•  
  •  
  •  
  •  
Index   ವಚನ - 423    Search  
 
ಭಕ್ತನ ಭಕ್ತಸ್ಥಲ - ಜಂಗಮ
ಹೊಸತಿಲ ಪೂಜಿಸಿ ಹೊರವಟ್ಟು ಹೋದ ಒಕ್ಕಲಿತಿಯಂತಾಯಿತ್ತೆನ್ನ ಭಕ್ತಿ! ಜಂಗಮವೆನ್ನೊಡೆಯರೆಂದು ಒಕ್ಕುದ ಕೊಂಡು ಉದಾಸೀನವ ಮಾಡಿದರೆ, ಇಹಲೋಕಕ್ಕೆ ದೂರ, ಪರಲೋಕಕ್ಕೆ ದೂರ! ಕೂಡಲಸಂಗಮದೇವ ಅಘೋರ ನರಕದಲ್ಲಿಕ್ಕುವ!
Transliteration Hosatila pūjisi horavaṭṭu hōda okkalitiyantāyittenna bhakti! Jaṅgamavennoḍeyarendu okkuda koṇḍu udāsīnava māḍidare, ihalōkakke dūra, paralōkakke dūra! Kūḍalasaṅgamadēva aghōranarakadallikkuva!
Manuscript
English Translation 2 My piety has become Like to a farmer woman who Worships the threshold and is gone! If I accept what Jaṅgama s return, And fail to recognise them as lords, I'm equally cut off From this world and the next! Lord Kūḍala Saṅgama shall consign me To a terrific hell. Translated by: L M A Menezes, S M Angadi
Hindi Translation देहरी की पूजा कर बाहर जानेवाली दासी की भाँती है मेरी भक्ति । जंगम को अपना प्रभु मान प्रदत्त प्रसाद लेकर उपेक्षा करूँ, तो इहलोक परलोक से दूर होऊँगा ! कूडलसंगमदेव घोर नरक में डाल देंगे ॥ Translated by: Banakara K Gowdappa
Telugu Translation కడపకు పూజించి కాళ్ళ దాటిపోవు పనికత్తె గతియయ్యె నా భక్తి జంగముడే ప్రభుడని ప్రసాదమంది ఉదాసీనము సేయగ ఇహమూ లేదు పరమూ రాదు అఘోర నరకమున పడవేయు కూడల సంగమదేవుడు Translated by: Dr. Badala Ramaiah
Tamil Translation நிலைப்படியைப் பூசித்து வெளியேறிய இல்லக்கிழத்தியனையதாயிற்று என் பக்தி ஜங்கமர் என் உடையர் என்று திருவமுதை ஏற்று அலட்சியம் செய்யின் இம்மைக்கும் தொலைவு, மறுமைக்கும் தொலைவு கூடலசங்கமதேவன் கடுமையான நரகத்தில் இருத்தி விடுவான். Translated by: Smt. Kalyani Venkataraman, Chennai
Marathi Translation पुजूनि उंबरठा, जाते जी बाहेरी अज्ञानाच्या स्त्रीपरी, भक्ति ठरी त्याची जंगमाना मानूनि, प्रसाद सेवी ज्यांनी मागे उपेक्षा त्यांनी करू नये कूडलसंगमदेवा ! ऐसा जो इहलोकी भोगी तो दोन्ही लोकी घोर नर्क अर्थ - साक्षात लिंगस्वरूपी जंगमगुरुना आपले स्वामी मानून त्यांचा शेष प्रसाद सेवन करुन नंतर त्यांची उपेक्षा करणे म्हणजे उंबरठ्याची पूजा करून, उंबरठ्याच्या बाहेर जाणाऱ्या अडाणी स्त्रियाप्रमाणे त्यांची भक्ति होय. अशा भक्तांची भक्ती फोल होय. ते इहलोकापासून वंचित होतात व परलोकापासूनही दूर राहतात. कूडलसंगमदेव (परमेश्वर) अशा भक्तांना घोर नरकात टाकल्याशिवाय राहणार नाही. Translated by Rajendra Jirobe, Published by V B Patil, Hirabaug, Chembur, Mumbai, 1983 उंबऱ्याची पूजा करुन बाहेर गेलेल्या शेतकऱ्याच्या स्त्रीप्रमाणे माझी भक्ती. जंगमाला देव मानून प्रसाद घेतला आणि नंतर त्याची उपेक्षा केली तर इहलोकापासून दूर, परलोकापासूनदूर ! कूडलसंगम घोर नरकात ढकलतील. Translated by Shalini Sreeshaila Doddamani
ಶಬ್ದಾರ್ಥಗಳು ಅಘೋರ = ನಿಷ್ಠುರ, ಭಯಂಕರ; ಇಹಲೋಕ = ; ಉದಾಸೀನ = ; ಒಕ್ಕುದ = ; ಜಂಗಮ = ; ತಿಲ = ; ಪರಲೋಕ = ; ಹೊರವಟ್ಟು = ;
ಕನ್ನಡ ವ್ಯಾಖ್ಯಾನ ಜಂಗಮ ನನ್ನ ಒಡೆಯರೆನ್ನುತ್ತ ಅವನ ಪ್ರಸಾದವನ್ನುಂಡು-ಆ ಜಂಗಮ ಏಳುವುದಕ್ಕೆ ಮೊದಲೇ-ತಿರುವಿಕೊಂಡು ಹೋದರೆ ಪಾಪವೆನ್ನುತ್ತ-ಹೊಸ್ತಿಲನ್ನು ಪೂಜಿಸಿ ಅದಕ್ಕೆ ಅಡ್ಡಬಿದ್ದು ಅದನ್ನೇ ತುಳಿದು ದಾಟಿ ಹೋದ ಒಬ್ಬ ಗಾಂಪಳ ನಿದರ್ಶನವನ್ನು ಕೊಟ್ಟಿರುವರು ಬಸವಣ್ಣನವರು. ಜಂಗಮ ಪ್ರಸಾದವನ್ನು ಸ್ವೀಕರಿಸಿ ಅವರಿಗಿಂತ ಮೊದಲು ಭಕ್ತನೇ ಎದ್ದು ಹೋಗುವುದು ಸರಿಯಲ್ಲವೆಂಬ ಒಂದು ಆಚರಣೆಯ ಕ್ರಮವನ್ನು ಇಲ್ಲಿ ಹೇಳಿದೆ. ವಿ : ಈ ವಚನದಲ್ಲಿ “ಒಕ್ಕಲಿತಿ” ಎನ್ನುವ ಪದವನ್ನು ಜಾತಿವಾಚಕವಾಗಿ ಬಳಸಿಲ್ಲವಾದರೂ-ತನ್ನ ಮನೆಯ ಕಸಮುಸುರೆಯ ಚಾಕರಿಯನ್ನು ಮಾಡುವ ಶೂದ್ರಳನ್ನು ಒಕ್ಕಲಿತಿ ಎಂದೇ ಬ್ರಾಹ್ಮಣರು ಇಂದಿಗೂ ಪ್ರಸ್ತಾಪಿಸುವುದನ್ನು ಮರೆಯಬಾರದು. ಬಸವಣ್ಣನವರು ಪರಿಹರಿಸಿಕೊಳ್ಳಲು ಯತ್ನಿಸಿದ ತಮ್ಮ ಬ್ರಾಹ್ಮಣಿಕೆ-ಅವರು ಬಳಸುವ ಭಾಷೆಯ ರೂಪದಲ್ಲಾದರೂ ಉಳಿದಿತ್ತೆನ್ನುವುದನ್ನು ಇಲ್ಲಿ ನೋಡಬೇಕು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು