•  
  •  
  •  
  •  
Index   ವಚನ - 422    Search  
 
ಭಕ್ತನ ಭಕ್ತಸ್ಥಲ - ಲಿಂಗ-ಜಂಗಮ
ಆರಾಧನೆಯ ಮಾಡಿದಡೆ ಅಮೃತದ ಬೆಳಸು: ವಿರೋಧಿಸಿದಡೆ ವಿಷದ ಬೆಳಸು! ಇದು ಕಾರಣ, ಲಿಂಗ ಜಂಗಮಕ್ಕಂಜಲೆಬೇಕು. ಸ್ಥಾವರ ಜಂಗಮ ಒಂದೆಯೆಂದರಿದರೆ ಕೂಡಲಸಂಗಮದೇವ ಶರಣಸನ್ನಿಹಿತ.
Transliteration Ārādhaneya māḍidaḍe amr̥tada beḷaku: Virōdhisidaḍe viṣada beḷaku! Idu kāraṇa, liṅga jaṅgamakkan̄jalebēku. Sthāvara jaṅgama ondeyendarādare kūḍalasaṅgamadēva śaraṇasannihita.
Manuscript
English Translation 2 Whenever you worship, nectar grows, And poison when you offend? So, you should fear Liṅga-Jaṅgama If once you realise The Static and the Jaṅgama are one Lord Kūḍala Saṅgama is in you! Translated by: L M A Menezes, S M Angadi
Hindi Translation आराधना से अमृत फलेगा; विरोध से विष फलेगा । अतः लिंग-जंगम से ड़रना ही चाहिए । स्थावर-जंगम को एक मानने से कूडलसंग से शरणसन्निहित होंगे ॥ Translated by: Banakara K Gowdappa
Telugu Translation ఆరాధన సేయగ అమృతము పెరుగు విరోధింపగ విషమె పెరుగు కానలింగ జంగములకు వెఱవవలయు స్థావర జంగమ మొక టేయని తెలియగ కూడల సంగమదేవుడు శరణావహుడు. Translated by: Dr. Badala Ramaiah
Tamil Translation ஆராதனை செய்யின் அமுத விளைச்சல் எதிராக இருப்பின் நஞ்சின் விளைச்சல் எனவே, ஜங்கமத்திற்கு அஞ்ச வேண்டும் ஸ்தாவர ஜங்கமம் ஒன்றுதான் என அறியின் கூடல சங்கமதேவன் அடியாருடன் உறைவன் ஐயனே. Translated by: Smt. Kalyani Venkataraman, Chennai
Marathi Translation लिंगाची आराधने, अमृत पीक हाती जंगम विरोधी घेती, विष पिक भिऊनि वागावे, लिंग जंगमाना स्थावर जंगमाना, जाना एक कूडलसंगमदेव! ऐसा शरण पाही तया सन्निहित राही, सदा काळ अर्थ - परशिवाची आराधना केल्यास अमृताचे भरघोस पीक पदरी पडेल. आणि जंगम गुरूचा विरोध केला तर विषाचे पीक हाती येईल. म्हणून गुरूजंगम व लिंगदेवाना भिऊन वागावे. सदैव आपल्या आत्मलिंगावर (हृदयावर) विराजमान असलेला लिंगदेव व गावोगाव फिरून धर्मप्रचार करणारे जंगमगुरू यांना एकच समजावे व समदृष्टीने पूजा व भ्रत्याचार करावा. अशा पूजा व भ्रत्याचार करणाऱ्या भक्ताजवळ कूडलसंगमदेव (परमेश्वर) सदैव वास करीत असतो. Translated by Rajendra Jirobe, Published by V B Patil, Hirabaug, Chembur, Mumbai, 1983 आराधना केली तर अमृताचे पिक. विरोध केला तर विषाचे पिक. यासाठी जंगमाला घाबरले पाहिजे. कूडलसंगमदेव, स्थावर जंगमाला एक समजले तर शरण सन्निहित होतील. Translated by Shalini Sreeshaila Doddamani
ಶಬ್ದಾರ್ಥಗಳು ಅಂಜು = ಹೆದರು; ಆರಾಧನೆ = ; ಜಂಗಮ = ; ಸನ್ನಿಹಿತ = ; ಸ್ಥಾವರ = ;
ಕನ್ನಡ ವ್ಯಾಖ್ಯಾನ ಜಂಗಮಾರಾಧನೆಯ ಕೃಷಿ ಮಾಡಿದರೆ ಅಮೃತವನ್ನು ಬೆಳೆಯುತ್ತಾರೆ-ಬದುಕುತ್ತಾರೆ. ಜಂಗಮ ದ್ವೇಷದ ಕೃಷಿ ಮಾಡಿದರೆ ವಿಷವನ್ನು ಬೆಳೆಯುತ್ತಾರೆ-ಸಾಯುತ್ತಾರೆ. ಈ ಪರಿಣಾಮದೃಷ್ಟಿಯಿಂದ ಜಂಗಮಕ್ಕೆ ಅಂಜಬೇಕು. (ಮರದಡಿಯಲ್ಲಿ ಗುಡಿಯಲ್ಲಿ) ಕೈಯಲ್ಲಿ ಇರುವ ಸ್ಥಾವರಲಿಂಗಕ್ಕೂ ನಮ್ಮ ನಡುವೆಯೇ ನಡೆದಾಡುವ ಜಂಗಮ(ಲಿಂಗ)ಕ್ಕೂ ವ್ಯತ್ಯಾಸವೇನೂ ಇಲ್ಲ ಎಂದರಿತು ಆ ಲಿಂಗಕ್ಕೆ ಮಾಡುವ ಭಕ್ತಿಯನ್ನು ಈ ಜಂಗಮಕ್ಕೂ ಮಾಡಿದರೆ-ಶಿವನು ಭಕ್ತರ ಬಳಿಬಳಿಯೇ ಇದ್ದು ಅವರ ಯೋಗಕ್ಷೇಮವನ್ನೆಲ್ಲಾ ನಿರ್ವಹಿಸುವನು. ಜಂಗಮವನ್ನು “ವಿರೋಧಿಸಿದರೆ ವಿಷದ ಬೆಳಸು” ಎಂಬ ಮಾತು ಬಹಳ ಗಮನಾರ್ಹ. ಅದು ಬಸವಣ್ಣನವರ ಸಮಾಜವ್ಯವಸ್ಥೆಯಲ್ಲಿ ಜಂಗಮದ ಪ್ರಶ್ನಾತೀತವಾದ ಸ್ಥಾನವನ್ನು ಸೂಚಿಸುತ್ತದೆ-ಮತ್ತು ಜಂಗಮದ ದಿವ್ಯ ನಿಲುವನ್ನೂ ಸೂಚಿಸುತ್ತದೆ-ಆರಾಧನೆಯ ಮಾಡಿದರೆ ಅಮೃತದ ಬೆಳಸು ಎಂಬ ಮಾತು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು