•  
  •  
  •  
  •  
Index   ವಚನ - 426    Search  
 
ಭಕ್ತನ ಭಕ್ತಸ್ಥಲ - ಲಿಂಗ-ಜಂಗಮ
ಅರಸನ ಕಂಡು ತನ್ನ ಪುರುಷನ ಮರೆದರೆ ಮರನೇರಿ ಕೈಬಿಟ್ಟಂತಾಯಿತ್ತಯ್ಯಾ! ಇಹಲೋಕಕ್ಕೆ ದೂರ, ಪರಲೋಕಕ್ಕೆ ದೂರ, ನಮ್ಮ ಕೂಡಲಸಂಗಮದೇವ ಜಂಗಮ ಮುಖಲಿಂಗವಾದ ಕಾರಣ.
Transliteration Arasana kaṇḍu tanna puruṣana maredare maranēri kaibiṭṭantāyittayyā! Ihalōkakke dūra, paralōkakke dūra, nam'ma kūḍalasaṅgamadēva jaṅgama mukhaliṅgavāda kāraṇa.
Manuscript
English Translation 2 If, seeing the king, one should forget One's husband, it's climbing a tree And letting go the hand! One's equally cut off From the world and the next! Because our Lord Kūḍala Saṅgama Is Liṅga with a Jaṅgama's face. Translated by: L M A Menezes, S M Angadi
Hindi Translation राजा को देख कोई अपने पति को भूले, तो पेड पर चढ़कर हाथ छोड़ने की भाँति है । वह इहलोक से दूर और परलोक से भी दूर होगी । इसलिए कि मम कूडलसंगमदेव जंगममुखी लिंग है॥ Translated by: Banakara K Gowdappa
Telugu Translation రాజును చూచి తన మగని మఱచిన చెట్టునెక్కి చెయితప్పినట్లగునయ్యా ఇహలోకమునకూ లేదు పరలోకమునకూ లేదు మా కూడల సంగమదేవుడు జంగమముఖ లింగుడయ్యె గాన. Translated by: Dr. Badala Ramaiah
Tamil Translation அரசனைக் கண்டு தன் கணவனை மறப்பின் மரத்திலேறி கைவிட்டதைப் போல ஆயிற்று இம்மைக்கும் தொலைவு, மறுமைக்கும் தொலைவு நம் கூடல சங்கமதேவன் ஜங்கமத்தின் முகமாக உள்ள இலிங்கமாக உள்ளான் ஐயனே! Translated by: Smt. Kalyani Venkataraman, Chennai
Marathi Translation साम्राटाला पाहता, पतीला जी विसरली चढूनि झाडावरी, सोडी हात लिंग पूजुनिया, जंगमाना विसरे इह पर अंतरे, खासा जाणा कूडलसंगमदेवा ! गुरु जंगम एक लिंगमुखी देख, मज- लागी अर्थ - राजाचे ऐश्वर्य त्याचा थाटमाट इ. ना भाळून आपल्या पतीला विसरणारी स्त्री इकडचीही राहत नाही. वा तिकडचीही राहत नाही. जसे झाडावर चढून आपले दोन्ही हात सोडल्याप्रमाणे तिची गती होते. त्याचप्रमाणं इष्टलिंगवर श्रद्धा ठेवणाऱ्यानी जंगममूर्तीस विसरल्यास ते इहलोकापासूनही वंचित होतात. व परलोकापासूनही दूर होतात. अशाची भक्ती अपूर्ण ठरते. म्हणून जंगमावर श्रद्धा ठेवून भ्रत्याचार करावा. कारण जंगमगुरू लिंगमुखी असतात Translated by Rajendra Jirobe, Published by V B Patil, Hirabaug, Chembur, Mumbai, 1983 राजाला पाहून आपल्या पुरुषाला विसरले तर झाडावर चढून हात सोडल्याप्रमाणे आहे देवा. इहलोकापासून दूर, परलोकापासून दूर ! जंगम लिंगमुखी असतात कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಇಹಲೋಕ = ; ಪರಲೋಕ = ;
ಕನ್ನಡ ವ್ಯಾಖ್ಯಾನ ಕುಂಕುಮ ಕಸ್ತೂರಿಯನ್ನು ಪೂಸಿಕೊಂಡು ಶೃಂಗಾರ ಮಾಡಿಕೊಂಡು ಆನೆಯನ್ನೇರಿಕೊಂಡು ತನ್ನ ಮನೆಯ ಮುಂದೆ ಮೆರವಣಿಗೆ ಹೋದ ಒಬ್ಬ ರಾಜಕುಮಾರನನ್ನು ಕಂಡ ಮರುಳಿಯೊಬ್ಬಳು-ಅಂದಿನಿಂದ ಗಂಡನನ್ನೇ ಕಡೆಗಣಿಸಿಬಿಟ್ಟಳು. ಸದಾಕಾಲ ಆ ರಾಜಕುಮಾರನನ್ನೇ ಧ್ಯಾನಮಾಡಲಾರಂಭಿಸಿದಳು. ರಾಜಕುಮರನಿಗೋ ಇವಳಂಥವರು ಸಾವಿರ ಜನ. ಅವನು ಅವಳನ್ನು ಹುಲ್ಲುಕಡ್ಡಿಗೂ ಸಮ ಮಾಡಲಿಲ್ಲ. ಅವಳ ಗಂಡ ಇನ್ನೊಬ್ಬಳನ್ನು ಮದುವೆಯಾದ. ಈ ಮರುಳಿಗೆ ಇತ್ತ (ಮನೆಯ) ಗಂಡನೂ ಇಲ್ಲ, ಅತ್ತ ರಾಜಕುಮಾರನೂ ಇಲ್ಲ. ಮತ್ತು ಮರವನ್ನು ಏರುವವನು ಉದ್ದಕ್ಕೂ ಆ ಮರವನ್ನು ಕೈಬಿಡಬಾರದು-ಬಿಟ್ಟರೆ ಬಿದ್ದು ಸಾಯುವನು. ಎಂಬ ಈ ಎರಡು ಉಪಮಾನಗಳಿಂದ ಕ್ರಮವಾಗಿ ಭಕ್ತನು ಜಂಗಮವನ್ನು ಬಿಟ್ಟು (ಕೇವಲ)ಲಿಂಗಾಸಕ್ತನಾಗಬಾರದು ಎಂದೂ, ಅವನನ್ನು ಸದಾ ಎಚ್ಚರಿಕೆಯಿಂದ ಆಶ್ರಯಿಸಿರಬೇಕೆಂದೂ ಹೇಳುತ್ತಿರುವರು ಬಸವಣ್ಣನವರು. (ಪುರುಷ : ಗಂಡ)

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು