ಜಂಗಮದ ಮನ-ಭಾವದಲ್ಲಿ ಭಕ್ತ(ನೆ) ಭೃತ್ಯನೆಂದು,
ಭಕ್ತನ ಮನ-ಭಾವದಲ್ಲಿ ಜಂಗಮ(ವೆ) ಕರ್ತನೆಂದು ಇದ್ದ ಬಳಿಕ,
ʼಬಂದುದು, ಬಾರದು, ಇದ್ದುದು, ಹೋಯಿತ್ತೆಂಬʼ
ಸಂದೇಹವಿಲ್ಲದಿರಬೇಕು.
ಹೋಯಿತ್ತೆಂಬ ಗುಣವುಳ್ಳನ್ನಕ್ಕ
ನಿಮಗೆ ದೂರ, ನಿಮ್ಮವರಿಗೆ ಮುನ್ನವೆ ದೂರ!
ಶಿವಾಚಾರಕ್ಕಲ್ಲಿಂದತ್ತ ದೂರ!!
ಜಂಗಮದ ಗಳಗರ್ಜನೆ,
ಜಂಗಮದ ಕೋಳಾಟಕೆ ಸೈರಿಸದಿದ್ದರೆ
ನೀನಂದೇ ಮೂಗ ಕೊಯಿ, ಕೂಡಲಸಂಗಮದೇವಾ.
Transliteration Jaṅgamada mana-bhāvadalli bhakta(ne) bhr̥tyanendu,
bhaktana mana-bhāvadalli jaṅgama(ve) kartanendu idda baḷika,
ʼbandudu, bāradu, iddudu, hōyitembaʼ
sandēhavilladirabēku.
Hōyittemba guṇavuḷḷannakka
nimage dūra, nim'mavarige munnave dūra!
Śivācāradallinda dūra!!
Jaṅgamada gaḷagarjane,
jaṅgamada kōlāṭakke sairisadiddare
nīnandē mūga koyi, kūḍalasaṅgamadēvā.
Manuscript
English Translation 2 When a Jaṅgama is convinced
That a bhakta is his servitor,
And a bhakta is convinced
The Jaṅgama is his lord,
One must dismiss the doubt
Of 'come' and 'come not', is and 'is gone'.
As long as there's the sense of 'gone away',
I am cut off
From Thee and farther from Thine own,
And farther still from the Śiva faith!
If I'm unable to brook
The Jaṅgama 's going and his standing still,
His bluster and his antics too,
Do Thou, O Kūḍala Saṅgama Lord,
Cut off my nose at once!
Translated by: L M A Menezes, S M Angadi
Hindi Translation जंगम के मन-भाव में जब भक्त ही भृत्य है,
भक्त के मन-भाव में जंगम ही कर्ता है,
तब आने, न आने रहने व चले जाने का
संदेह नहीं होना चाहीए ।
‘चला गया’ गुण रहने तक
मैं तुुमसे दूर, तुम्हारे लोगों से पहले ही दूर और
शिवाचार से भी दूर रहूँगा ।
जंगम के गमन का विस्तार, जंगम की स्थिति
जंगम गर्जन और जंगम का बलात्कार
यदि न सहूँ, उसी दिन मेरी नाक काटो
कूडलसंगमदेव ॥
Translated by: Banakara K Gowdappa
Telugu Translation జంగమ మనోభావమున
భక్తుని భృత్యుడనుచుండునయ్యా
భక్తుని మనోభావమున
జంగముడు కర్తయని నిల్చె నేని
వచ్చినది రానిది ఉన్నది పోయినదను
సందేహమునకు తావు లేదు
పోయెనను భావమున్నంతదాక
నీకు దూరము నీ వారికి అంతకన్నా దూరము
శివాచారమున కంతంత దూరము
జంగముడు నడచు నడత
జంగముడు నిలుచు నిలువు
జంగముని గళగర్జన
జంగముని కోపాటోపము
సై రింపకున్న వెంటనే ముక్కు
కోయును కూడల సంగమదేవుడు
Translated by: Dr. Badala Ramaiah
Tamil Translation ஜங்கமனின் மனத்தில் பக்தன்
பக்தனின் மனத்தில் ஜங்கமன் உடையன்
என இருக்கும் பொழுது, வந்தது வரவில்லை
இருந்தது அகன்றது என்னும் ஐயம் இருத்தல் கூடாது
அகன்றது என்னும் இயல்பு உள்ளவரை
உமக்குத் தொலைவு, உன்னைச் சேர்ந்தோருக்கும்
தொலைவு, சிவநெறிக்கும் தொலைவு
ஜங்கமரின் ஆர்ப்பரிப்பை ஜங்கமரின் கோலாகலத்தைப்
பொறுத்துக் கொள்ளவில்லை எனின், நீ அன்றே
மூக்கைக் கொய்வாய், கூடல சங்கம தேவனே.
Translated by: Smt. Kalyani Venkataraman, Chennai
Marathi Translation
जंगमाच्या मन-भावात भक्तभृत्य आहे.
भक्ताच्या मन-भावात जंगमकर्ता आहे असे असता,
आला-न आला, राहिला-न राहिला संदेह असू नये.
`हातातून निघून गेला` असा भाव मनी असेपर्यंत
तुमच्यापासून दूर, तुमच्या शरणापासून खूप दूर.
शिवाचारासाठी खूपच दूर, जंगमाचे आचार-विचार,
जंगमाचे व्यक्तीमत्त्व, जंगमाचा गोंधळ,
जंगमाची सक्ती, सहन केले नाही तर
तू माझे नाक कापावे कूडलसंगमदेवा,
Translated by Shalini Sreeshaila Doddamani
ಶಬ್ದಾರ್ಥಗಳು ಕರ್ತ = ; ಜಂಗಮ = ; ಭಾವ = ; ಭೃತ್ಯ = ; ಶಿವಾಚಾರ = ; ಸಂದೇಹ = ;
ಕನ್ನಡ ವ್ಯಾಖ್ಯಾನ ಇದೊಂದು ಖೊಟ್ಟಿ ವಚನ. ಈ ವಚನದಲ್ಲಿ ಪ್ರಸ್ತಾಪಿಸಿರುವ ಜಂಗಮವು ಭಕ್ತರಿಂದ ವಸೂಲಿ ಮಾಡುವುದಕ್ಕೋಸ್ಕರ ಚರಮೂರ್ತಿಯಾಗುತ್ತಾನೆ. ಅವನ ಮನಸ್ಸಿನಲ್ಲಿರುವುದು ಈ ಭಕ್ತರೆಲ್ಲಾ ತನ್ನ ಭೃತ್ಯರೆಂದು ಮತ್ತು ಅವನು ತನ್ನನ್ನು ಕರ್ತ(ಸಾಕ್ಷಾತ್ಶಿವ)ನೆಂದು ಭಕ್ತರೆಲ್ಲಾ ಭಾವಿಸಬೇಕೆಂದು ನಿರೀಕ್ಷಿಸುತ್ತಲೂ ಇರುವನು. ಹೀಗಿರುವಲ್ಲಿ ಯಾರಾದರೂ ಭಕ್ತರು ಕೊಟ್ಟಿದ್ದು ಏನು ಎಷ್ಟು, ಕೊಡದಿದ್ದುದು ಏನು ಎಷ್ಟು ಎಂಬ ಲೆಕ್ಕ ಇವನಲ್ಲಿರುತ್ತದೆ. ಇತ್ತ ಭಕ್ತನಲ್ಲಿ ಈ ಜಂಗಮನಿಗೇನು ಕೊಟ್ಟೆ ಎಷ್ಟು ಕೊಟ್ಟೆ, ತನ್ನಲ್ಲಿದ್ದುದೆಷ್ಟು ಉಳಿದಿರುವುದೆಷ್ಟು ಎಂಬ ಲೆಕ್ಕವಿರುತ್ತದೆ. ಅಷ್ಟೇ ಅಲ್ಲ-ಇಂಥ ವ್ಯವಸ್ಥೆಯಲ್ಲಿ ಬಂದಿತು ಬರಲಿಲ್ಲವೆಂದು ಜಂಗಮನೂ, ಇದ್ದಿತು ಹೋಯಿತು ಎಂದು ಭಕ್ತನೂ ಇಮ್ಮುಖವಾಗಿ ಚಿಂತಿಸುತ್ತಲೇ ಇರುವರು. ಜಂಗಮನಾಗಲಿ ಭಕ್ತನಾಗಲಿ ಹೀಗೆ ಲೇವಾದೇವಿಯಲ್ಲಿ ಪರಮಾರ್ಥವನ್ನು ಸಾಧಿಸುವರೆಂದು ಬಸವಣ್ಣನವರು ಹೇಳಿರುವರೆಂದರೆ-ಇದು ಬಸವಣ್ಣನವರ ನಿಜವಚನವಲ್ಲ.
ಜಂಗಮನು ವಸೂಲಿ ಮಾಡಲು ಉಪಕ್ರಮಿಸಿದ್ದು ನೆಲೆನಿಂತದ್ದು ಮನೆಮಠ ಕಟ್ಟಿಕೊಂಡಿದ್ದು ಬಸವೋತ್ತರ ಕಾಲದಲ್ಲಿ. ಮತ್ತು ಜಂಗಮನೊಬ್ಬನು ಈ ವಚನವನ್ನು ಕಟ್ಟಿ ಸೇರಿಸಲು ಕಾರಣವೇನೆಂದರೆ-ವಸೂಲಿ ಕಾಲದಲ್ಲಿ ಆ ಜಂಗಮರು ಏನು ತೊಂದರೆಯನ್ನು ಕೊಟ್ಟರೂ ಭಕ್ತರೆನಿಸಿಕೊಂಡವರು ಸೈ ರಿಸಿಕೊಳ್ಳಬೇಕು. ಪ್ರತಿಭಟಿಸಬಾರದು ಎಂದು ಧರ್ಮದ ಹೆಸರಿನಲ್ಲಿ ಒತ್ತಾಯಿಸುವುದಕ್ಕಾಗಿ (ನೋಡಿ ವಚನ 231)
ಇಷ್ಟು ಘೋರವಾದ ವಚನವು ಆತ್ಮ ಸಂಬೋಧನೆಯ ರೂಪದಲ್ಲಿರದೆ ಆಜ್ಞಾರೂಪದಲ್ಲಿರುವುದು ಸಹಜವೇ ಆಗಿದೆ-ಕೋಟಾ ವಚನಕಾರ ಭಾವುಕನಲ್ಲ ಮತ್ತು ಭಕ್ತರನ್ನು ಸ್ವಲಾಭಕ್ಕಾಗಿ ಹಿಂಸಿಸುವ ಅಧಿಕಾರವನ್ನು ತನಗೆ ಬಸವಣ್ಣನವರು ಕೊಟ್ಟಿರುವರೆಂದು ಸಂಯೋಜಿಸಿರುವ ಸುಳ್ಳುಗಾರ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು