ಭಕ್ತನ ಭಕ್ತಸ್ಥಲ - ಲಿಂಗ-ಜಂಗಮ
ಜಂಗಮವ ನಿಂದೆಯ ಮಾಡಿ, ಲಿಂಗವ ಪೂಜಿಸುವ ಭಕ್ತನ
ಅಂಗವಣಿಯೆಂತೋ? ಶಿವ ಶಿವಾ!
ನಿಂದಿಸುವ ಪೂಜಿಸುವ ಪಾತಕವಿದ ಕೇಳಲಾಗದು,
ʼಗುರುವಿನ ಗುರು ಜಂಗಮʼ-
ಇಂತೆಂದುದು ಕೂಡಲಸಂಗಯ್ಯನ ವಚನ.
Transliteration Jaṅgamava nindeya māḍi, liṅgava pūjisuva bhaktana
aṅgavaṇiyentō? Śiva śivā!
Nindisuva pūjisuva pātakavida kēḷalāgadu,
ʼguruvina guru jaṅgamaʼ-
intendudu kūḍalasaṅgayyana vacana.
Manuscript
English Translation 2 What habitude is it, good God,
A devotee to worship Liṅga and
Belittle a Jaṅgama?
Deliver us from hearing of the sin:
Worship allied to blasphemy...
Lord Kūḍala Saṅga's vachana says:
'A Guru's Guru is Jaṅgama'.
Translated by: L M A Menezes, S M Angadi
Hindi Translation जंगम-निंदा कर लिंग-पूजा करनेवाले
भक्त की कैसी ढिटाई है?
शिव शिव, निंदा एवं पूजा का पाप न सुनना चाहिए ।
‘गुरु का गुरु जंगम है’ यह कूडलसंगमेश का वचन है ॥
Translated by: Banakara K Gowdappa
Telugu Translation జంగముల నిందించి
లింగమును పూజించు
భక్తుని భక్తి యెట్టిదియో శివశివా!
నిందించు పూజించు పాతకమిది వినరాదు
గురువునకు గురువు జంగముడని
సంగయ్య వచనము చాటుచుండె
Translated by: Dr. Badala Ramaiah
Tamil Translation ஜங்கமரைப் பழித்து இலிங்கத்தைப்
பூசிக்கும் பக்தனின் நிலை என்னவோ, சிவனே
பழிக்கும், பூசிக்கும் பாதகச் செயல்
இதனைக் கேட்கக் கூடாது
“குருவின் குரு ஜங்கமன்” என்பது
கூடல சங்கனின் கூற்று ஆகும்.
Translated by: Smt. Kalyani Venkataraman, Chennai
Marathi Translation
जंगमनिंदा करीत लिंगपूजा करणारा भक्ताचे अंग कसले?
शिवशिवा, निंदा करीत पूजा करणाऱ्यांचे पाप ऐकवत नाही.
गुरुचा गुरु जंगम हे कूडलसंगमदेवाचे वचन आहे.
Translated by Shalini Sreeshaila Doddamani
ಶಬ್ದಾರ್ಥಗಳು ಅಗ್ಘವಣಿ = ಪೂಜೆ ಅಭಿಷೇಕಕ್ಕಾಗಿ ಉಪಯೋಗಿಸುವ ನೀರು; ಜಂಗಮ = ; ನಿಂದೆ = ; ಪಾತಕ = ;
ಕನ್ನಡ ವ್ಯಾಖ್ಯಾನ ಈ ವಚನದಲ್ಲಿ ಹೊಸದಾಗಿ ಗಮನಿಸಬೇಕಾದ ಮಾತೆಂದರೆ-“ಗುರುವಿನ ಗುರು ಜಂಗಮ” ಎಂಬುದು. ಬಸವಣ್ಣನವರ ಕಾಲಕ್ಕೆ ಹಿಂದೆ ಸಂಪ್ರದಾಯಸ್ಥ ಶಿವಭಕ್ತರ ಮನೆಗಳಲ್ಲಿ ಮಠಗಳಲ್ಲಿ ದೀಕ್ಷಾದಿಸಂದರ್ಭಗಳಲ್ಲಿ ಏನಾದರೊಂದು ನೆಪ ಮಾಡಿ-ಜಾತಿಜಂಗಮರೇ ಗುರುಗಳಾಗಿ ವಿಜೃಂಭಿಸುತ್ತಿದ್ದರು. ಬಸವಣ್ಣನವರು ಈ ಜಾತಿಜಂಗಮ ಶ್ರೇಣಿಯನ್ನು ನಿಷೇಧಿಸಿ-ಅರಿವುಳ್ಳವರು ಯಾರಾದರೂ ಗುರುವಾಗಿ ಶಿವಭಕ್ತಸಮೂಹದ ಅಕ್ಷರಾಭ್ಯಾಸದಲ್ಲಿ ಜ್ಞಾನಾರ್ಜನೆಯಲ್ಲಿ ಮುಕ್ತಿಸಾಧನೆಯಲ್ಲಿ ಸಹಾಯಕರಾಗಿರಬಹುದೆಂದು ವಿಧಿಸುವಂತಾಯಿತು. ಅಂಥ ಗುರುಗಳಿಗೂ ಗುರು ಈ ಜಂಗಮವೆಂಬುದು ಈ ವಚನದ ನಿರ್ದೇಶನ.
ಭಕ್ತರಿಗೆ ಗುರುಗಳಿಗೆ ಶರಣರಿಗೆ ಎಲ್ಲರಿಗೂ ಜಂಗಮವೇ ಗುರು.
ಜೈನಧರ್ಮದವರೊಡನೆ ಹೋಲಿಸಿ ಹೇಳುವುದಾದರೆ-ಭಕ್ತ ಗುರು ಲಿಂಗ ಶರಣ ಜಂಗಮವೆಂಬುವೇ ಬಸವಣ್ಣನವರ ಪಂಚಪರಮೇಷ್ಠಿಗಳು. ಜೈನಧರ್ಮದ ಪ್ರಕಾರ ಪಂಚಪರಮೇಷ್ಠಿಗಳೆಂದರೆ : 1 ಅರ್ಹಂತರು 2 ಸಿದ್ಧರು 3 ಆಚಾರ್ಯರು 4 ಉಪಾಧ್ಯಾಯರು 5 ಸರ್ವಸಾಧುಗಳು. ಶಿವಧರ್ಮೋಪಾಸಕ ಜನರಲ್ಲಿ ಜೈನಧರ್ಮೋಪಾಸಕ ಜನರಲ್ಲಿರುವಂತೆ ಅಸನ್ನಭವ್ಯ-ದೂರಭವ್ಯ-ಅಭವ್ಯವೆಂಬಂಥ ತಾರತಮ್ಯವಿಲ್ಲವಾಗಿ ಭಕ್ತರಿಗೆ ವಿಶೇಷ ಮಾನ್ಯತೆಯಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು