರಮಹಂಸನಂತೆ ಎಂದು ಸ್ಥೂಲವಾಗಿ ಹೇಳಬಹುದು.
ಜನ ಈ ಜಂಗಮವನ್ನು ತಂತಮ್ಮ ಪಾವು ಚಟಾಕುಗಳಲ್ಲಿ ಅಳೆಯಬಾರದೆಂಬುದೇ ಈ ವಚನದ ಆದೇಶ. ಸೀಮೆ : 1 ಎಲ್ಲೆ 2 ರಾಜ್ಯ 3 ನಿಯಮ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು