ಭಕ್ತನ ಭಕ್ತಸ್ಥಲ - ಲಿಂಗ-ಜಂಗಮ
ಲಿಂಗವ ಪೂಜೆಯ ಮಾಡಿ, ಜಂಗಮವ ಕಂಡುದಾಸೀನವ ಮಾಡಿದರೆ,
ಆ ಲಿಂಗಪೂಜಕರಿಗೆ ಮಾಡಿದ ಶಿವದೂತರ ದಂಡವೆಂಬುದು!
ಲೋಕದ ಕರ್ಮಿಗಳಿಗೆ ಮಾಡಿದ ಯಮದೂತರ ದಂಡವೆಂಬುದು!
ಇದು ಕಾರಣ, ಲಿಂಗ ಜಂಗಮವನೊಂದೆಂದರಿಯದವರ
ಎನಗೆ ತೋರದಿರಯ್ಯಾ, ಕೂಡಲಸಂಗಮದೇವಾ.
Transliteration Liṅgava pūjeya māḍi, jaṅgamava kaṇḍudāsīnava māḍidare,
ā liṅgapūjakarige māḍida śivadūtara daṇḍavembudu!
Lōkada karmigaḷige māḍida yamadūtara daṇḍavembudu!
Idu kāraṇa, liṅga jaṅgamavanondendariyadavara
enage tōradirayyā, kūḍalasaṅgamadēvā.
Manuscript
English Translation 2 If, worshipping the Liṅga upon the sight
Of Jaṅgama you turn your back to him,
Such Liṅga worshipper shall have
Chastisement from the Śiva messengers!
The addicts of this world shall have
Chastisement from Yama's messengers!
Therefore O Kūḍala Saṅgama Lord,
Let me not see
Such men as do not recognise
Liṅga and Jaṅgama as one.
Translated by: L M A Menezes, S M Angadi
Hindi Translation लिंगपूजा कर जंगम की उपेक्षा करें,
तो ऐसे लिंग-पूजकों को शिवदूतों दंड देंगे
लोक-कर्मियों को यमदूतों दंड देंगे
अतः कूडलसंगमदेव, लिंग और जंगम को
एक नहीं माननेवालों को मुझे मत दिखाओ॥
Translated by: Banakara K Gowdappa
Telugu Translation లింగమును పూజించి
జంగముని ఉపేక్షించు
నా లింగ పూజకులకు
శివదూతల శిక్ష తప్పదు
లౌకిక కర్మఠులకు
యమదూతల శిక్ష తప్పునె?
కాన లింగజంగముల నొకటే
యని తెలియనివారిని నాకు
చూపకయ్యా కూడల సంగమ దేవా !
Translated by: Dr. Badala Ramaiah
Tamil Translation இலிங்கத்தைப் பூசித்து, ஜங்கமரைக்
கண்டு அலட்சியம் செய்யின்
இலிங்கத்தைப் பூசித்தோருக்கு, சிவதூதர்களின்
தண்டனை என்பது ஆகும்
உலகத்திலுள்ள, வினைசெய்தவர்களுக்குச் செய்த
யமதூதர்களின் தண்டனை ஆகும்
எனவே, இலிங்க ஜங்கமம் ஒன்றே என அறியாதவரை
எனக்குக் காட்டாதீர் ஐயனே
கூடல சங்கமதேவனே.
Translated by: Smt. Kalyani Venkataraman, Chennai
Marathi Translation
पूजुनी लिंगदेव, जंगमांना पाहता
उदासिन होता, कामा नये
लिंगपूजकांनी, उपेक्षिता ऐसा
शासन करी खासा, शिवदूत
लैाकीक कर्मीयांना यमदूत जैसे
शासीताति तैसे, शिवदूत
कूडलसंगमदेवा ! उदासिन लोका
तोंड पाहू नका, कदाकाळी
अर्थ – लिंगाची पूजा-अर्चा करणाऱ्यानी जंगमगुरूबद्दल कधीही उदासिनता दाखवू नये इष्टलिंगाची पूजा व जंगमगुरुची सेवा भ्रत्याचार समदृष्टीने करावी. कारण जंगमगुरु प्राणकला चैतन्यमय अर्थात लिंगस्वरूपी असतात. म्हणून त्यांनी उपेक्षा करू नये. केल्यास शिवदूत त्यांना शिक्षा करतात. जसे या जगातील पापीयाना यमदूत शासन करतात. म्हणे हे कूडलसंगमदेवा ! (परमेश्वरा) अशा लोकांचे तोंडसुद्धा पाहणे नको.
Translated by Rajendra Jirobe, Published by V B Patil, Hirabaug, Chembur, Mumbai, 1983
लिंगपूजा करुन, जंगमाला पाहून उपेक्षा केली तर
त्या लिंगपूजकाला शिवदूत दंड देतील.
लौकिकाच्या कर्मीना यमदूत दंड देतील म्हणून
लिंग जंगमांना एक न म्हणणाऱ्यांचे
मला दर्शन मला दाखवू नका कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಉದಾಸೀನ = ; ಕರ್ಮಿ = ; ಜಂಗಮ = ; ದಂಡ = ; ಶಿವದೂತ = ;
ಕನ್ನಡ ವ್ಯಾಖ್ಯಾನ ಲಿಂಗಪೂಜಕ(ಲಿಂಗಾಯತ)ರಲ್ಲದವರಿಗೆ ಯಮದೂತರು ದಂಡಿಸುವರೆಂದೂ-ಲಿಂಗಪೂಜಕ (ಲಿಂಗಾಯತ)ರಾದವರು ಲಿಂಗಪೂಜೆಯನ್ನಾದರೂ ಮಾಡುವರಾದ್ದರಿಂದ ಅವರು ಜಂಗಮವನ್ನು ಉದಾಸೀನ ಮಾಡಿದರೂ ಅವರಿಗೆ ಉತ್ತಮ ದರ್ಜೆಯ (ಅಥವಾ ಲಿಂಗಾಯತರೇ ಆದ) ಶಿವದೂತರು ದಂಡಿಸುವರೆಂದು ಹೇಳುತ್ತಿರುವ ಈ ವಚನ ಎಷ್ಟು ಹಾಸ್ಯಾಸ್ಪದವಾಗಿದೆಯೆಂಬುದನ್ನು-ಕಟ್ಟಿದ ಕೂಟವಚನಕಾರನು ಊಹಿಸಲಾರದೇ ಹೋದ.
ವಾಸ್ತವವಾಗಿ ಲಿಂಗಪೂಜಕರು ತಮ್ಮ ಸಮಯಾಚಾರವನ್ನು ಮೀರಿ ಜಂಗಮವನ್ನು ಉದಾಸೀನ ಮಾಡಿದರೆ ಅವರಿಗೆ ಘೋರ ನರಕವೆಂದು ಬಸವಣ್ಣನವರು ಈ ಹಿಂದಿನ ವಚನದಲ್ಲೇ ಹೇಳಿರುವಾಗ-ಲಿಂಗ ಪೂಜಕ(ಲಿಂಗಾಯತ)ರೆಂದೂ, ಲೋಕದ ಕರ್ಮಿ(ಲಿಂಗಾಯತರಲ್ಲದ ಜನ)ಗಳೆಂದೂ ಅನವಸರವಾಗಿ ಮೇಲು ಕೀಳನ್ನು ನಿರುಗೆ ಮಾಡಿರುವ ಈ ವಚನ ಬಸವಣ್ಣನವರದಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು