•  
  •  
  •  
  •  
Index   ವಚನ - 421    Search  
 
ಭಕ್ತನ ಭಕ್ತಸ್ಥಲ - ಲಿಂಗ-ಜಂಗಮ
ಮರಕ್ಕೆ ಬಾಯಿ ಬೇರೆಂದು ತಳಕ್ಕೆ ನೀರೆರದರೆ ಮೇಲೆ ಪಲ್ಲವಿಸಿತ್ತು ನೋಡಾ! ಲಿಂಗದ ಬಾಯಿ ಜಂಗಮವೆಂದು ಪಡಿಪದಾರ್ಥವ ನೀಡಿದರೆ ಮುಂದೆ ಸಕಲ ಪದಾರ್ಥವನೀವನು! ಆ ಜಂಗಮವ ಹರನೆಂದು ಕಂಡು ನರನೆಂದು ಭಾವಿಸಿದರೆ ನರಕ ತಪ್ಪದು, ಕಾಣಾ, ಕೂಡಲಸಂಗಮದೇವಾ!
Transliteration Marakke bāyibērendu taḷakke nīraredare mēle pallavisittu nōḍā! Liṅgada bāyi jaṅgamavendu paḍipadārthava nīḍidare munde sakala padārthavanīvanu! Ā jaṅgamava haranendu kaṇḍu naranendu bhāvisidare naraka tappadu, kāṇā, kūḍalasaṅgamadēvā!
Manuscript
English Translation 2 The root is the mouth of the tree: pour water there at the bottom and, look, it sprouts green at the top. The Lord's mouth is his moving men, feed them. The Lord will give you all. You'll go to hell, if, knowing they are the Lord, you treat them as men.

Translated by: A K Ramanujan
Book Name: Speaking Of Siva
Publisher: Penguin Books
----------------------------------
If, knowing the root is the tree's mouth You water it below, Lo, high up the sprouts appear! If, knowing the Jaṅgama to be The Liṅga's mouth, you serve him food, It gives you a banquet in return! If, seeing the Jaṅgama to be God, You think him to be man, Look, you will not escape hell, O Kūḍala Saṅgama Lord! Translated by: L M A Menezes, S M Angadi

Hindi Translation वृक्ष मूल को ही मुख समझ तल में पानी दो, तो देखो, ऊपर पल्लवित होगा! लिंग-मुख को जंगम समझ भोजन दो, तो भविष्य में वह सकल संपत्ति देगा । उस जंगम में शिव को देख नर मान लो, तो देखो नरक अनिवार्य है कूडलसंगमदेव ॥ Translated by: Banakara K Gowdappa
Telugu Translation చెట్టుకు నోరు వ్రేళ్ళని మొదటికి నీళ్ళు పోసిన పైన చిగురించు కదరా శివునినోరు జంగమమని పడి పదార్థములిచ్చిన ముందు సకలపదార్థము లిచ్చును ఆ జంగముని హరుడంచు చూచి నరుడంచు తలచిన నరకము తప్పదురా కూడల సంగమదేవా! Translated by: Dr. Badala Ramaiah
Tamil Translation மரத்தின் மேல்பகுதி, வேர் என்று தளத்தில் நீர் ஊற்றிட மேலே துளிர்த்தது காணாய்! இலிங்கத்தின் வாய் ஜங்கமம் என உணவை ஈந்தால் பிறகு அனைத்துச் செல்வத்தையுமீவான் ஜங்கமனைச் சிவனென்று கண்டு, மனிதன் என எண்ணினால் நரகம் தவறுமோ காணாய் கூடல சங்கம தேவனே. Translated by: Smt. Kalyani Venkataraman, Chennai
Marathi Translation मुळा मानी तोंड, घालितसे पाणी वृक्ष पल्लवानी, बहरेल लिंगाचे ते मुख, मानी जंगमासि दासोहाने त्यासी, करी तृप्त जे जे त्या अर्पिल, कोटी ते पावेल पुढती होईल, भाग्यवंत जया हर मांनी, तया मानी नर विकारी विचार, भक्त कैसा ? कूडलसंगमदेव! तैशा नरा नरक ठेवताती देख, राखोनिया अर्थ - वृक्षाच्या मूळाला त्या वृक्षाचे मुख समजून त्याला सतत पाणी टाकीत राहिल्यास तो वृक्ष पल्लवित होईल व बहरून येईल. त्याच प्रमाणे चरलिंगमूर्ति जंगमगुरूना लिंगदेवाचे मूख मानून त्यांची सेवा करीत राहिल्यास त्यांना अन्न वस्त्र व धन अर्पण केल्यास परमेश्वर प्रसन्न झाल्याशिवाय राहणार नाही. अशांना मनोवांछित ते संपत्ती प्राप्त होईल. जर एखाद्याने हररूपी जंगमगुरुना साक्षात ईश्वर समजून त्यांची मनोभावे सेवा करून त्यांना सर्वसाधारण नर समजून किंवा त्यांच्याबद्दल शंका घेऊन त्याना कुडालसंगमदेव (परमेश्वर) अशांना नरकात पाठविल्याशिवाय राहणार नाही. Translated by Rajendra Jirobe, Published by V B Patil, Hirabaug, Chembur, Mumbai, 1983 झाडाची मूळे हेच मुख समजून खाली पाणी घातले तर वर पालवी फुटते पहा. लिंगाचे मुख जंगम म्हणून सर्व पदार्थ अर्पण केले तर भविष्यात सकल संपत्ती लाभ होईल. त्या हररुपी जंगमाला नररुप म्हणू लागला तर नरक चुकणार नाही कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಜಂಗಮ = ; ನರಕ = ; ನರಕ = ; ಪಡಿಪದಾರ್ಥ = ; ಪಲ್ಲವಿಸು = ; ಹರ = ;
ಕನ್ನಡ ವ್ಯಾಖ್ಯಾನ ವೃಕ್ಷ ಪಲ್ಲವಿಸಿ ಪುಷ್ಪ-ಫಲ ದೊರೆಯಬೇಕಾದರೆ-ಅದರ ತಳಕ್ಕೆ ನೀರೆರೆಯಬೇಕು. ಏಕೆಂದರೆ ವೃಕ್ಷಕ್ಕೆ ಬಾಯಿರುವುದು ಬೇರಿನಲ್ಲಿ. ಆ ಮೂಲಕವೇ ಅದು ಏನೆಲ್ಲವನ್ನೂ ಸ್ವೀಕರಿಸುವುದು. ಹಾಗೆಯೇ ಭಕ್ತರು-ಲಿಂಗಕ್ಕೆ ಸಮರ್ಪಿಸುವೆವೆಂಬುದನ್ನು ಜಂಗಮಕ್ಕೆ ಕೊಡಬೇಕು, ಜಂಗಮವೇ ಲಿಂಗದ ಬಾಯಿ. ಲೌಕಿಕದಲ್ಲಿ ವೃಕ್ಷಕ್ಕೆ ಎಲ್ಲಿ ನೀರೆರೆಯಬೇಕೆಂಬುದನ್ನು ಅರಿಯದವನು ಎಷ್ಟು ಮೂರ್ಖನೋ-ಧರ್ಮ ಕ್ಷೇತ್ರದಲ್ಲಿ ಲಿಂಗಕ್ಕೆ ಯಾವ ಮೂಲಕ ಅರ್ಪಿಸಬೇಕೆಂಬುದನ್ನು ತಿಳಿಯದವನು ಅಷ್ಟೇ ಮೂರ್ಖ. ವೃಕ್ಷದ ಕೆಳಕ್ಕೆ ನೀರೆರೆದರೆ ಅದು ಮೇಲೆ ಫಲ ಕೊಡುವುದು-ಜಂಗಮದ ಮೂಲಕ ಅರ್ಪಿಸಿದರೆ ಶಿವನು “ಆ-ಮೇಲೆ” ಮುಕ್ತಿ ಫಲವನ್ನು ಕೊಡುವನು. ಜಂಗಮವು ಮಾನವರಿಗೆಟಕುವ ಶಿವನ ಪಾದತಳವೇ ಆಗಿದೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು